ರಾಜ್ಯ

ಉಡುಪಿ: ಮಲ್ಪೆ ಮೀನುಗಾರರ ಬಲೆಗೆ ಬಿದ್ದ ಅಪರೂಪದ ಆಸ್ಟ್ರೇಲಿಯಾ ಏಡಿ

Shilpa D

ಉಡುಪಿ:  ಅರಬ್ಬಿ ಸಮುದ್ರದಲ್ಲಿ ಅತೀ ಅಪರೂಪ ಎನ್ನುವ ಸ್ಪ್ಯಾನರ್ ಕ್ರಾಬ್ ಉತ್ತರ ಕನ್ನಡ ಜಿಲ್ಲೆಯ ನೇತ್ರಾಣಿ ನಡುಗಡ್ಡೆ ಭಾಗದಲ್ಲಿ ಉಡುಪಿಯ ಮಲ್ಪೆ ಮೀನುಗಾರರ ಬಲೆಗೆ ಬಿದ್ದಿದೆ.

ಕಡಲ ವಿಜ್ಞಾನಿಗಳ ಪ್ರಕಾರ, ಕರ್ನಾಟಕ ಕರಾವಳಿಯಲ್ಲಿ ಬಲು ಅಪರೂಪವೆನ್ನುವ ಈ ಏಡಿ ಹಲವು ವರ್ಷಗಳ ಹಿಂದೆ ಪತ್ತೆಯಾಗಿತ್ತು. ನಂತರ ಇದೇ ಮೊದಲ ಬಾರಿಗೆ ಈ ಏಡಿ ಅರಬ್ಬಿ ಸಮುದ್ರದ ನೇತ್ರಾಣಿ ನಡುಗಡ್ಡೆ ಭಾಗದಲ್ಲಿ ಪತ್ತೆಯಾಗಿದೆ.

ಆಸ್ಟ್ರೇಲಿಯಾ ಆಫ್ರಿಕಾ, ಹವಾಯಿ ದ್ವೀಪ ಹಾಗೂ ಗ್ರೇಟ್‌ ಬ್ಯಾರಿಯಲ್‌ ರೀಫ್‌ಗಳಲ್ಲಿ ಹೆಚ್ಚಾಗಿ ಕಂಡುಬರುವ ರೆನಿನಾ ರೆನಿನಾ ಪ್ರಬೇಧದ ಏಡಿ  ಮಂಗಳವಾರ ಸಂಜೆ ಕರಾವಳಿಯಲ್ಲಿ ಅಪರೂಪಕ್ಕೆ ಕಾಣಿಸಿಕೊಂಡಿದೆ.

ಆಡುಭಾಷೆಯಲ್ಲಿ ಸ್ಪ್ಯಾನರ್ ಕ್ರಾಬ್ ಎಂದು ಕರೆಯಲಾಗುವ ಏಡಿಯು ಕಪ್ಪೆಯ ಆಕೃತಿ ಹೊಂದಿರುವುದು ವಿಶೇಷ.

ಬೆಳಗ್ಗಿನ ಹೊತ್ತು ಸಮುದ್ರದ ಮರಳಿನಾಳದಲ್ಲಿ ಜೀವಿಸುತ್ತದೆ. 7 ರಿಂದ 9 ವರ್ಷಗಳವರೆಗೆ ಜೀವಿತಾವಧಿಯಲ್ಲಿ 400 ರಿಂದ 900 ಗ್ರಾಂ ತೂಗುತ್ತದೆ. ರುಚಿಕರ ಎಂಬ ಕಾರಣಕ್ಕೆ ಆಸ್ಟ್ರೇಲಿಯಾದ ಮಾರುಕಟ್ಟೆಯಲ್ಲಿ ರೆನಿನಾಗೆ ಭಾರಿ ಬೇಡಿಕೆ  ಎಂದು ಕಾರವಾರದ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಕಡಲ ಜೀವಶಾಸ್ತ್ರದ ಪ್ರಾಧ್ಯಾಪಕ ಡಾ.ಶಿವಕುಮಾರ್‌ ಹರಗಿ ತಿಳಿಸಿದ್ದಾರೆ.

SCROLL FOR NEXT