ರಾಜ್ಯ

ಅಂಕಪಟ್ಟಿ ನೀಡದೇ ಸತಾಯಿಸಿದ ರಾಣಿ ಚೆನ್ನಮ್ಮ ವಿ.ವಿ.ಗೆ ರೂ.1 ಲಕ್ಷ ದಂಡ: ಜಿಲ್ಲಾ ಗ್ರಾಹಕರ ಪರಿಹಾರ ವೇದಿಕೆ ಆದೇಶ

Manjula VN

ಬೆಳಗಾವಿ: ಪದವಿ ಮುಗಿಸಿದ ವಿದ್ಯಾರ್ಥಿನಿಯೊಬ್ಬಳಿಗೆ ಅಂಕಪಟ್ಟಿ ನೀಡದೇ ರಾಣಿಚೆನ್ನಮ್ಮ ವಿಶ್ವವಿದ್ಯಾಲಯ ಸೇವಾ ನ್ಯೂನತೆ ಎಸಗಿರುವುದರಿಂದ ದೂರುದಾರ ವಿದ್ಯಾರ್ಥಿನಿಗೆ ಪರಿಹಾರ ರೂಪವಾಗಿ 1 ಲಕ್ಷ ರೂ ಹಾಗೂ ಮಾನಸಿಕ ವೇದನೆಗಾಗಿ ಒಂದು ಸಾವಿರ ರೂ ಪರಿಹಾರ ನೀಡಬೇಕು ಎಂದು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ ಆದೇಶ ನೀಡಿದೆ.

ಬಾಗಲಕೋಟೆಯ ಕೌಲಪೇಟ್ ಗ್ರಾಮದ ಗೀತಾ ಈರಪ್ಪ ಇಜಾರ್‌ದಾರ್ ಬಿ.ಕಾಂ ಪದವಿ ಪಡೆಯಲು ರಾಣಿಚೆನ್ನಮ್ಮ ವಿಶ್ವವಿದ್ಯಾಲಯ ವ್ಯಾಪ್ತಿಯ ಬಸವೇಶ್ವರ ವಾಣಿಜ್ಯ ಮಹಾವಿದ್ಯಾಲಯ ಬಾಗಲಕೋಟೆಯಲ್ಲಿ ಪ್ರವೇಶ ಪಡೆದು ೨೦೧೫ ರಲ್ಲಿ ಉತ್ತೀರ್ಣರಾಗಿದ್ದಳು.

ಈ ವಿದ್ಯಾಲಯವು ಬಿ.ಕಾಂ ಪದವಿ ಪಾಸಾದ ಅಂಕಪಟ್ಟಿಗಳನ್ನು ಕೊಟ್ಟಿರಲಿಲ್ಲ, ಇದರಿಂದ ಅವಳ ಮುಂದಿನ ವಿದ್ಯಾಭ್ಯಾಸಕ್ಕೆ ಮತ್ತು ಯಾವುದೇ ಉದ್ಯೋಗ ಪಡೆಯಲು ಅರ್ಜಿ ಸಲ್ಲಿಸಲು ಅಂಕಪಟ್ಟಿ ಇಲ್ಲದ ಕಾರಣ ತೊಂದರೆ ಉಂಟಾಗಿತ್ತು. ಇದರಿಂದ ಈಕೆ ಉದ್ಯೋಗದ ಅವಕಾಶಗಳಿಂದ ವಂಚಿತಳಾಗಿ ನೊಂದು ಪರಿಹಾರ ಕೋರಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆಯ ಮುಂದೆ 2018ರ ಏಪ್ರಿಲ್ 24 ರಂದು ದೂರು ದಾಖಲಿಸಿದ್ದಳು.

SCROLL FOR NEXT