ರಾಜ್ಯ

ನಿಸ್ವಾರ್ಥ ಸೇವೆ ಸಲ್ಲಿಸಿದರೆ ಮಾತ್ರ ಸಮೃದ್ದ ಭಾರತದ ನಿರ್ಮಾಣ ಸಾಧ್ಯ; ವಜೂಭಾಯಿ ವಾಲಾ

Srinivasamurthy VN

ಬೆಂಗಳೂರು: ಸಾಮಾಜಿಕ ಸೇವೆಗಳಲ್ಲಿ ತೊಡಗಿಸಿಕೊಂಡವರು ಜಾತಿ ಮತ ಬೇಧವನ್ನು ಬದಿಗಿರಿಸಿ, ನಿಸ್ವಾರ್ಥ ಮನೋಭಾವದಿಂದ ಕೆಲಸ ನಿರ್ವಹಿಸಿದರೆ ಮಾತ್ರ ಶಕ್ತಿಶಾಲಿ ದೇಶದ ನಿರ್ಮಾಣ ಸಾಧ್ಯ ಎಂದು ರಾಜ್ಯಪಾಲ ವಜೂಬಾಯಿ ರೂಢ ವಾಲಾ ಹೇಳಿದ್ದಾರೆ. 

ರಾಜಭವನದಲ್ಲಿ  ಶನಿವಾರ ನಡೆದ  ಭಾರತ್ ಮತ್ತು ಸ್ಕೌಟ್ಸ್‌ನ ವಿದ್ಯಾರ್ಥಿಗಳಿಗೆ ವಿವಿಧ ಪುರಸ್ಕಾರ ಪ್ರಮಾಣ ಪತ್ರಗಳನ್ನು ವಿತರಣಾ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅವರು, ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳುವವರೆ ನಿಜವಾದ ದೇಶಭಕ್ತರು. ಅವರಿಗೆ ಸ್ವಾಮಿ ವಿವೇಕಾನಂದರು ಮಾದರಿಯಾಗಬೇಕು. ಅವರ ತತ್ವ, ಸಿದ್ಧಾಂತ, ಬದುಕನ್ನು ಅನುಸರಿಸಿದಲ್ಲಿ ಶಕ್ತಿಶಾಲಿ ದೇಶ ನಿರ್ಮಾಣ ಶತಸಿದ್ಧ ಎಂದರು. 

ಯುವ ಜನರನ್ನು ಜವಾಬ್ದಾರಿಯುತ ಪ್ರಜೆಗಳನ್ನಾಗಿಸಲು ಭಾರತ್ ಮತ್ತು ಸ್ಕೌಟ್ಸ್ ಪ್ರಯತ್ನ  ಶ್ಲಾಘನೀಯ. ರಾಜ್ಯದಲ್ಲಿ ನೆರೆ, ಬರದಂತಹ ಪ್ರಕೃತಿ ವಿಕೋಪಗಳು ಎದುರಾದಾಗ, ಭಾರತ್ ಸ್ಕೌಟ್ಸ್ ಸದಸ್ಯರು ಜನರಿಗೆ ನೆರವು ನೀಡಿದ್ದಾರೆ ಎಂದು ಹೇಳಿದರು. 

ಭಾರತ್ ಸ್ಕೌಟ್ಸ್ ಮತ್ತು ಮುಕ್ತ ಆಯುಕ್ತ ಪಿ.ಜಿ.ಆರ್. ಸಿಂಧ್ಯಾ, ಉಪಾಧ್ಯಕ್ಷ ಕೊಂಡಜ್ಜಿ ಬಿ. ಷಣ್ಣುಗಪ್ಪ, ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

SCROLL FOR NEXT