ರಾಜ್ಯ

ಆನಂದ್ ಸಿಂಗ್ ಪತ್ರಿಕಾ ಪ್ರಕಟಣೆ: ತಮ್ಮ ಹೆಸರಿನ ನಕಲಿ ಲೆಟರ್ ಪ್ಯಾಡ್ ನಂಬದಿರಲು ಮನವಿ 

Srinivas Rao BV

ವಿಜಯನಗರ: ತಮ್ಮ ಹೆಸರಿನಲ್ಲಿ ನಕಲಿ ಲೆಟರ್ ಪ್ಯಾಡ್ ಬಳಕೆ ಮಾಡಿ ಜನರನ್ನು ದಾರಿ ತಪ್ಪಿಸುತ್ತಿರುವುದರ ಬಗ್ಗೆ ವಿಜಯನಗರ ಶಾಸಕ ಆನಂದ್ ಸಿಂಗ್ ಪತ್ರಿಕಾ ಪ್ರಕಟಣೆ ಹೊರಡಿಸಿದ್ದಾರೆ. 

"ಕೆಲವು ಕಿಡಿಗೇಡಿಗಳು ನನ್ನ ಲೆಟರ್ ಪ್ಯಾಡ್ ಬಳಕೆ ಮಾಡಿ ಸಮಾಜದಲ್ಲಿ ಶಾಂತಿ ಕದಡುವ ಪ್ರಯತ್ನ ಮಾಡುತ್ತಿದ್ದಾರೆ. ಇಂತಹ ಅನಾಮಧೇಯ ಪತ್ರಗಳ ಶಬ್ದಗಳಿಗೆ ಕಿವಿಗೊಡಬೇಡಿ ಎಂದು ಎಲ್ಲಾ ಧರ್ಮೀಯರಲ್ಲಿ ವಿನಂತಿ ಮಾಡುತ್ತೇನೆ" ಎಂದು ಆನಂದ್ ಸಿಂಗ್ ಹೇಳಿದ್ದು, ನಕಲಿ ಲೆಟರ್ ಪ್ಯಾಡ್ ಬಳಕೆಯಾಗುತ್ತಿರುವುದರ ಬಗ್ಗೆ ಈಗಾಗಲೇ ದೂರು ನೀಡಿರುವುದಾಗಿ ಹೇಳಿದ್ದಾರೆ. 

"ಈ ಹಿಂದೆ ಹೊಸಪೇಟೆ ನಗರದಲ್ಲಿ ಈ ರೀತಿಯಾಗಿ ನನ್ನ ಲೆಟರ್ ಪ್ಯಾಡ್ ಬಳಸಿ ಅನಾಮದೇಯ ಪತ್ರಗಳು ಹರಿದಾಡುತ್ತಿದ್ದವು, ಈಗ ರಾಜ್ಯದ ಬೇರೆ ಜಿಲ್ಲೆಗಳಲ್ಲಿಯೂ ಹರಿದಾಡುವುದಕ್ಕೆ ಪ್ರಾರಂಬಿಸಿವೆ. ಅದರಲ್ಲೂ ನನ್ನ ಲೆಟರ್ ಪ್ಯಾಡ್ ನಲ್ಲಿ ಸೋಮಶೇಖರ ರೆಡ್ಡಿ ಸಹಿ ಮಾಡಿರುವ ರೀತಿಯ ಪತ್ರ ಹರಿದಾಡುತ್ತಿದೆ ಎಂಬುದು ಗಮನಕ್ಕೆ ಬಂದಿದೆ". 

"ಪತ್ರದಲ್ಲಿ ಕೆಟ್ಟಪದಗಳ ಬಳಕೆ ಮಾಡಲಾಗಿದೆ ಎನ್ನಲಾಗುತ್ತಿದೆ. ತಮ್ಮ ವಿರುದ್ಧ ಷಡ್ಯಂತ್ರ ಮಾಡುವವರು ಯಾರೆಂದು ಗೊತ್ತಿಲ್ಲ, ಶತ್ರುಗಳು ಯಾರೆಂಬುದು ಸಹ ಅರ್ಥವಾಗುತ್ತಿಲ್ಲ, ಪೊಲೀಸರು ಅಂತಹ ವ್ಯಕ್ತಿಗಳನ್ನ ಕೂಡಲೆ ಬಂಧಿಸಿ ಕ್ರಮ ಜರುಗಿಸಬೇಕೆಂದು ಆನಂದ್ ಸಿಂಗ್ ಮನವಿ ಮಾಡಿದ್ದಾರೆ.
 
ಕಳೆದ ಒಂದು ವಾರದಿಂದ ಆನಂದ್ ಸಿಂಗ್‌ ಲೆಟರ್ ಪ್ಯಾಡ್ ನಲ್ಲಿ ಅಲ್ಪಸಂಖ್ಯಾತ ಸಮುದಾಯದ ಬಗ್ಗೆ ಅವಾಚ್ಯ ಶಬ್ದಗಳನ್ನ ಬರೆದು ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಗೆ ಕಿಡಿಗೇಡಿಗಳು ರವಾನೆಮಡಿದ್ದಾರೆ.

SCROLL FOR NEXT