ರಾಜ್ಯ

ಮಕರ ಸಂಕ್ರಮಣ ವಿಶೇಷ: ಕೂಡಲಸಂಗಮದಲ್ಲಿ ಸಹಸ್ರಾರು  ಭಕ್ತರಿಂದ ಪುಣ್ಯಸ್ನಾನ

Raghavendra Adiga

ಬಾಗಲಕೋಟೆ: ರಾಜ್ಯದ ಮೂಲೆ ಮೂಲೆಗಳಿಂದ ಜಿಲ್ಲೆಯ ಪವಿತ್ರ ಕ್ಷೇತ್ರ ಕೂಡಲಸಂಗಮಕ್ಕೆ ಆಗಮಿಸಿರುವ ಜನತೆ ಮಕರ ಸಂಕ್ರಮಣದ ಹಿನ್ನೆಲೆಯಲ್ಲಿ ಎಳ್ಳುಸ್ನಾನ ಮಾಡಿದರು.

ಕೃಷ್ಣಾ ಮತ್ತು ಘಟಪ್ರಭ ನದಿಗಳ ಸಂಗಮ ತಾಣ ಚಿಕ್ಕಸಂಗಮ, ಕೃಷ್ಣಾ ಮತ್ತು ಮಲಪ್ರಭಾ ನದಿಗಳ ಸಂಗಮ ತಾಣ ಕೂಡಲ ಸಂಗಮ, ಬನಶಂಕರಿಯ ಹರಿದ್ರಾ ತೀರ್ಥ ಮತ್ತು ಸರಸ್ವತಿ ಹಳ್ಳ, ಮಹಾಕೂಟ, ಶಿವಯೋಗ ಮಂದಿರ ಸೇರಿದಂತೆ ನಾನಾ ಕಡೆಗಳಲ್ಲಿ ಜನತೆ ಮಕರ ಸಂಕ್ರಮಣದ ಅಂಗವಾಗಿ ಪವಿತ್ರ ಸ್ನಾನ ಮಾಡಿ ದೇವರ ದರ್ಶನ ಪಡೆದರು.

ಮಂಗಳವಾರದಿAದಲೇ ಜನತೆ ಇಲ್ಲಿಯ ನದಿ ಸಂಗಮ ತಾಣ ಮತ್ತು ದೇವಸ್ಥಾನಗಳಿಗೆ ಆಗಮಿಸಲಾರಂಭಿಸಿದ್ದರು. ಇಂದು ಬೆಳಗಿನಿಂದಲೇ ಎಲ್ಲಡೆ ಜನತೆ ಪುಣ್ಯ ಸ್ನಾನ ಮಾಡುತ್ತಿರುವುದು ಸಾಮಾನ್ಯವಾಗಿತ್ತು.

ಸಂಕ್ರಮಣದ ಹಿನ್ನೆಲೆಯಲ್ಲಿ ಜಿಲ್ಲೆಗೆ ಆಗಮಿಸುತ್ತಿದ್ದ ಜನತೆ ಪುಣ್ಯ ಸ್ನಾನ ಮುಗಿಸಿಕೊಂಡು ಇಲ್ಲಿಯ ಪ್ರವಾಸಿ ತಾಣಗಳಿಗೂ ಭೇಟಿ ನೀಡಿದರು. ರಾಜ್ಯದ ನಾನಾ ಮೂಲೆಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ಜನ ಆಗಮಿಸಿದ್ದರಿಂದ ಜಿಲ್ಲೆಯ ನಾನಾ ಕಡೆಗಳಲ್ಲಿ ಸಂಚಾರ ದಟ್ಟಣೆ ಕೂಡ ಆಗಿತ್ತು. 

ಪ್ರವಾಸಿ ತಾಣಗಳಲ್ಲಂತೂ ವಾಹಣ ದಟ್ಟಣೆಯಿಂದ ವಾಹನಗಳು ತಾಸುಗಟ್ಟಲೇ ದಟ್ಟಣೆಯಲ್ಲಿ ಸಿಲುಕಿಕೊಂಡು, ಬಳಿಕ ಇತರ ಸ್ಥಳಗಳಿಗೆ ಹೋಗಬೇಕಾದ ಸ್ಥಿತಿ ನಿರ್ಮಾಣವಾಗಿತ್ತು.

ಬಾದಾಮಿಯ ಬನಶಂಕರಿಯಲ್ಲಿ  ಜಾತ್ರೆ ನಡೆಯುತ್ತಿದ್ದು, ಇಲ್ಲಂತೂ ವಾಹನಗಳು ಜನದಟ್ಟಣೆ ನಡುವೆ ದಾಟಿಕೊಂಡು ಹೋಗಲು ಹರ ಸಾಹಸ ಪಡಬೇಕಿತ್ತು. ಜಿಲ್ಲೆಯ ಪ್ರವಾಸಿ ಹಾಗೂ ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡಿದ ಜನತೆ ಕೊನೆಗೆ ಬಾದಾಮಿ ಬನಶಂಕರಿಗೆ ಆಗಮಿಸಿ ದೇವಿಯ ದರ್ಶನ ಪಡೆದು, ಜಾತ್ರೆಗಾಗಿ ವಾಸ್ತವ್ಯ ಹೂಡಿದ್ದಾರೆ.

SCROLL FOR NEXT