ರಾಜ್ಯ

ವಾಣಿಜ್ಯ ಬಂದರು ವಿಸ್ತರಣೆಗೆ ಮೀನುಗಾರರ ವ್ಯಾಪಕ ವಿರೋಧ: ಇಂದು ಕಾರವಾರ ಬಂದ್ 

Sumana Upadhyaya

ಕಾರವಾರ(ಉತ್ತರ ಕನ್ನಡ): ಕಾರವಾರ ವಾಣಿಜ್ಯ ಬಂದರು ವಿಸ್ತರಣೆಯ ಸಾಗರ ಮಾಲಾ ಯೋಜನೆ ವಿರೋಧಿಸಿ ಗುರುವಾರ ವಿವಿಧ ಸಂಘಟನೆಗಳಿಂದ ಕಾರವಾರ ಬಂದ್ ಗೆ ಕರೆ ನೀಡಲಾಗಿದೆ. ಇದರಿಂದ ನಗರದಲ್ಲಿ ಇಂದು ಸಾಮಾನ್ಯ ಜನಜೀವನ ವ್ಯತ್ಯಯವಾಗಲಿದೆ.


ಜಿಲ್ಲೆಯ ವಾಣಿಜ್ಯ ಬಂದರು ವಿಸ್ತರಣೆಗೆ ಸ್ಥಳೀಯ ಮೀನುಗಾರರಿಂದ ವ್ಯಾಪಕ ವಿರೋಧ ವ್ಯಕ್ತವಾಗಿದ್ದು, ಈ ಹಿನ್ನಲೆಯಲ್ಲಿ ಬಂದ್ ಗೆ ಕರೆ ನೀಡಲಾಗಿದೆ. ಮೀನುಗಾರರ ಹೋರಾಟಕ್ಕೆ ವಿವಿಧ ಸಂಘಟನೆಗಳು ಬೆಂಬಲ ಸೂಚಿಸಿವೆ.


ಬಂದ್​ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಖಾಸಗಿ ವಾಹನ, ಆಟೋ ಸಂಚಾರ. ಅಂಗಡಿ ಮುಂಗಟ್ಟು ವ್ಯಾಪಾರ ವಹಿವಾಟು ಸ್ಥಗಿತವಾಗಲಿವೆ. 
ಸಾಗರಮಾಲಾ ಯೋಜನೆಯಡಿ ಈಗಾಗಲೇ ನಗರದ ರವೀಂದ್ರನಾಥ ಕಡಲ ತೀರದಲ್ಲಿ ಕಾಮಗಾರಿ ಆರಂಭವಾಗಿದ್ದು. ಇದಕ್ಕೆ ಸ್ಥಳೀಯ ಮೀನುಗಾರರು ವಿರೋಧ ಮಾಡುತ್ತಲೇ ಬಂದಿದ್ದಾರೆ.

ಕಾಮಗಾರಿಯನ್ನು ಸ್ಥಗಿತ ಮಾಡದ ಹಿನ್ನಲೆಯಲ್ಲಿ ಮೀನುಗಾರರು ಮೀನು ಮಾರಾಟ ಸ್ಥಗಿತಗೊಳಿಸಿದ್ದು ಇಂದು ಬಂದ್ ಗೆ ಕರೆ ಕೊಟ್ಟಿದ್ದಾರೆ. ಮೀನುಗಾರರ ಬಂದ್ ಕರೆ ಹಿನ್ನಲೆಯಲ್ಲಿ ಜಿಲ್ಲೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

SCROLL FOR NEXT