ರಾಜ್ಯ

ಹಳ್ಳಿಗರು ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಮಾಡಲು ಇಲ್ಲೊಂದು ಹೊಸ ಐಡಿಯಾ!

Shilpa D

ಬೆಂಗಳೂರು:  ಗ್ರಾಮೀಣ ಪ್ರದೇಶಗಳಿಗಗೆ ತೆರಳುವ ಸಂದರ್ಶಕರಿಗೆ ಕುಳಿತುಕೊಳ್ಳಲು ಸ್ವಚ್ಛವಾದ ಜಾಗ ಸಿಗದೇ ಇರಬಹುದು, ಕುಳಿತು ಕೊಳ್ಳುವ ಜಾಗ ಎಣ್ಣೆ ಮಯವಾಗಿರಲೂಬಹುದು, ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಇದೊಂದು ಹೊಸ ಐಡಿಯಾವಾಗಿದೆ.

ಹಳ್ಳಿಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು  ಪಂಚಾಯತ್ ರಾಜ್ ಇಲಾಖೆ ಹೊಸ ವಿಧಾನ ಯೋಜಿಸಿದೆ, ಗ್ರಾಮಸ್ಥರು ತಮ್ಮ ದೈನಂದಿನ ಸಾಮಾಜಿಕ ಜೀವನದಲ್ಲಿ ಸುರಕ್ಷಿತವಾಗಿರಿಸಲು ಹಲವು ಕ್ರಮ ಕೈಗೊಂಡಿದೆ.

ಪರಸ್ಪರ ಅಕ್ಕ ಪಕ್ಕ ಕುಳಿತುಕೊಳ್ಳಲು ಬಿಡದೇ ಆರು ಅಡಿ ದೂರ ಅಂತರ ಕಾಯ್ದುಕೊಳ್ಳುವಂತೆ ಗುರುತು ಮಾಡುವಂತೆ ಅಧಿಕಾರಿಗಳಿಗೆ ತಿಳಿಸಲಾಗಿದೆ. 

ರಾಜ್ಯದ 6 ಸಾವಿರ ಗ್ರಾಮ ಪಂಚಾಯಿತಿಗಳಿಗೆ ಪಂಚಾಯತ್ ರಾಜ್ ಇಲಾಖೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳುವಂತೆ ಸೂಚಿಸಿದೆ, ಜೊತೆಗೆ ಅಲ್ಲಿನ ಜನತೆಗೆ ಸಾರ್ವಜನಿಕ ಸ್ಥಳಗಳಲ್ಲಿ   ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಅವರಿಗೆ ಶಿಕ್ಷಣ ನೀಡುವಂತೆ ತಿಳಿಸಿದೆ, ಜೊತೆಗೆ ಹೊಸ ವಿಧಾನಗಗಳನ್ನು ಅನುಸರಿಸುವಂತೆ ತಿಳಿಸಿದೆ.

ಎಲ್ಲಾ ಗ್ರಾಮಗಳ ಸಾರ್ವಜನಿಕ ಸ್ಥಳಗಳಲ್ಲಿ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಂಡಿದ್ದು ಬಸ್ ನಿಲ್ದಾಣಗಳಲ್ಲಿ ಸೋಪು ಮತ್ತು ನೀರಿನ ವ್ಯವಸ್ಥೆ ಮಾಡಿದ. ಹೀಗಾಗಿ ಅಲ್ಲಿಗೆ ಬರುವವರು ತಮ್ಮ ಕೈಗಳನ್ನು ಸ್ವಚ್ಛಗೊಳಿಸಿಕೊಳ್ಳಬಹುದಾಗಿದೆ.ಜೊತೆಗೆ ಸ್ವಚ್ಚತೆ ಅನುಸರಿಸುವಂತೆ ಊರಿನಲ್ಲಿ ತಮಟೆ ಭಾರಿಸುವ ಮೂಲಕ ಜನರಿಗೆ ಅರಿವು ಮೂಡಿಸಲು ಸೂಚಿಸಿಲಾಗಿದೆ.

ಹಳ್ಳಿಗಳಲ್ಲಿ, ತಂತ್ರಜ್ಞಾನವು ಕಾರ್ಯನಿರ್ವಹಿಸದೆ ಇರಬಹುದು. ಆದ್ದರಿಂದ ನಾವು ಅವುಗಳನ್ನು ಸುರಕ್ಷಿತವಾಗಿಡಲು ಸಾಂಪ್ರದಾಯಿಕ ಮಾರ್ಗವನ್ನು ಅನುಸರಿಸುತ್ತಿದ್ದೇವೆ ”ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

ಜನರು ಮುಖವಾಡಗಳನ್ನು ಧರಿಸದಿದ್ದರೆ 100 ರೂ.ಗಳ ದಂಡ ವಿಧಿಸುವಂತೆ ಅವರಿಗೆ ಸೂಚಿಸಲಾಗಿದೆ. ಬಡವರಿಗೆ ಮತ್ತು ನಿರ್ಗತಿಕರಿಗೆ ಮಾಸ್ಕ್ಉಚಿತವಾಗಿ ವಿತರಿಸಲು ಸುತ್ತೋಲೆ ಅಧಿಕಾರಿಗಳಿಗೆ ನಿರ್ದೇಶಿಸಲಾಗಿದೆ.

SCROLL FOR NEXT