ರಾಜ್ಯ

ಗೌರವಧನ ಹೆಚ್ಚಳಕ್ಕೆ ಅಗ್ರಹಿಸಿ ಜುಲೈ 10 ರಿಂದ ಆಶಾ ಕಾರ್ಯಕರ್ತೆಯರ ರಾಜ್ಯವ್ಯಾಪಿ ಮುಷ್ಕರ

Lingaraj Badiger

ಬಳ್ಳಾರಿ: ತಮಗೆ ನೀಡುತ್ತಿರುವ ಮಾಸಿಕ ಗೌರವ ಧನವನ್ನು 12 ಸಾವಿರ ರೂಗಳಿಗೆ ನಿಗದಿಪಡಿಸಬೇಕಂದು ಆಗ್ರಹಿಸಿ ರಾಜ್ಯಾದ್ಯಂತ ಜುಲೈ 10 ರಿಂದ ಅನಿರ್ಧಿಷ್ಟಾವಧಿ ಮುಷ್ಕರ ನಡೆಸಲು ಆಶಾ ಕಾರ್ಯಕರ್ತೆಯರು ಮುಂದಾಗಿದ್ದಾರೆ.

ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ರಾಜ್ಯ ಕಾರ್ಯದರ್ಶಿ ಡಿ.ನಾಗಲಕ್ಷ್ಮಿ ಇಂದು ಬಳ್ಳಾರಿಯ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿ ನಡೆಸಿ ಈ‌ ಮಾಹಿತಿ ನೀಡಿದ್ದಾರೆ.

ಕೊರೋನಾ ಸಂಕಷ್ಟದ ಕಾಲದಲ್ಲಿ ಅದರ ನಿಯಂತ್ರಣಕ್ಕೆ ಹಗಲಿರುಳು‌ ಕಾರ್ಯನಿರ್ವಹಿಸುವ ಕರ್ನಾಟಕದ ಆಶಾಗಳ‌ ಕಾರ್ಯವನ್ನು ಕೇಂದ್ರ ಸರಕಾರವೂ ಸ್ಮರಿಸಿದೆ. ಮುಖ್ಯ‌ಂಮತ್ರಿಗಳ‌ ಆದಿಯಾಗಿ ಸಚಿವರು, ಶಾಸಕರು, ಸಂಸದರು, ಅಧಿಕಾರಿಗಳು ಸಹ ಪ್ರಶಂಸಿದ್ದಾರೆ. ಆದರೆ ಇದರಿಂದ ಅವರ ಬದುಕು ಹಸನಾಗಲ್ಲ. ಅವರಿಗೆ ಕೋವಿಡ್ ಕಾಲದಲ್ಲಿ ಕೇಂದ್ರ ಸರಕಾರ ನೀಡುತ್ತಿರುವ ಮಾಸಿಕ ಎರೆಡು ಸಾವಿರ ಪ್ರೊಇತ್ಸಾಹ ಧನ‌ ಕಳೆದ ಮೂರು ತಿಂಗಳಿಂದ ಬಂದಿಲ್ಲ, ರಾಜ್ಯ ಸರಕಾರದಿಂದಲೂ ಒಂದು ತಿಂಗಳಿಂದ ನೀಡಿಲ್ಲ, ಹಳ್ಳಿಗಳಲ್ಲು ಆರೋಗ್ಯ ವ್ಯವಸ್ಥೆಯಲ್ಲಿ‌ ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿರುವ ಆಶಾಗಳ ಸೆವೆಯನ್ನು ಖಾತರಿ ಪಡಿಸುವ‌ ನಿಟ್ಟಿನಲ್ಲಿ ಅವರಿಗೆ ಮಾಸಿಕ‌ 12 ಸಾವಿರ ಗೌರವ ಧನ ನಿಗದಿ ಮಾಡಿ ಎಂದು ಈಗಾಗಲೇ‌ ಹತ್ತಾರು ಬಾರಿ ಸಚಿವರಿಗೆ, ಶಾಸಕರಿಗೆ ಮನವಿ ಸಲ್ಲಿಸಿದೆ. ಆದರೆ ಈ ಬಗ್ಗೆ ಸರಕಾರದಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಅದಕ್ಕಾಗಿ ಜುಲೈ 10 ರಿಂದ ಮುಷ್ಕರ ನಡೆಸಲು ಮುಂದಾಗಿದೆ. ಕೋವಿಡ್ ದಿನೇ ದಿನೇ ಹೆಚ್ಚುತ್ತಿರುವ ಈ ಸಂದರ್ಭದಲ್ಲಿ ಇದು ಸಕಾರಣವಲ್ಲವಾದರೂ ಅನಿವಾರ್ಯವಾಗಿ ಸರಕಾರ ನಮ್ಮ ಬಗ್ಗೆ ಚಿಂತಿಸಿ ಗೌರವ ಧನ‌ ಹೆಚ್ಚಳ ಮಾಡಲಿ ಎಂಬ‌ ಕಾರಣಕ್ಕೆ ಮುಷ್ಕರಕ್ಕೆ ನಿರ್ಧರಿಸಿದೆ. ಅಷ್ಟರೊಳಗೆ ಸರಕಾರ ನಮ್ಮೊಡನೆ ಮಾತುಕತೆ ನಡೆಸಿ ನಿರ್ಧಾರಕ್ಕೆ ಬರಬೇಕು ಎಂದರು.

ಕೋವಿಡ್ ಕಾಲದಲ್ಲಿ ಕೆಲಸ ಮಾಡಿದ್ದಕ್ಕೆ ರಾಜ್ಯ ಸರಕಾರ ರಾಜ್ಯದಲ್ಲಿನ 42 ಸಾವಿರ ಆಶಾಗಳಿಗೆ ತಲಾ ಮೂರು ಸಾವಿರ ರೂ ಪ್ರೋತ್ಸಾಹ ಧನ‌ ನೀಡುವುದಾಗಿ ಹೇಳಿ, ಎಲ್ಲಾ ಜಿಲ್ಲೆಗಳಲ್ಲಿ‌ ಸಾಂಕೇತಿಕವಾಗಿ ಸಹಕಾರ ಸಚಿವರು ನೀಡಿದ್ದಾರೆ. ಇದು ಶೇ. 40 ರಷ್ಟು ದಾಟಿಲ್ಲ. ಇನ್ನೂ 25 ಸಾವಿರ ಆಶಾಗಳಿಗೆ ಬಂದಿಲ್ಲ ಎಂದು ಆರೋಪಿಸಿದರು.

SCROLL FOR NEXT