ರಾಜ್ಯ

ಕರ್ನಾಟಕದಲ್ಲಿ ಮೋದಿ ಮೇನಿಯಾ: ಭಾಷಣ ಅನುವಾದ ಮಾಡಲು ಜೋಷಿಗೆ ಜೋಷ್ ತುಂಬಿದ ಪ್ರಧಾನಿ

Manjula VN

ಬೆಂಗಳೂರು: 2 ದಿನಗಳ ಕಾಲ ರಾಜ್ಯದ ಪ್ರವಾಸದಲ್ಲಿರುವ ಪ್ರಧಾನಮಂತ್ರಿ ನರೇಂದ್ರ ಮೋದಿಯವರು, ಗುರುವಾರ ಕಲ್ಪತರು ನಾಡಲ್ಲಿ ರೈತರಿಗೆ ಆತ್ಮಸ್ಥೈರ್ಯ ತುಂಬಿದರು. ಈ ವೇಳೆ ತಮ್ಮ ಭಾಷಣವನ್ನು ಅನುವಾದ ಮಾಡುವ ಜವಾಬ್ದಾರಿಯನ್ನು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿಯವರಿಗೆ ನೀಡಿದ್ದರು. ಅನುವಾದ ಮಾಡಲು ಜೋಷಿಯವರಿಗೆ ಧೈರ್ಯ ನೀಡಿದ್ದಾರೆ. 

ತಮ್ಮ ಭಾಷಣವನ್ನು ಅನುವಾದ ಮಾಡುವಂತೆ ಪ್ರಧಾನಮಂತ್ರಿಗಳು ನನಗೆ ತಿಳಿಸಿದಾಗ ಆರಂಭದಲ್ಲಿ ಭಯವಾಗಿತ್ತು. ಈ ವೇಳೆ ಮೋದಿಯವರಿಗೆ ಕಷ್ಟವಾಗುತ್ತದೆ ಎಂದು ಹೇಳಿದ್ದೆ. ಬಳಿಕ ನನ್ನನ್ನು ಸಮಾಧಾನಪಡಿಸಿದ ಮೋದಿಯವರು, ಧೈರ್ಯ ತುಂಬಿದರು. ಭಯಪಡಬೇಡಿ. ಏನೂ ಆಗುವುದಿಲ್ಲ ಎಂದು ತಿಳಿಸಿದರು ಎಂದು ಪ್ರಹ್ಲಾದ್ ಜೋಷಿಯವರು ಹೇಳಿದರು. 

ಆರಂಭದಲ್ಲಿ ಅನುವಾದ ಮಾಡಲು ಭಯವಾಗಿತ್ತು. ಪ್ರಧಾನಿ ಮೋದಿಯವರ ಶ್ರೇಷ್ಠತೆ ಬಹಳ ಉನ್ನತವಾದದ್ದು. ಆದರೆ, ಮೋದಿಯವರು ನನಗೆ ಧೈರ್ಯ ತುಂಬಿದಲು ಎಂದು ತಿಳಿಸಿದ್ದಾರೆ. 

ಮೋದಿಯವರು ನೀಡಿದ ಧೈರ್ಯದ ಮೇರೆಗೆ ಪ್ರಹ್ಲಾದ್ ಜೋಷಿಯವರು ಮೋದಿಯವರ ಹಿಂದಿ ಭಾಷಣವನ್ನು ಕನ್ನಡಕ್ಕೆ ಅನುವಾದ ಮಾಡಿ ಜನರಿಗೆ ತಿಳಿಸಿದ್ದರು. ಈವೇಳೆ ಕೆಲವರು ಮಾಜಿ ಕೇಂದ್ರ ಸಚಿವ ಅನಂತ್ ಕುಮಾರ್ ಅವರನ್ನು ನೆನೆದಿದ್ದು ಕೂಡ ಕಂಡು ಬಂದಿತ್ತು. 

ದಿವಂಗತ ಅನಂತ್ ಕುಮಾರ್ ಅವರು ಹಿಂದೆ ಬಿಜೆಪಿ ಹಿರಿಯ ನಾಯಕರಾದ ಎಲ್.ಕೆ.ಅಡ್ವಾಣಿ, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಟಿಯವರ ಭಾಷಣಗಳನ್ನು ಅನುವಾದ ಮಾಡುತ್ತಿದ್ದರು. 

SCROLL FOR NEXT