ರಾಜ್ಯ

ಮೈಸೂರು: ಜಾತಿ-ಮತ-ಬೇಧವಿಲ್ಲದೇ ಕೋರೋನಾದಿಂದ ಸಾವನ್ನಪ್ಪಿದವರಿಗೆ ಗೌರವಯುತ ಅಂತ್ಯ ಸಂಸ್ಕಾರ

Shilpa D

ಮೈಸೂರು: ಕೊರೋನಾದಿಂದ  ಸಾವನ್ನಪ್ಪಿದವರ ಶವಗಳ ಸರಿಯಾದ ಅಂತ್ಯ ಸಂಸ್ಕಾರ ನಡೆಯುತ್ತಿಲ್ಲ ಎಂದು ಹಲವು ಕಡೆ ವರದಿಯಾಗುತ್ತಿದ್ದರೇ, ಮೈಸೂರಿನ ಮುಸ್ಲಿಂ ಸಮುದಾಯದ ಗುಂಪೊಂದು ಕೊರೋನಾ ರೋಗಿಗಳಿಗೆ ಗೌರವಯುತ ವಿದಾಯ ಹೇಳುತ್ತಿದ್ದಾರೆ.

ಕೊರೋನಾದಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮುಸ್ಲಿಂ ಸಮುದಾಯದ 20 ಮಂದಿ ಸ್ವಂ ಸೇವಕರ ತಂಡ ಕೊರೋನಾದಿಂದ ಸಾವನ್ನಪ್ಪಿದವರ ದೇಹವವನ್ನು ಅಂತ್ಯಸಂಸ್ಕಾರ ಮಾಡುತ್ತಿದ್ದಾರೆ. ಯಾವುದೇ ಜಾತಿ ಧರ್ಮದ ನೋಡದೆ ಎಲ್ಲಾ ಶವಗಳಿಗೂ ಗೌರವಯುತವಾಗಿ ವಿದಾಯ ಹೇಳುತ್ತಿದ್ದಾರೆ.

ಮಾಜಿ ಮೇಯರ್ ಅಯೂಬ್ ಖಾನ್ ಮತ್ತು ಕಾರ್ಪೋರೇಟರ್ ಆರಿಫ್ ಹುಸೇನ್ ಅವರ ಸಲಹೆಯ ಮೇರೆಗೆ  20 ಮಂದಿಯ ತಂಡ ರಚಿಸಲಾಯಿತು. ಅಧಿಕಾರಿಗಳು ಸಮ್ಮತಿಸಿದ ಮೇಲೆ ಟಿಪ್ಪು ಸರ್ಕಲ್ ನಲ್ಲಿರುವ ಸ್ಮಶಾನದಲ್ಲಿ ಕೊರೋನಾದಿಂದ ಸಾವನ್ನಪ್ಪಿದ ರೋಗಿಗಳ ಅಂತ್ಯ ಸಂಸ್ಕಾರ ನಡೆಸುತ್ತಿದ್ದಾರೆ.

ಕೊರೋನಾ ದಿಂದ ಸಾವನ್ನಪ್ಪಿದವರ ಅಂತ್ಯ ಸಂಸ್ಕಾರ ನಡೆಸಲು ಪ್ರತ್ಯೇಕ ಸ್ಥಳ ಗುರುತಿಸಲಾಗಿದ್ದು, ಶವಗಳನ್ನು ಮೈಸೂರು ಮಹಾನಗರ ಪಾಲಿಕೆ ವ್ಯಾನ್ ನಲ್ಲಿ ಸಾಗಿಸಲಾಗುತ್ತದೆ. ಆ್ಯಂಬುಲೆನ್ಸ್ ಗಾಗಿ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಕಾರ್ಪೋರೇಟರ್ ಹಸ್ರತುಲ್ಲಾ ಖಾನ್ ತಿಳಿಸಿದ್ದಾರೆ.

ಡಿ ಗ್ರೂಪ್ ನೌಕರರು ಕೊರೋನಾದಿಂದ ಸಾವನ್ನಪ್ಪಿದವರ ಅಂತ್ಯ ಸಂಸ್ಕಾರದಲ್ಲಿ ನೆರವಾಗಲಿದ್ದಾರೆ, ಕೇವಲ ಇವರು ಮಾತ್ರವಲ್ಲದೇ ಮೈಸೂರಿನ ಹಲವು ಸ್ವಯಂ ಸೇವಾ ತಂಡಗಳು ಇದೇ ರೀತಿ ಕಾರ್ಯ ನಿರ್ವಹಿಸುತ್ತಿವೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಶಿರಾಜ್ ಅಹ್ಮದ್ ಹೇಳಿದ್ದಾರೆ.

SCROLL FOR NEXT