ರಾಜ್ಯ

ಲಲಿತಕಲಾ ಅಕಾಡೆಮಿ ಪ್ರಶಸ್ತಿ ಪಟ್ಟಿ ಬಿಡುಗಡೆ; ಮಾ.21ಕ್ಕೆ ಕಲಾಕ್ಷೇತ್ರದಲ್ಲಿ ಪ್ರಶಸ್ತಿ ಪ್ರಧಾನ

Raghavendra Adiga

ಬೆಂಗಳೂರು: ಕರ್ನಾಟಕ ಲಲಿತಕಲಾ ಅಕಾಡೆಮಿಯ ಪ್ರಸ್ತುತ ಸಾಲಿನ ಗೌರವ ಪ್ರಶಸ್ತಿ ಹಾಗೂ 48ನೇ ವಾರ್ಷಿಕ ಕಲಾ ಬಹುಮಾನ ಆಯ್ಕೆ ಪಟ್ಟಿ ಪ್ರಕಟವಾಗಿದ್ದು, ಮಾರ್ಚ್ 21 ರಂದು ನಗರದ ರವೀಂದ್ರ ಕಲಾಕ್ಷೇತ್ರ ಸಭಾಂಗಣದಲ್ಲಿ ಪ್ರದಾನ ಮಾಡಲಾಗುವುದೆಂದು ಕರ್ನಾಟಕ ಲಲಿತಕಲಾ ಅಕಾಡೆಮಿ ಅಧ್ಯಕ್ಷ ಡಿ.ಮಹೇಂದ್ರ ತಿಳಿಸಿದರು.

ನಗರದಲ್ಲಿಂದು ಕನ್ನಡ ಭವನದ ಲಲಿತಕಲಾ ಅಕಾಡೆಮಿ ಸಭಾಂಗಣದಲ್ಲಿ ಗೌರವ ಮತ್ತು ವಾರ್ಷಿಕ ಪ್ರಶಸ್ತಿ ಆಯ್ಕೆ ಪಟ್ಟಿಯನ್ನು  ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಗೌರವ ಪ್ರಶಸ್ತಿ: ಹಿರಿಯ ಕಲಾವಿದರಾದ
ಪ್ರಕಾಶ ಗಡ್ಜರ್( ಕಲಬುರ್ಗಿ), ಬಿ.ಆರ್. ಕೊರ್ತಿ(ದಾವಣಗೆರೆ), ಜಿ.ಎಂ.ಹೆಗಡೆ ತಾರಗೋಡ ( ಶಿರಸಿ) ಗೌರವ ಪ್ರಶಸ್ತಿ ಗೆ ಆಯ್ಕೆಯಾಗಿದ್ದು,  ತಲಾ 50 ಸಾವಿರ ನಗದು, ಸ್ಮರಣಿ ಪ್ರಶಸ್ತಿ ಒಳಗೊಂಡಿದೆ.

ಅದೇ ರೀತಿಯಲ್ಲಿ, 48ನೇ ವಾರ್ಷಿಕ ತಲಾ ಬಹುಮಾನಕ್ಕೆ ಓಂಕಾರ ಕಲ್ಲಪ್ಪ ಮೇತ್ರೆ (ಬೀದರ್ ), ತಿಪ್ಪಣ್ಣ ಎಸ್.ಪೂಜಾ (ಕಲಬುರ್ಗಿ), ಎಂ.ಎಸ್‌.ಲಿಂಗಾರಾಜು (ಚಿಕ್ಕಮಗಳೂರು),ವಿನಾಯಕ ರಾ.ಚಿಕ್ಕೋಡಿ(ಮಹಾಲಿಂಗಪೂರ), ಭರತ ಎಂ.ಲದ್ದಿಯವರ(ಧಾರವಾಡ). ಕೆ.ಎಸ್.ಬಸವರಾಜು(ತುಮಕೂರು), ಶಿವಕಾಂತ ಶೇಖರ(ಬೆಂಗಳೂರು), ವಿನಾಯಕ ಎನ್.ಹೊಸೂರ(ಬಾಗಲಕೋಟ), ವಿಜಯ ಎಸ್.ನಾಗವೇಕರ್(ಬೆಂಗಳೂರು), ಗಣೇಶ್ ಪಿ.ದೊಡ್ಡಮನಿ(ಬೆಂಗಳೂರು) ಆಯ್ಕೆಯಾಗಿದ್ದು, ತಲಾ 25 ಸಾವಿರ ನಗದು ಬಹುಮಾನ, ಫಲಕ ನೀಡಿ, ಗೌರವಿಸಲಾಗುವುದೆಂದು ಅವರು ವಿವರಿಸಿದರು.

