ರಾಜ್ಯ

ಕಾಂಗ್ರೆಸ್‌ನಿಂದ ಮತ ಬ್ಯಾಂಕ್ ರಾಜಕಾರಣ: ಗೋವಿಂದ ಕಾರಜೋಳ

Sumana Upadhyaya

ಗದಗ: ದೇಶಕ್ಕೆ ಸ್ವಾತಂತ್ರ್ಯ ಬಂದ ಬಳಿಕ ಕಾಂಗ್ರೆಸ್ ತನ್ನ ಮತ ಬ್ಯಾಂಕಿಗಾಗಿ ಅಲ್ಪಸಂಖ್ಯಾತರು, ದೀನದಲಿತರು ಸೇರಿದಂತೆ ಕೆಲ ಸಮುದಾಯಗಳಿಗೆ ತಪ್ಪು ತಿಳುವಳಿಕೆ ಕೊಟ್ಟು ಅವರನ್ನು ಭಯದ ವಾತಾವರಣದಲ್ಲಿಯೇ ಇರುವಂತೆ ಮಾಡಿದೆ ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಆರೋಪಿಸಿದ್ದಾರೆ.


ಗದಗಿನಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪೌರತ್ವ ತಿದ್ದುಪಡಿ ಕಾಯಿದೆ ಜಾರಿಯಿಂದಾಗಿ ದೇಶದ 130 ಕೋಟಿ ಜನರಲ್ಲಿ ಯಾರಿಗೂ ಅನ್ಯಾಯವಾಗುವುದಿಲ್ಲ. ವಿಪಕ್ಷಗಳು ವಿನಾಕಾರಣ ಜನರನ್ನು ಹುಯಿಲೆಬ್ಬಿಸುವುದನ್ನು ಬಿಡಬೇಕು ಎಂದು ಮನವಿ ಮಾಡಿದರು.


ಮಹಾದಾಯಿ ವಿಚಾರದಲ್ಲಿ ಗಡಿಬಿಡಿ ಮಾಡಬಾರದು. ವಿವಾದ ನ್ಯಾಯಾಲಯದ ಮುಂದೆ ಇರುವುದರಿಂದ ಯಾರೂ ಆತುರ ಪಡಬಾರದು. ಕೇಂದ್ರದ ಮಂತ್ರಿಗಳೇ ಕರ್ನಾಟಕಕ್ಕೆ ಮಹಾದಾಯಿ ವಿಚಾರದಲ್ಲಿ ಯಾವುದೇ ಕಾರಣಕ್ಕೂ ಅನ್ಯಾಯವಾಗಲು ಬಿಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ ಎಂದು ಉಪಮುಖ್ಯಮಂತ್ರಿಗಳು ತಿಳಿಸಿದರು.

SCROLL FOR NEXT