ಗೌರಿ ಲಂಕೇಶ್ 
ರಾಜ್ಯ

ಗೌರಿ ಲಂಕೇಶ್ ಹತ್ಯೆ ಪ್ರಕರಣ: ಪರಾರಿಯಾಗಿದ್ದ ಆರೋಪಿ ಜಾರ್ಖಾಂಡ್'ನಲ್ಲಿ ಬಂಧನ

ಪ್ರಗತಿಪರ ಚಿಂತಕಿ ಹಾಗೂ ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಪರಾರಿಯಾಗಿದ್ದ ಮತ್ತೊಬ್ಬ ಆರೋಪಿಯನ್ನು ಜಾರ್ಖಾಂಡ್ ರಾಜ್ಯದಲ್ಲಿ ಕರ್ನಾಟಕದ ಎಸ್ಐಟಿ ಪೊಲೀಸರು ಗುರುವಾರ ಬಂಧನಕ್ಕೊಳಪಡಿಸಿದ್ದಾರೆ. 

ಬೆಂಗಳೂರು: ಪ್ರಗತಿಪರ ಚಿಂತಕಿ ಹಾಗೂ ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಪರಾರಿಯಾಗಿದ್ದ ಮತ್ತೊಬ್ಬ ಆರೋಪಿಯನ್ನು ಜಾರ್ಖಾಂಡ್ ರಾಜ್ಯದಲ್ಲಿ ಕರ್ನಾಟಕದ ಎಸ್ಐಟಿ ಪೊಲೀಸರು ಗುರುವಾರ ಬಂಧನಕ್ಕೊಳಪಡಿಸಿದ್ದಾರೆ. 

ಮಹಾರಾಷ್ಟ್ರದ ರಿಷಿಕೇಶ್ ದೇವ್ಡೇಕರ್ ಅಲಿಯಾಸ್ ಮುರಳಿ (44) ಬಂಧಿತ ಆರೋಪಿಯಾಗಿದ್ದಾರೆ. ಗೌರಿ ಹತ್ಯೆಯಲ್ಲಿ ಬಳಸಲಾಗಿದ್ದ ಪಿಸ್ತೂಲ್ ನಾಶಗೊಳಿಸುವಲ್ಲಿ ಈತ ಪ್ರಮುಖ ಪಾತ್ರ ವಹಿಸಿದ್ದ. ಈ ಕೃತ್ಯ ಬೆಳಕಿಗೆ ಬಂದ ಬಳಿಕ ತಲೆಮರೆಸಿಕೊಂಡು ಓಡಾಡುತ್ತಿದ್ದ. ಎರಡೂ ವರ್ಷಗಳ ಬಳಿಕ ಕೊನೆಗೂ ಆರೋಪಿ ಪೊಲೀಸರ ಬಲೆಗೆ ಬಿದ್ದಿದ್ದಾನೆಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

ಜಾರ್ಖಾಂಡ್ ರಾಜ್ಯದ ಧನಬಾದ್ ಜಿಲ್ಲವೆಯ ಕತ್ರಾಸ್ ನಲ್ಲಿ ಮುರಳಿ ಇರುವ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು, ಸಂಜೆ ಆತನನ್ನು ಬಂಧಿಸಿದ್ದಾರೆ. ಬಳಿಕ ಆತ ನೆಲೆಸಿದ್ದ ಮನೆಯಲ್ಲಿ ಸಹ ಪರಿಶೀಲನೆ ನಡೆಸಲಾಯಿತು. ಶುಕ್ರವಾರ ನ್ಯಾಯಾಲಯದ ಮುಂದೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆಗೆ ವಶಕ್ಕೆ ಪಡೆಯಲಿದ್ದಾರೆಂದು ಅಧಿಕಾರಿಗಳು ಹೇಳಿದ್ದಾರೆ. 