48ನೇ ವಾರ್ಷಿಕ ಕಲಾ ಪ್ರದರ್ಶನ ಮತ್ತು ಸ್ಪರ್ಧೆಯಲ್ಲಿ ರಾಜ್ಯದ ಬಹುತೇಕ ಜಿಲ್ಲೆಗಳಿಂದ 367 ಕಲಾವಿದರ 605 ಕಲಾಕೃತಿಗಳು ಹಾಗೂ ಛಾಯಾಚಿತ್ರಗಳು ಸ್ವೀಕೃತವಾಗಿದ್ದು, ಮೊದಲ ಹಂತದಲ್ಲಿ 68 ಉತ್ತಮ ಕಲಾಕೃತಿಗಳನ್ನು ಪ್ರದರ್ಶನಕ್ಕೆ ಆಯ್ಕೆ ಮಾಡಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಅಕಾಡೆಮಿ ರಿಜಿಸ್ಟರ್ ಬಸವರಾಜ ಹೂಗಾರ್ ಉಪಸ್ಥಿತರಿದ್ದರು.

ಲಲಿತ ಕಲಾ ಅಕಾಡೆಮಿಗೆ ಬಜೆಟ್ ನಲ್ಲಿ ಹೆಚ್ಚುವರಿ ಅನುದಾನಕ್ಕೆ ಮನವಿ

ರಾಜ್ಯ ಸರ್ಕಾರದ ಪ್ರಸ್ತುತ ಸಾಲಿನ ಆಯವ್ಯಯದಲ್ಲಿ ಅಕಾಡೆಮಿಗೆ ಹೆಚ್ಚುವರಿ ಅನುದಾನ ನೀಡಬೇಕೆಂದು ಕರ್ನಾಟಕ ಲಲಿತಕಲಾ ಅಕಾಡೆಮಿ ಅಧ್ಯಕ್ಷ ಡಿ.ಮಹೇಂದ್ರ ಮನವಿ ಮಾಡಿದ್ದಾರೆ.

ನಗರದ ಲಲಿತಕಲಾ ಅಕಾಡೆಮಿ ಸಭಾಂಗಣದಲ್ಲಿ ಗೌರವ ಮತ್ತು ವಾರ್ಷಿಕ ಪ್ರಶಸ್ತಿ ಆಯ್ಕೆ ಪಟ್ಟಿಯನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದ ಅವರು, ಹಿಂದಿನ ಸಾಲಿನಲ್ಲಿ ಅಕಾಡೆಮಿಗೆ ಕೇವಲ 80 ಲಕ್ಷ ರೂ.ಅನುದಾನ ನೀಡಲಾಗಿತ್ತು. ಆದರೆ, ನಾವು ಅಧಿಕಾರಕ್ಕೆ ಬಂದ ವೇಳೆಗೆ ಅರ್ಧದಷ್ಟು ಹಣ ಖಾಲಿಯಾಗಿತ್ತು. ಹೀಗಾಗದೆ, ಈ ಬಾರಿಯ ಬಜೆಟ್ ನಲ್ಲಿ ರಾಜ್ಯ ಸರ್ಕಾರ 1 ಕೋಟಿಗೂ ಅಧಿಕ ಮೊತ್ತ ಅನುದಾನ ನೀಡಿದರೆ ಮಾತ್ರ ಅಕಾಡೆಮಿ ಕಾರ್ಯ ಚಟುವಟಿಕೆಗಳು ಚುರುಕುಗೊಳ್ಳಲಿದೆ ಎಂದು ಹೇಳಿದರು.

ರಾಜ್ಯ ವ್ಯಾಪ್ತಿಯ ಅಂಗನವಾಡಿ ಕೇಂದ್ರಗಳಲ್ಲಿ ಕಲಾವಿದರನ್ನು ನೇಮಿಸಿ, ಕಲಾಶಿಕ್ಷಣ ನೀಡುವ ಸಂಬಂಧ ಗಂಭೀರ ಚರ್ಚೆ ನಡೆದಿದ್ದು, ಈ ಬಗ್ಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯೊಂದಿಗೆ ರೂಪು ರೇಷೆಗಳನ್ನು ಸಿದ್ಧಪಡಿಸಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದರು.

SCROLL FOR NEXT