ರಾಜ್ಯ

ಮೆಟ್ರೊ ಸಿಬ್ಬಂದಿಗೆ ಕೊರೋನಾ ಪಾಸಿಟಿವ್: ಕಚೇರಿಯ ಮಹಡಿ ಸೀಲ್ ಡೌನ್

Sumana Upadhyaya

ಬೆಂಗಳೂರು: ಸಿಬ್ಬಂದಿಗೆ ಕೊರೋನಾ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಶಾಂತಿನಗರದ ಟಿಟಿಎಂಸಿ ಕಾಂಪ್ಲೆಕ್ಸ್ ನಲ್ಲಿ ಇರುವ ಮೆಟ್ರೊ ಸಂಸ್ಥೆಯ ಕಚೇರಿಯ ಮಹಡಿಯೊಂದನ್ನು ಸೀಲ್ ಡೌನ್ ಮಾಡಲಾಗಿದೆ.

ಮೆಟ್ರೊ ಸಂಸ್ಥೆಯ ಎರಡು ಕಚೇರಿ ಇಲ್ಲಿದ್ದು ಮುಖ್ಯ ಕಚೇರಿಯಲ್ಲಿ ಆಡಳಿತ, ಹಣಕಾಸು ಮತ್ತು ಸಾರ್ವಜನಿಕ ಸಂಪರ್ಕಾಧಿಕಾರಿಗಳ ಕಚೇರಿಯಿದ್ದು ಅದು ಮೂರನೇ ಮಹಡಿಯಲ್ಲಿದೆ. ಅನುಬಂಧ ಕಟ್ಟಡದಲ್ಲಿ ಎರಡನೇ ಕಚೇರಿಯಿದೆ. ಅಲ್ಲಿ ವಿನ್ಯಾಸ ತಂಡ ಮತ್ತು ಸಿಗ್ನಲ್ ವ್ಯವಸ್ಥೆಗಳ ಕೇಂದ್ರಗಳಿವೆ. ವಿನ್ಯಾಸ ತಂಡದಲ್ಲಿರುವ ಸಿಬ್ಬಂದಿಗೆ ಕೊರೋನಾ ಪಾಸಿಟಿವ್ ಬಂದಿದೆ.

ಈ ಬಗ್ಗೆ ಮಾಹಿತಿ ನೀಡಿದ ಬಿಎಂಆರ್ ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಅಜಯ್ ಸೇಥ್, ಸಿಬ್ಬಂದಿಗೆ ಯಾವುದೇ ಕೊರೋನಾ ಲಕ್ಷಣಗಳಿರಲಿಲ್ಲ.ಕಚೇರಿಯನ್ನು ಸ್ಯಾನಿಟೈಸರ್ ನಿಂದ ಸ್ವಚ್ಛಗೊಳಿಸಲಾಗಿದ್ದು ಮೂರು ದಿನಗಳವರೆಗೆ ಮುಚ್ಚಲಾಗಿದೆ. ನಾಳೆ ಮತ್ತೊಂದು ಸುತ್ತಿನ ಸ್ಯಾನಿಟೈಸ್ ಮಾಡಲಿದ್ದೇವೆ. ಸೋಮವಾರದಿಂದ ಕಚೇರಿ ಮತ್ತೆ ತೆರೆಯಲಿದೆ ಎಂದರು.

ಕಳೆದ 5 ದಿನಗಳಿಂದೀಚೆಗೆ ಅವರ ಸಂಪರ್ಕದಲ್ಲಿದ್ದ ಇತರ ಸಿಬ್ಬಂದಿಯನ್ನು ಹೋಮ್ ಕ್ವಾರಂಟೈನ್ ನಲ್ಲಿರುವಂತೆ ಸೂಚಿಸಲಾಗಿದೆ ಎಂದರು.

ಬಿಎಂಆರ್ ಸಿಎಲ್ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಬಿ ಎಲ್ ಯಶವಂತ್ ಚವಾಣ್, 5ನೇ ಮಹಡಿ ಮಾತ್ರ ಸೀಲ್ ಡೌನ್ ಮಾಡಲಾಗಿದೆ ಎಂದರು. ಇದೇ ಕಟ್ಟಡದಲ್ಲಿ ಬಿಎಂಟಿಸಿ ಮತ್ತು ಇತರ ರಾಜ್ಯ ಸರ್ಕಾರಿ ಕಚೇರಿಗಳಿವೆ.

SCROLL FOR NEXT