ಸಂಗ್ರಹ ಚಿತ್ರ 
ರಾಜ್ಯ

ಬೆಳಗ್ಗೆ ವರ್ಗಾವಣೆ ರದ್ದು, ಸಂಜೆ ಐಪಿಎಸ್ ಅಧಿಕಾರಿ ಇಶಾ ಪಂತ್ ಮತ್ತೆ ವರ್ಗಾವಣೆ!

ಹಿರಿಯ ಐಪಿಎಸ್​ ಅಧಿಕಾರಿ ಇಶಾ ಪಂತ್ ಅವರ ವರ್ಗಾವಣೆ ಆದೇಶವನ್ನು ರದ್ದುಗೊಳಿಸಿದ ಕೆಲವೇ ಗಂಟೆಗಳ ಅವಧಿಯಲ್ಲಿ ಅವರನ್ನು ಮತ್ತೆ ವರ್ಗಾವಣೆ ಮಾಡಲಾಗಿದೆ ಎಂದು ತಿಳಿದುಬಂದಿದೆ.

ಬೆಂಗಳೂರು: ಹಿರಿಯ ಐಪಿಎಸ್​ ಅಧಿಕಾರಿ ಇಶಾ ಪಂತ್ ಅವರ ವರ್ಗಾವಣೆ ಆದೇಶವನ್ನು ರದ್ದುಗೊಳಿಸಿದ ಕೆಲವೇ ಗಂಟೆಗಳ ಅವಧಿಯಲ್ಲಿ ಅವರನ್ನು ಮತ್ತೆ ವರ್ಗಾವಣೆ ಮಾಡಲಾಗಿದೆ ಎಂದು ತಿಳಿದುಬಂದಿದೆ.

ಈ ಕುರಿತಂತೆ ಮಾಧ್ಯಮವೊಂದು ವರದಿ ಮಾಡಿದ್ದು, ಐಪಿಎಸ್ ಅಧಿಕಾರಿ ಇಶಾ ಪಂತ್ ಅವರನ್ನು ಮತ್ತೆ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ನೀಡಿದೆ ಎಂದು ಹೇಳಲಾಗಿದೆ. ಆ ಮೂಲಕ ಕಳೆದ ಎರಡು ದಿನಗಳ ಅಂತರದಲ್ಲಿ  ಇಶಾ ಪಂತ್ ಅವರನ್ನು ಎರಡು ಬಾರಿ ವರ್ಗಾವಣೆ ಮಾಡಲಾಗಿದೆ. ಫೆಬ್ರವರಿ 26 ರಂದು ಆಗ್ನೇಯ ವಿಭಾಗದ ಡಿಸಿಪಿ ಹುದ್ದೆಯಿಂದ ಸಿಐಡಿ, ಎಸ್​ಪಿಯಾಗಿ ವರ್ಗಾವಣೆ ಮಾಡಲಾಗಿತ್ತು.

ಈ ವರ್ಗಾವಣೆಗೆ ಇಂದು ಬೆಳಗ್ಗೆ ರಾಜ್ಯ ಸರ್ಕಾರ ತಡೆ ನೀಡಿ, ಆಗ್ನೇಯ ವಿಭಾಗದ ಡಿಸಿಪಿಯಾಗಿಯೇ ಇರಲು ಆದೇಶ ನೀಡಿತ್ತು. ಆದರೆ ಮಧ್ಯಾಹ್ನದ ವೇಳೆಗೆ ಮತ್ತೆ ಐಶಾ ಪಂತ್ ಅವರನ್ನು, ಬೆಂಗಳೂರು ಸಿಟಿಯ ಕಮಾಂಡೋ ಸೆಂಟರ್ ಡಿಸಿಪಿಯಾಗಿ ವರ್ಗಾವಣೆ ಮಾಡಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

ಇನ್ನು ಆಗ್ನೇಯ ವಿಭಾಗ ಡಿಸಿಪಿಯಾಗಿ ಜೋಶಿ ಶ್ರೀನಾಥ್ ಮಹದೇವ್ ನೇಮಕ ಮಾಡಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕರ್ನಾಟಕ ಸೇರಿ ದೇಶಾದ್ಯಂತ Pakನ ISI ಬೆಂಬಲಿತ ಗ್ಯಾಂಗಸ್ಟರ್ ಶಹಜಾದ್ ಭಟ್ಟಿ ಜಾಲದ 200ಕ್ಕೂ ಹೆಚ್ಚು ಜನರ ಬಂಧನ: ಅಮಿತ್ ಶಾ

'ನಾನು ಎಂದಿಗೂ ವಂದೇ ಮಾತರಂ ಹಾಡುವುದಿಲ್ಲ': 'ನಮ್ಮ ಧರ್ಮ ಒಪ್ಪಲ್ಲ'; Congress ಕಾಂಗ್ರೆಸ್ ಸಂಸದ ಇಮ್ರಾನ್ ಮಸೂದ್

D Boss, D Boss ಜೈಕಾರಕ್ಕೆ ಗರಂ: ನಿಮ್ಮಂತವರಿಂದಲೇ ತೊಂದರೆ ಆಗ್ತೀರೋದು, ಅಭಿಮಾನಿಗಳಿಗೆ ವಿಜಯಲಕ್ಷ್ಮಿ ಬುದ್ಧಿ ಮಾತು, Video!

ಶಿವಮೊಗ್ಗ: ನಡು ರಸ್ತೆಯಲ್ಲೇ ಕಬ್ಬಿಣದ ರಾಡ್ ನಿಂದ ವ್ಯಕ್ತಿಯ ಮೇಲೆ ಮಾರಣಾಂತಿಕ ಹಲ್ಲೆ, Video ವೈರಲ್ ಬಳಿಕ ಆರೋಪಿ ಬಂಧನ!

ಬಿಜೆಪಿ ರಾಷ್ಟ್ರಾಧ್ಯಕ್ಷ ನಿತಿನ್ ನಬಿನ್ ನ್ಯೂ ಟೀಂ ಘೋಷಣೆ; ರಾಮ್ ಮಾಧವ್, ಸ್ಮೃತಿ ಜೊತೆ ಕರ್ನಾಟಕದ ಇಬ್ಬರಿಗೆ ಪ್ರಮುಖ ಸ್ಥಾನ!