ಸೈದ್ದಾಂತಿಕ ಭಿನ್ನಾಭಿಪ್ರಾಯದ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಹಾಗೂ ಕರ್ನಾಟಕದಲ್ಲಿ ನಡೆದಿದ್ದ ವಿಚಾರವಾದಿಗಳ ಹತ್ಯೆ ಸರಣಿ ಸಂಚಿನಲ್ಲಿ ಮುರಳಿ ಪಾತ್ರವಹಿಸಿದ್ದಾನೆ. ಈ ಕೊಲೆ ಕೃತ್ಯಗಳಲ್ಲಿ ಮಹಾರಾಷ್ಟ್ರದ ಅಮೋಲ್ ಕಾಳೆ ಹಾಗೂ ಆತನ ಸಹಚರರು ಸೆರೆಯಾದ ನಂತರ ಮುರಳಿ ಅಜ್ಞಾತವಾಗಿದ್ದ. ಇನ್ನು ಗೌರಿ ಹತ್ಯೆಯಲ್ಲಿ ಮುರಳಿ ಭಾಗವಹಿಸಿದ್ದ ಬಗ್ಗೆ ಕಾಳೆ ಡೈರಿಯಲ್ಲಿ ಸುಳಿವು ಸಿಕ್ಕಿತ್ತು. ಎರಡೂವರೆ ವರ್ಷ ಸತತವಾಗಿ ಮುರಳಿಯ ಬೆನ್ನುಹತ್ತಿದ್ದ ಎಸ್ಐಟಿ ಅಧಿಕಾರಿಗಳು, ಕೊನೆಗೆ ಆತನನ್ನು ಬಂಧಿಸುವಲ್ಲಿ ಯಶಸ್ಸು ಕಂಡಿದ್ದಾರೆ. 

ಅಲ್ಲದೆ, ಬಲಪಂಧೀಯ ವಿಚಾರಧಾರೆಗಲ ವಿರೋಧಿಗಳ ಹತ್ಯೆಗೆ ಸಜ್ಜಾಗಿದ್ದ ತಂಡದ ಸಂಘಟನೆಯಲ್ಲೂ ಕೂಡಾ ಮುರಳಿ ಕೆಲಸ ಮಾಡಿದ್ದ. ಹಾಗೆಯೇ ತಮ್ಮ ಸಂಘಟನೆಗೆ ನೇಮಕಗೊಂಡ ಸದಸ್ಯರಿಗೆ ಶಸ್ತ್ರಾಸ್ತ್ರ ತರಬೇತಿ, ಆರ್ಥಿಕ ನೆರವು ಹಾಗೂ ವಸತಿ ಸೌಲಭ್ಯ ಕಲ್ಪಿಸುವಲ್ಲಿ ಆತ ಶ್ರಮಿಸಿದ್ದ. ಕಾಳೆ ಗ್ಯಾಂಗ್ ಸೆರೆಯಾದ ವಿಚಾರ ತಿಳಿದ ಮುರಳಿ, ಉತ್ತರಭಾರತದ ಕಡೆಗೆ ತಲೆಮರೆಸಿಕೊಂಡು ಓಡಾಡುತ್ತಿದ್ದ. ಪೊಲೀಸರ ಬಂಧನ ಭೀತಿಯಿಂದ ಆತ ಒಂದು ಕಡೆ ನೆಲೆ ನಿಲ್ಲದೆ ಹಲವು ರಾಜ್ಯಗಳನ್ನು ಸುತ್ತಾಡಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸಿಇಸಿ ವಿರುದ್ಧದ ವಿಪಕ್ಷಗಳ ಪ್ರತಿಭಟನೆ: ವಶಕ್ಕೆ ಪಡೆದ ಬೆನ್ನಲ್ಲೇ ರಾಹುಲ್, ಪ್ರಿಯಾಂಕಾ ಗಾಂಧಿ ಬಿಡುಗಡೆ

ಅಧಿಕಾರಿಯಂತೆ ನಟಿಸಿ ಆಪ್ ನಾಯಕನಿಗೆ ಧೋಕಾ; ಮದುವೆಯಾಗಿ ಆಭರಣಗಳೊಂದಿಗೆ ಮಹಿಳೆ ಪರಾರಿ!

ಆಪರೇಷನ್ ಸಿಂಧೂರ್, ರಕ್ಷಕ್‌ನಲ್ಲಿ ಪ್ರಮುಖ ಪಾತ್ರವಹಿಸಿದ್ದ ಅಶುತೋಷ್ ದೀಕ್ಷಿತ್ ವಾಯುಪಡೆಯ ನೂತನ ಮುಖ್ಯಸ್ಥ!

ಮಚ್ಛಾರ್ ಆರೋಗ್ಯಯಲ್ಲಿ 'ಸ್ಥಿರ ಸುಧಾರಣೆ': ಭಾರತೀಯ ರಾಯಭಾರ ಕಚೇರಿ

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!