ರಾಜ್ಯ

ಕಳ್ಳತನ ಮಾಡಲು ಮನೆಗೆ ನುಗ್ಗಿ, ಗಡದ್ದಾಗಿ ನಿದ್ದೆ ಮಾಡಿ ಸಿಕ್ಕಿಬಿದ್ದ! 

Srinivas Rao BV

ಮಂಗಳೂರು: ವಯಸ್ಕರಿಗೆ 7-8 ಗಂಟೆ ನಿದ್ದೆ ಅಗತ್ಯ ಎನ್ನುತ್ತದೆ ಸಂಶೋಧನೆ, ದಕ್ಷಿಣ ಕನ್ನಡದ ಕಳ್ಳನೊಬ್ಬ ಇದನ್ನು ಗಂಭೀರವಾಗಿ ಪರಿಗಣಿಸಿ, ಕಳ್ಳತನ ಮಾಡಲು ಹೋಗಿ ಗಡದ್ದಾಗಿ ನಿದ್ದೆ ಮಾಡಿದ್ದಾನೆ. 

ಸಾಮಾನ್ಯವಾಗಿ ಕಳ್ಳರು ಮನೆಗೆ ನುಗ್ಗಿದಾಗ ಕಳ್ಳತನ ಮುಗಿಸಿ ಪರಾರಿಯಾಗುತ್ತಾರೆ. ಆದರೆ ನ್ಯೂಸ್ ಮಿನಿಟ್ ವರದಿಯ ಪ್ರಕಾರ ಈ ಕಳ್ಳ ಕಳ್ಳತನ ಮಾಡಿ ಪರಾರಿಯಾಗುವ ಬದಲು ಲಿವಿಂಗ್ ರೂಮ್ ನಲ್ಲಿ ಗಡದ್ದಾಗಿ ನಿದ್ದೆ ಹೊಡೆದಿದ್ದಾನೆ. 

ಬೆಳಗೆದ್ದು ಲಿವಿಂಗ್ ರೂಮ್ ಗೆ ಬಂದ ಮನೆಯ ಮಾಲಿಕ ಸುದರ್ಶನ್ ಸೋಫಾ ಮೇಲೆಯೇ ನಿದ್ದೆ ಮಾಡುತ್ತಿದ್ದ ಕಳ್ಳನನ್ನು ನೋಡಿ ಆತನನ್ನು ಕೋಲಿನಿಂದ ಕೋಲಿನಿಂದ ಹೊಡೆದು ಎಬ್ಬಿಸಿ ಉಪ್ಪಿನಂಗಡಿಯ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ. ಬಂಧಿತ ಕಳ್ಳ ಬಿಹಾರದ ಮಜಿಪುರ ಜಿಲ್ಲೆಯ ಅನಿಲ್ ಸಹಾನಿ. 

ಮನೆಯ ಮೇಲ್ಛಾವಣಿಯನ್ನು ತೆಗೆದು ಒಳ ನುಸುಳಿದ್ದ ಕಳ್ಳ ಟಿವಿ ಸ್ಟ್ಯಾಂಡ್ ಮೇಲಿದ್ದ ’ಬೀಗದ ಕೈ’ಯನ್ನು ತೆಗೆದುಕೊಂಡ ನಂತರ ನಿದ್ದೆಗೆ ಜಾರಿದ್ದಾನೆ. ಅನಿಲ್ ವಿರುದ್ಧ ಕಳ್ಳತನದ ಯತ್ನ ಪ್ರಕರಣ ದಾಖಲಿಸಲಾಗಿದೆ. 

SCROLL FOR NEXT