ಔತಣಕೂಟದಲ್ಲಿ ಭಾಗಿಯಾದ ಸಿಎಂ ಯಡಿಯೂರಪ್ಪ 
ರಾಜ್ಯ

ಏಕಾಂಗಿಯಾಗಿ ದೆಹಲಿ ಭೇಟಿ:  ಟ್ರಂಪ್ ಕೈಕುಲುಕಿ, ಔತಣಕೂಟದಲ್ಲಿ ಭಾಗಿಯಾದ ಸಿಎಂ ಯಡಿಯೂರಪ್ಪ

2 ದಿನಗಳ ಭಾರತ ಪ್ರವಾಸ ಕೈಗೊಂಡಿದ್ದ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಮಂಗಳವಾರ ನವದೆಹಲಿಯ ರಾಷ್ಟ್ರಪತಿ ಭವನದಲ್ಲಿ ಔತಣಕೂಟ ಏರ್ಪಡಿಸಿದ್ದರು. ರಾಷ್ಟ್ರಪತಿಗಳ ಆಹ್ವಾನದ ಮೇಲೆಗೆ ರಾಜಧಾನಿ ದೆಹಲಿಗೆ ಏಕಾಂಗಿಯಾಗಿ ಭೇಟಿ ನೀಡಿದ ಸಿಎಂ ಯಡಿಯೂರಪ್ಪ ಅವರು, ಟ್ರಂಪ್ ಅವರಿಗೆ ಹಸ್ತಲಾಘವ ಮಾಡಿದರು. 

ನವದೆಹಲಿ: 2 ದಿನಗಳ ಭಾರತ ಪ್ರವಾಸ ಕೈಗೊಂಡಿದ್ದ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಮಂಗಳವಾರ ನವದೆಹಲಿಯ ರಾಷ್ಟ್ರಪತಿ ಭವನದಲ್ಲಿ ಔತಣಕೂಟ ಏರ್ಪಡಿಸಿದ್ದರು. ರಾಷ್ಟ್ರಪತಿಗಳ ಆಹ್ವಾನದ ಮೇಲೆಗೆ ರಾಜಧಾನಿ ದೆಹಲಿಗೆ ಏಕಾಂಗಿಯಾಗಿ ಭೇಟಿ ನೀಡಿದ ಸಿಎಂ ಯಡಿಯೂರಪ್ಪ ಅವರು, ಟ್ರಂಪ್ ಅವರಿಗೆ ಹಸ್ತಲಾಘವ ಮಾಡಿದರು. 

ಟ್ರಂಪ್ ಗೌರವಾರ್ಥ ಮಂಗಳವಾರ ರಾತ್ರಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಔತಣಕೂಟ ಏರ್ಪಡಿಸಿದ್ದರು. ರಾಷ್ಟ್ರಪತಿ ಭವನದ ದರ್ಬಾರ್ ಹಾಲ್ ನಲ್ಲಿ ನಡೆದ ಔತಣಕೂಟಕ್ಕೆ ತಮ್ಮ ಪತ್ನಿ ಮೆಲಾನಿಯಾ ಜೊತೆಗೆ ಆಗಮಿಸಿದ್ದ ಟ್ರಂಪ್ ಅವರನ್ನು ಕೋವಿಂದ್ ದಂಪತಿಗಳು ಸ್ವಾಗತಿದರು. 

ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಸೇರಿ ಹಲವು ಗಣ್ಯಾತಿಗಣ್ಯರು ಹಾಗೂ ಅಧಿಕಾರಿಗಳು ಭಾಗವಹಿಸಿದ್ದರು. ಔತಣಕೂಟದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರೂ ಕೂಡ ಭಾಗಿಯಾಗಿದ್ದರು. 

ಸಾಮಾನ್ಯವಾಗಿ ಯಡಿಯೂರಪ್ಪ ಅವರು ಯಾವುದೇ ಕಾರ್ಯಕ್ರಮಕ್ಕೆ ಭೇಟಿ ನೀಡಬೇಕಾದರೂ ಅಧಿಕಾರಿಗಳು ಹಾಗೂ ತಮ್ಮ ಪುತ್ರ ಬಿ.ವೈ ವಿಜಯೇಂದ್ರ ಅವರನ್ನು ಜೊತೆಗಿರಿಸಿಕೊಳ್ಳುತ್ತಿದ್ದರು. ಆದರೆ, ಈ ಬಾರಿ ಯಾರನ್ನೂ ತಮ್ಮೊಂದಿಗೆ ಕರೆಯದೆಯೇ ವಿಶೇಷ ಅಧಿಕಾರಿಯೊಬ್ಬರೊಂದಿಗೆ ದೆಹಲಿಗೆ ತೆರಳಿ ಔತಣಕೂಟದಲ್ಲಿ ಭಾಗಿದ್ದಾರೆ. 

ದೆಹಲಿಗೆ ಹೋಗಿದ್ದರೂ ಕೂಡ ನಾವು ಕರ್ನಾಟಕ ಭವನದಲ್ಲಿ ಕಾಯಬೇಕಿತ್ತು. ತೆರಿಗೆ ಕಟ್ಟುವವರ ಹಣವನ್ನೇಕೆ ಸುಖಾಸುಮ್ಮನೆ ವ್ಯರ್ಥ ಮಾಡುವುದು. ದೆಹಲಿಗೆ ತೆರಳಲು ಈ ತೆರಿಗೆ ಹಣವನ್ನು ವ್ಯಯಿಸಬೇಕಿತ್ತು. ನಾವು ಹಣವನ್ನು ಉಳಿಸುತ್ತಿದ್ದೇವೆಂದು ಯಡಿಯೂರಪ್ಪ ಕಚೇರಿಯ ಸಿಬ್ಬಂದಿಯೊಬ್ಬರು ಮಾಹಿತಿ ನೀಡಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್

SIR ವಿರುದ್ಧ ಕಾಂಗ್ರೆಸ್ ಪ್ರತಿಭಟನೆ: ಡಿಎಂಕೆ ಯು-ಟರ್ನ್!

ಗ್ರಾಹಕರಿಗೆ ನೆಮ್ಮದಿ: ಕಟಾವಿಗೆ ಬಂದ ಖಾರಿಫ್ ಬೆಳೆ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಈರುಳ್ಳಿ ದರ ಕುಸಿತ ಸಾಧ್ಯತೆ, 2 ಲಕ್ಷ ಕ್ವಿಂಟಾಲ್‌ ಪೂರೈಕೆ!

We’re getting married! ನಾವು ಮದುವೆ ಆಗುತ್ತಿದ್ದೇವೆ: ಕೊನೆಗೂ ಭಾವಿ ಪತಿ ಜತೆ ಗುಡ್ ನ್ಯೂಸ್ ನೀಡಿದ ನಟಿ ಸ್ಪಂದನಾ