ನಿಪ್ಪಾಣಿ: ಗಾಂಜಾ ಮಾರುತ್ತಿದ್ದ ಮಹಿಳೆ ಬಂಧನ 
ರಾಜ್ಯ

ನಿಪ್ಪಾಣಿ: ಗಾಂಜಾ ಮಾರುತ್ತಿದ್ದ ಮಹಿಳೆ ಬಂಧನ

ಯುವಕರು ಮತ್ತು ಕಾಲೇಜು ವಿದ್ಯಾಥಿ೯ಗಳಿಗೆ ಗಾಂಜಾ ಮಾರುತ್ತಿದ್ದ ಮಹಾರಾಷ್ಟ್ರ ಮೂಲದ ಮಹಿಳೆಯೋವ೯ಳನ್ನು ಜಿಲ್ಲಾ ಅಪರಾಧ ದಳ (ಡಿಸಿಬಿ) ಪೊಲೀಸರು ನಿನ್ನೆ ತಡರಾತ್ರಿ ನಿಪ್ಪಾಣಿಯಲ್ಲಿ ಬಂಧಿಸಿದ್ದಾರೆ. 

ನಿಪ್ಪಾಣಿ: ಯುವಕರು ಮತ್ತು ಕಾಲೇಜು ವಿದ್ಯಾಥಿ೯ಗಳಿಗೆ ಗಾಂಜಾ ಮಾರುತ್ತಿದ್ದ ಮಹಾರಾಷ್ಟ್ರ ಮೂಲದ ಮಹಿಳೆಯೋವ೯ಳನ್ನು ಜಿಲ್ಲಾ ಅಪರಾಧ ದಳ (ಡಿಸಿಬಿ) ಪೊಲೀಸರು ನಿನ್ನೆ ತಡರಾತ್ರಿ ನಿಪ್ಪಾಣಿಯಲ್ಲಿ ಬಂಧಿಸಿದ್ದಾರೆ.

ಅನಿತಾ ಗಣಪತ ಕಾಳೆ (೪೫)  ಎಂಬಾಕೆಯನ್ನು ಬಂಧಿಸಲಾಗಿದ್ದು  ಬಂಧಿತಳಿಂದ ಸುಮಾರು ಎರಡು ಕೆಜಿ ಒಣಗಿದ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ. 

ಆರೋಪಿಯು ಮೂಲತ: ಮಹಾರಾಷ್ಟ್ರದ ಪಂಢರಪುರದವಳಾಗಿದ್ದು, ಕಳೆದ ೧೫ ವಷ೯ಗಳಿಂದ ನಿಪ್ಪಾಣಿ ಬಳಿಯ ಚಿಕಲೆ ಗ್ರಾಮದಲ್ಲಿ ವಾಸವಾಗಿದ್ದಳು ಎನ್ನಲಾಗಿದೆ.

ಎಸ್.ಪಿ ಲಕ್ಷ್ಮಣ ನಿಂಬರಗಿ ಅವರ ಮಾಗ೯ದಶ೯ನದಲ್ಲಿ ಸಿಪಿಐ ವೀರೇಶ ದೊಡಮನಿ, ಬಸವೇಶ್ವರ ಠಾಣೆ ಪಿಎಸ್ ಐ ಸುಬ್ಬಾಪುರಮಠ, ಎಎಸ್ ಐ ಆಶೋಕ ಭಜಂತ್ರಿ, ಮುಖ್ಯ ಪೇದೆಗಳಾದ ಎಸ್.ಸಿ.ಅಂಬಡಗಟ್ಟಿ ಮತ್ತು ಕುಮಾರ ಚಿನ್ನುಕೊಪ್ಪಿ ಅವರು ಕಾಯಾ೯ಚರಣೆ ನಡೆಸಿ, ನಿಪ್ಪಾಣಿ ಬಸ್ ನಿಲ್ದಾಣದಲ್ಲಿ ಅವಳನ್ನು ಬಂಧಿಸಿದ್ದಾರೆ.
 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತಗಳ್ಳತನ' ನಡೆದಿರುವುದನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ, ನನಗೆ ಆಶ್ಚರ್ಯವಾಯಿತು: ರಾಹುಲ್ ಗಾಂಧಿ

ಬೆಂಗಳೂರು: ನಮ್ಮ ಮೆಟ್ರೋದಲ್ಲಿ Alt News ಸಹ ಸ್ಥಾಪಕ ಮೊಹಮ್ಮದ್ ಜುಬೈರ್ ಗೆ ಹಿಗ್ಗಾಮುಗ್ಗ ಥಳಿತ?, Video Viral

19ನೇ ಓವರ್‌ನಲ್ಲೇ 250 ರನ್ ಚೇಸ್: ಟಿ20 ಕ್ರಿಕೆಟ್‌ನಲ್ಲಿ ಭಾರತವನ್ನು ಸೋಲಿಸಿ ದಾಖಲೆ ಬರೆದ ವಿಂಡೀಸ್

CJP Protest: ಭಾರತದ ಯುವಕರು ದೆಹಲಿಗೆ ತಲುಪುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಚಿರಾಗ್ ಪಾಸ್ವಾನ್

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್