ಬೆಂಗಳೂರು: ಪ್ರತೀನಿತ್ಯ ರಸ್ತೆಗಳಲ್ಲಿ ಸಂಭವಿಸುತ್ತಿರುವ ಅಪಘಾತಗಳು ಜನರಲ್ಲಿ ಆತಂಕವನ್ನು ಹೆಚ್ಚಿಸುತ್ತಿದ್ದು, 2018ರಲ್ಲಿ ರಾಜ್ಯದಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಒಟ್ಟು 11,000 ಮಂದಿ ಸಾವನ್ನಪ್ಪಿದ್ದಾರೆಂದು ವರದಿಗಳು ತಿಳಿಸಿವೆ.
ನಗರದಲ್ಲಿ ಆಯೋಜಿಸಲಾಗಿರುವ 31ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರು, ರಸ್ತೆ ಸುರಕ್ಷತೆಯ ಅಗತ್ಯತೆಗಳನ್ನು ಕುರಿತು ಶಾಲಾ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು.
2018ರಲವ್ಲಿ 10,990 ಮಂದಿ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಈ ಅಪಘಾತಗಳಲ್ಲಿ ಈ ಹಿಂದೆ ಪಾದಚಾರಿಗಳು ಹೆಚ್ಚಾಗಿ ಸಾವನ್ನಪ್ಪುತ್ತಿದ್ದರು. ಈ ಬಾಕಿ ಪ್ರಸಕ್ತ ಸಾಲಿಗೆ ಹೋಲಿಕೆ ಮಾಡಿದರೆ ಪಾದಚಾರಿಗಳ ಸಾವಿನ ಸಂಖ್ಯ ಶೇ.47ರಷ್ಟು ಕಡಿಮೆಯಾಗಿದೆ. ರಸ್ತೆ ಅಪಘಾತದಲ್ಲಿ ದ್ವಿಚಕ್ರ ವಾಹನ ಸವಾರರೇ ಹೆಚ್ಚಾಗಿ ಸಾವನ್ನಪ್ಪುದ್ದಾರೆ. ಮುಖ್ಯವಾಗಿ 18-37 ವರ್ಷದ ವ್ಯಕ್ತಿಗಳು ಹೆಚ್ಚಾಗಿ ಸಾವನ್ನಪ್ಪುತ್ತಿದ್ದಾರೆ. ರಸ್ತೆಗಳ ಅಪಘಾತಗಳ ಭೀಕರತೆಯನ್ನು ಯುವಕರು ಅರ್ಥ ಮಾಡಿಕೊಳ್ಳುವ ಅಗತ್ಯವಿದೆ ಎಂದು ಹೇಳಿದ್ದಾರೆ.
ಸಂಚಾರಿ ಹಾಗೂ ರಸ್ತೆ ಸುರಕ್ಷತಾ ಪೊಲೀಸ್ ಆಯುಕ್ತ ಪಿ.ಎಸ್ ಸಂಧು ಅವರು ಮಾತನಾಡಿ, ಪ್ರತೀ ವರ್ಷ ಬೆಂಗಳೂರಿನಲ್ಲಿ ಸಂಭವಿಸುವ ರಸ್ತೆ ಅಪಘಾತದಲ್ಲಿ 850 ಮಂದಿ ಸಾವನ್ನಪ್ಪುತ್ತಾರೆ. ಯುವಕರಲ್ಲಿ ಬದಲಾವಣ ಬರಬೇಕಿದೆ. ಸೀಟ್ ಬೆಲ್ಟ್ ಹಾಗೂ ಹೆಲ್ಮೆಟ್ ಗಳನ್ನು ಧರಿಸುವ ಅಗತ್ಯವಿದೆ. ವಾಹನವನ್ನು ನಮ್ಮದೆಂತು ತಿಳಿಯುವ ನಾವು, ರಸ್ತೆಗಳನ್ನು ಯಾರದ್ದೋ ಎಂದು ತಿಳಿಯುತ್ತೇವೆ ಹೀಗಾಗಿ ಇಂತಹ ದುರಂತಗಳು ಸಂಭವಿಸುತ್ತವೆ ಎಂದು ತಿಳಿಸಿದ್ದಾರೆ.
2020ಪ ವೇಳೆಗೆ ರಸ್ತೆ ಅಪಘಾತ ಹಾಗೂ ಅದರಿಂದಾಗುವ ಗಾಯಗಳನ್ನು ಅರ್ಧದಷ್ಟು ಕಡಿಮೆ ಮಾಡುವ ಪ್ರಮಾಣವನ್ನು ಭಾರತ ಮಾಡಿತ್ತು. ಆದರೆ, ಈ ಗುರಿ ಮುಟ್ಟಲು ನಮಗೆ ಸಾಧ್ಯವಾಗಲಿಲ್ಲ. ಪ್ರತೀನಿತ್ಯ ಅಪಘಾತ ಸುದ್ದಿಗಳನ್ನು ಕೇಳುತ್ತೇನೆ. ಆದರೆ, ನಮ್ಮ ಸ್ವಂತದವರು ಯಾರಾದರೂ ಸಾವನ್ನಪ್ಪದರೆ ಮಾತ್ರ ನಮಗೆ ಅದರ ನೋವು ಅರ್ಥವಾಗುತ್ತದೆ ಎಂದು ಜಂಟಿ ಪೊಲೀಸ್ ಆಯುಕ್ತ ರವಿಕಾಂತೇ ಗೌಡ ಅವರು ಹೇಳಿದ್ದಾರೆ.
ಕಾರ್ಯಕ್ರಮದಲ್ಲಿ ಹಲವು ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಸ್ಪರ್ಧೆಯಲ್ಲಿ ಭಾಗವಿಹಿಸಿ ಅತ್ಯುತ್ತಮವಾಗಿ ಪ್ರದರ್ಶನ ನೀಡಿದ ವಿದ್ಯಾರ್ಥಿಗಳಿಗೆ ಪ್ರಶಸ್ತಿಯನ್ನೂ ಇದೇ ವೇಳೆ ಪ್ರದಾನ ಮಾಡಲಾಯಿತು.