ವಿರಾಟ್ ಕೊಹ್ಲಿ ಮತ್ತು ದೀಪಿಕಾ 
ರಾಜ್ಯ

ರಜನಿ, ಅಕ್ಷಯ್ ನಂತರ ‘ಮ್ಯಾನ್‌ ವರ್ಸಸ್‌ ವೈಲ್ಡ್‌’ ನಲ್ಲಿ ದೀಪಿಕಾ ಮತ್ತು ಕೊಹ್ಲಿ

ಡಿಸ್ಕವರಿ ಚಾನೆಲ್‌ನ ‘ಮ್ಯಾನ್‌ ವರ್ಸಸ್‌ ವೈಲ್ಡ್‌’ ಖ್ಯಾತಿಯ ಬೇರ್‌ ಗ್ರಿಲ್ಸ್‌ ಅವರೊಂದಿಗೆ ಗುರುವಾರ ಅಕ್ಷಯ್ ಕುಮಾರ್ ಶೂಟಿಂಗ್ ನಲ್ಲಿ ಪಾಲ್ಗೋಂಡಿದ್ದರು.

ಮೈಸೂರು:  ಡಿಸ್ಕವರಿ ಚಾನೆಲ್‌ನ ‘ಮ್ಯಾನ್‌ ವರ್ಸಸ್‌ ವೈಲ್ಡ್‌’ ಖ್ಯಾತಿಯ ಬೇರ್‌ ಗ್ರಿಲ್ಸ್‌ ಅವರೊಂದಿಗೆ ಗುರುವಾರ ಅಕ್ಷಯ್ ಕುಮಾರ್ ಶೂಟಿಂಗ್ ನಲ್ಲಿ ಪಾಲ್ಗೋಂಡಿದ್ದರು.

ರಜನಿಕಾಂತ್, ಅಕ್ಷಯ್ ಕುಮಾರ್ ಮಾತ್ರವಲ್ಲದೇ ಸುಮಾರು ದೀಪಿಕಾ ಪಡುಕೋಣೆ, ವಿರಾಟ್ ಕೊಹ್ಲಿ ಸೇರಿದಂತೆ ಹಲವು ಸೆಲೆಬ್ರಿಟಿಗಳು ಪಾಲ್ಗೊಳ್ಳಲಿದ್ದಾರೆ.  ಒಟ್ಟು 14 ಎಪಿಸೋಡ್ ಗಳ ಶೂಟಿಂಗ್ ನಡೆಯಲಿದೆ.

ಬೆನಿಜಾಯ್‌ ಏಷ್ಯಾಗ್ರೂಪ್‌ನ ಸೆವೆನ್‌ ಟಾರಸ್‌ ಸ್ಟುಡಿಯೋ ಪ್ರೈವೇಟ್‌ ಲಿಮಿಟೆಡ್‌ನವರು ಸಾಕ್ಷ್ಯ ಚಿತ್ರ ತಯಾರಿಸುವ ಹೊಣೆ ಹೊತ್ತಿದ್ದು, ಪೂರ್ವ ನಿಗದಿಯಂತೆ ಬಂಡೀಪುರ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯ ಮೂಲೆಹೊಳೆ ಅರಣ್ಯ ವಲಯದ ರಾಂಪುರ ಆನೆ ಕ್ಯಾಂಪ್‌ ಭಾಗದಲ್ಲಿ ವನ್ಯಜೀವಿ ಕುರಿತ ಸಾಕ್ಷ್ಯಚಿತ್ರದ ಚಿತ್ರೀಕರಣ ನಡೆಯಿತು.

ಜ. 29 ರ ಸಂಜೆ ನಟ ಅಕ್ಷಯ್‌ ಕುಮಾರ್‌ ಮೈಸೂರಿನಿಂದ ಕಾರಿನಲ್ಲಿ ಆಗಮಿಸಿ ಖಾಸಗಿ ರೆಸಾರ್ಟ್‌ನಲ್ಲಿ ತಂಗಿದ್ದರು. ಅದೇ ರೆಸಾರ್ಟ್‌ನಲ್ಲಿ ಬೇರ್‌ ಗ್ರಿಲ್ಸ್‌ ಕೂಡ ವಾಸ್ತವ್ಯ ಹೂಡಿದ್ದರು.

