ರಾಜ್ಯ

ತೆರಿಗೆ ಪಾವತಿಯಲ್ಲಿ ವಂಚಿಸಲು ಬಿಲ್ಡರ್ ಗಳಿಗೆ ಬಿಬಿಎಂಪಿ ಅಧಿಕಾರಿಗಳಿಂದ ನೆರವು: ಮೇಯರ್ ತನಿಖೆಗೆ ಆದೇಶ

Sumana Upadhyaya

ಬೆಂಗಳೂರು: ತೆರಿಗೆ ಪಾವತಿಗೆ ವಿನಾಯ್ತಿ ನೀಡಿ ಕೆಲವು ಬಿಲ್ಡರ್ ಗಳ ಪರವಾಗಿ ನಿಲ್ಲಲು ಯಲಹಂಕ ಬಿಬಿಎಂಪಿ, ಪೂರ್ವ ಮತ್ತು ಇತರ ವಲಯಗಳ ಅಧಿಕಾರಿಗಳು ಇಲ್ಲದಿರುವ ಕರ್ನಾಟಕ ನಗರ ಪಾಲಿಕೆ ಕಾಯ್ದೆಯನ್ನು ಉಲ್ಲೇಖಿಸುತ್ತಿದ್ದಾರೆ ಎಂದು ಪಾಲಿಕೆ ಸಭೆಯಲ್ಲಿ ಬಿಜೆಪಿ ಸದಸ್ಯ ಪದ್ಮನಾಭ ರೆಡ್ಡಿ ಆರೋಪಿಸಿದ್ದಾರೆ.

ಯಲಹಂಕದಲ್ಲಿ ಯೀಸ್ಟ್ ವೆಸ್ಟ್ ಹೊಟೇಲ್ ಮ್ಯಾನೆಜ್ ಮೆಂಟ್ ಉದಾಹರಣೆ ನೀಡಿದ ಅವರು, 8 ಹೊಟೇಲ್ ಗಳಿಂದ 251 ಕೋಟಿ ರೂಪಾಯಿ ತೆರಿಗೆ ಪಾವತಿಗೆ ವಿನಾಯ್ತಿ ನೀಡಲಾಗಿದೆ ಎಂದು ಕೆಎಸ್ ಸಿ ಕಾಯ್ದೆ 108(ಎ)-14-ಇಯನ್ನು ಉಲ್ಲೇಖಿಸಿದರು. ಆದರೆ ಕಾನೂನಿನಲ್ಲಿ ಅಂತಹ ಯಾವುದೇ ಕಾಯ್ದೆಗಳಿಲ್ಲ.

ಇದನ್ನು ಕೇಳಿದ ಮೇಯರ್ ಎಂ ಗೌತಮ್ ಕುಮಾರ್ ಮತ್ತು ಬಿಬಿಎಂಪಿ ಆಯುಕ್ತ ಬಿ ಎಚ್ ಅನಿಲ್ ಕುಮಾರ್ ಅಚ್ಚರಿ ವ್ಯಕ್ತಪಡಿಸಿದರು. ಈ ಸಂಬಂಧ ಪಾಲಿಕೆಗೆ ಸಲ್ಲಿಸಿದ ವರದಿಗಳು ಮತ್ತು ಕೆಎಂಸಿ ನಿಯಮ ಪುಸ್ತಕಗಳನ್ನು ಶೋಧಿಸುವಂತೆ ಇಬ್ಬರು ಮುಖ್ಯಸ್ಥರಿಗೆ ಸೂಚಿಸಿದರು.

ನಂತರ ನಿಯಮ ಪುಸ್ತಕಗಳನ್ನು ತೀವ್ರ ಪರಿಶೀಲನೆ ಮಾಡಿದಾಗ ಇಂತಹ ಯಾವುದೇ ಕಾನೂನುಗಳಿಲ್ಲ, ಇದು ಅಧಿಕಾರಿಗಳಿಂದ ಆದ ತಪ್ಪು ಎಂದು ಆಯುಕ್ತರು ಒಪ್ಪಿಕೊಂಡರು.

ಇದೇ ರೀತಿ ಬೊಮ್ಮನಹಳ್ಳಿಯಲ್ಲಿ ಮತ್ತೊಬ್ಬ ಬಿಬಿಎಂಪಿ ಅಧಿಕಾರಿ ಮತ್ತೊಂದು ಕೆಎಂಸಿ ಕಾಯ್ದೆಯನ್ನು ಬಳಸಿ ತೆರಿಗೆ ವಂಚಕರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ ಎಂದರು. ಲೋಪದೋಷಗಳನ್ನು ಒಪ್ಪಿಕೊಂಡ ಮೇಯರ್ ಸಮಗ್ರ ವರದಿಗೆ ಮತ್ತು ತನಿಖೆಗೆ ಆದೇಶ ಹೊರಡಿಸಿದರು.

SCROLL FOR NEXT