ರಾಜ್ಯ

ಚಿಕ್ಕಬಳ್ಳಾಪುರ: ನಂದಿ ಬೆಟ್ಟದಲ್ಲಿ 'ಕರ್ನಾಟಕ ಹಕ್ಕಿ ಹಬ್ಬ'

Nagaraja AB

ಚಿಕ್ಕಬಳ್ಳಾಪುರ: ಜಿಲ್ಲೆಯ ಪ್ರಸಿದ್ದ  ಚಾರಿತ್ರಿಕ ತಾಣವಾದ ನಂದಿ ಬೆಟ್ಟದಲ್ಲಿ ಕರ್ನಾಟಕ ಹಕ್ಕಿ ಹಬ್ಬವನ್ನು ಆಯೋಜಿಸಲಾಗಿದೆ. ಎರಡು ದಿನಗಳ ಕರ್ನಾಟಕ ಹಕ್ಕಿ ಹಬ್ಬಕ್ಕಾಗಿ ನಂದಿ ಬೆಟ್ಟ ಅಲ್ಲದೇ  ಮತ್ತೊಂದು ಬೆಟ್ಟವಾದ ಸ್ಕಂದಗಿರಿ ಅಥವಾ ಕಲವರಹಳ್ಳಿ ಬೆಟ್ಟವನ್ನು ಕೂಡಾ ಆಯ್ಕೆ ಮಾಡಲಾಗಿದೆ. 

ನಂದಿಬೆಟ್ಟದ ತುದಿಯಲ್ಲಿ ಜನವರಿ 17 ರಂದು ಹಕ್ಕಿ ಹಬ್ಬಕ್ಕೆ ಚಾಲನೆ ದೊರೆಯಲಿದ್ದು, ಸಾರಿಗೆ, ವಾಸ್ತವ್ಯ ಸೌಕರ್ಯ ಮತ್ತಿತರ  ಅಂತಿಮ ಹಂತದ ಸಿದ್ದತೆಗಳನ್ನು ರಾಜ್ಯ ಪರಿಸರ ಪ್ರವಾಸೋದ್ಯಮ ಮಂಡಳಿ ಮಾಡಿಕೊಳ್ಳುತ್ತಿದೆ. ಶೀಘ್ರದಲ್ಲಿಯೇ ಆನ್ ಲೈನ್ ನೋಂದಣಿ ಕಾರ್ಯ ಆರಂಭವಾಗಲಿದೆ.

 ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆಗೆ ಮಾತನಾಡಿದ ಪಿಸಿಸಿಎಫ್ ಸಂಜಯ್ ಮೋಹನ್, ರಾಜ್ಯದಲ್ಲಿ ನಡೆಯಲಿರುವ ವಾರ್ಷಿಕ ಹಕ್ಕಿ ಹಬ್ಬ ದೇಶಾದ್ಯಂತ ಪಕ್ಷಿ ಪ್ರಿಯರನ್ನು ಆಕರ್ಷಿಸಲಿದೆ ಎಂದು ತಿಳಿಸಿದರು. 

ಹಕ್ಕಿ ಹಬ್ಬಕ್ಕೆ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದೆ. ಬೀದರ್ ನಲ್ಲಿ ಕಳೆದ ಆವೃತ್ತಿಯ ಹಕ್ಕಿ ಹಬ್ಬ ಆಯೋಜಿಸಲಾಗಿತ್ತು. ಈ ಬಾರಿ ನಂದಿ ಬೆಟ್ಟದ ಸುತ್ತಮುತ್ತ ಇದನ್ನು ಆಯೋಜಿಸಲಾಗಿದೆ ಎಂದು ಅವರು ಹೇಳಿದರು. 

ಚಳಿಗಾಲದಲ್ಲಿ ಹಿಮಾಲಯ ವಲಯದಿಂದ ಬರುವ ವಲಸೆ ಪಕ್ಷಿಗಳ ತಾಣವಾಗಿ ನಂದಿಬೆಟ್ಟವನ್ನು ಗುರುತಿಸಲಾಗಿದೆ. ಹಿಮಾಲಯದಿಂದ ಬರುವಂತಹ ಪಕ್ಷಿಗಳಲ್ಲಿ  ಟಿನಿ ವರ್ಬಲರ್ಸ್  ಪಕ್ಷಿ ಪ್ರಿಯರ ಪ್ರಮುಖ ಆಕರ್ಷಣೀಯವಾಗಲಿದೆ. ಹಕ್ಕಿಗಳಿಗಾಗಿ ಇಲ್ಲಿ ವಿವಿಧ ಸ್ಥಳಗಳಿದ್ದು, ಪ್ರಸಿದ್ದ ಚಾರಣ ತಾಣವಾಗಿದೆ ಎಂದು ಸಿಬ್ಬಂದಿಗಳು ಹೇಳುತ್ತಾರೆ. 

ಬೆಂಗಳೂರು ಸುತ್ತಮುತ್ತಲಿನ ಪಕ್ಷಿಗಳಿಗೆ ನಂದಿ ಬೆಟ್ಟ ಉತ್ತಮ ತಾಣವಾಗಿದೆ. ಈ ಕಾಲದಲ್ಲಿ ಬೂಟೆಡ್ ವಾಬ್ಲರ್, ಬ್ಲೈಯ್ತ್ ರೀಡ್ ವಾಬ್ಲರ್ ಮತ್ತಿತರ ವಲಸೆ ಹಕ್ಕಿಗಳನ್ನು ಇಲ್ಲಿ ನೋಡಬಹುದಾಗಿದೆ ಎಂದು ವನ್ಯಜೀವಿ ಛಾಯಾಗ್ರಾಹಕ ಮಂಜುನಾಥ್ ಪ್ರಭಾಕರ್ ತಿಳಿಸಿದರು. 

SCROLL FOR NEXT