ಜ. 30 ಬೆಳಗ್ಗೆ ಇಬ್ಬರೂ ಖ್ಯಾತನಾಮರು ರೆಸಾರ್ಟ್‌ನಿಂದ ನೇರ ನಿಗದಿಯಾದ ಸ್ಥಳಕ್ಕೆ ತೆರಳಿ ಚಿತ್ರೀಕರಣದಲ್ಲಿ ಪಾಲ್ಗೊಂಡರು. ಚಿತ್ರೀಕರಣ ಸ್ಥಳಕ್ಕೆ ಗುರುವಾರವೂ ಅರಣ್ಯ ಇಲಾಖೆ ಅಧಿಕಾರಿಗಳ ಹೊರತು ಬೇರೆಯವರಿಗೆ ಪ್ರವೇಶ ಇರಲಿಲ್ಲ.

ಚಿತ್ರೀಕರಣದ ನಂತರ ನಟ ಅಕ್ಷಯ್‌ ಕುಮಾರ್‌ ಕಾರಿನಲ್ಲಿ ಮೈಸೂರಿಗೆ ತೆರಳಿ ಮುಂಬೈಗೆ ಪ್ರಯಾಣ ಬೆಳೆಸಿದರೆ, ಬೇರ್‌ ಗ್ರಿಲ್ಸ್‌ ಹೆಲಿಕಾಪ್ಟರ್‌ ಮೂಲಕ ಪ್ರಯಾಣ ಬೆಳೆಸಿದರು.

ರಜನಿಕಾಂತ್ ಮತ್ತು ಅಕ್ಷಯ್ ಕುಮಾರ್ ಅವರುಗಳು ದೊಡ್ಡ ನಟರು. ಅವರು ಹೇಗೆ ಬೇಕಾದರೂ ಇರಬಹುದು. ಅದನ್ನು ಯಾರೂ ಪ್ರಶ್ನಿಸಲು ಸಾಧ್ಯವಿಲ್ಲ. ಆದರೆ, ಯಾರಿಗೂ ಊಹಿಸಲು ಸಾಧ್ಯವಾಗದಷ್ಟು ಸರಳ ವ್ಯಕ್ತಿಗಳು. ನಾನು ಇದೇ ಮೊದಲ ಬಾರಿಗೆ ಅವರನ್ನು ಭೇಟಿಯಾಗಿದ್ದು. ‘ಸಾಹೆಬ್ರೆ’ ಎಂದೇ ಸಂಭೋದಿಸಿದರು. ಅವರ ಸರಳತೆ, ಇತರರನ್ನು ಗೌರವಿಸುವ ಗುಣ ನಿಜಕ್ಕೂ ಶ್ಲಾಘನಾರ್ಹ’ ಅಲ್ಲಿನ ಸಿಬ್ಬಂದಿಗಳು ನಟರುಗಳ ಸರಳತೆಯನ್ನು ಹೊಗಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

30 ನಿಮಿಷಗಳಲ್ಲಿ ಹಿಂದಕ್ಕೆ ಹೋಗಿ: ಶಾಂತಿ ಮಾತುಕತೆ ಮಧ್ಯೆ ಹಾರ್ಮುಜ್'ಗೆ ನುಗ್ಗಿದ ಅಮೆರಿಕದ Destroyer ಯುದ್ಧನೌಕೆಗೆ ಇರಾನ್ ಎಚ್ಚರಿಕೆ!

"ಇರಾನ್ ದೊಡ್ಡ ಮಟ್ಟದಲ್ಲಿ ಸೋಲುತ್ತಿದೆ": ಮಾತುಕತೆ ಮುಕ್ತಾಯಕ್ಕೂ ಮುನ್ನ ಟ್ರಂಪ್ ಘೋಷಣೆ

IPL 2026: ಸ್ಯಾಮ್ಸನ್ ಬ್ಯಾಟಿಂಗ್ ಅಬ್ಬರ; DC ವಿರುದ್ಧ CSK ಗೆ 23 ರನ್ ಗಳ ಭರ್ಜರಿ ಜಯ

ಖ್ಯಾತ ಗಾಯಕಿ ಆಶಾ ಭೋಸ್ಲೆಗೆ ಹೃದಯಾಘಾತ: ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲು

IPL 2026: ಚೆನ್ನೈ ಪರ ಸಂಜು ಸ್ಯಾಮ್ಸನ್ ಸ್ಫೋಟಕ ಬ್ಯಾಟಿಂಗ್; MS ಧೋನಿ ದಾಖಲೆ ಪುಡಿ; ದಿಗ್ಗಜರ ಗುಂಪಿಗೆ ಸೇರ್ಪಡೆ

SCROLL FOR NEXT