ಪತ್ತೆಯಾದ ದೇವಾಲಯ 
ರಾಜ್ಯ

ಚಿಕ್ಕಮಗಳೂರು: ವಿಜಯನಗರ ಕಾಲದ ಅಪರೂಪದ ದೇವಾಲಯ ಪತ್ತೆ

ಭದ್ರಾ ನದಿ ದಡದ ಪಂಚತೀರ್ಥಗಳಲ್ಲೊಂದಾದ ವಶಿಷ್ಟತೀರ್ಥದ ಬಳಿ ಮಲೆನಾಡಿನಲ್ಲಿ ವಿಜಯನಗರ ಕಾಲದ ಅಪರೂಪವಾದ ‘ವೀರಮಹಾಸತಿ ಗುಡಿ’ಯನ್ನು ಇತಿಹಾಸ ಸಂಶೋಧಕ ಎಚ್.ಆರ್.ಪಾಂಡುರಂಗ ಸಂಶೋಧನೆ ಮಾಡಿದ್ದಾರೆ. 

ಚಿಕ್ಕಮಗಳೂರು: ಭದ್ರಾ ನದಿ ದಡದ ಪಂಚತೀರ್ಥಗಳಲ್ಲೊಂದಾದ ವಶಿಷ್ಟತೀರ್ಥದ ಬಳಿ ಮಲೆನಾಡಿನಲ್ಲಿ ವಿಜಯನಗರ ಕಾಲದ ಅಪರೂಪವಾದ ‘ವೀರಮಹಾಸತಿ ಗುಡಿ’ಯನ್ನು ಇತಿಹಾಸ ಸಂಶೋಧಕ ಎಚ್.ಆರ್.ಪಾಂಡುರಂಗ ಸಂಶೋಧನೆ ಮಾಡಿದ್ದಾರೆ. 

‘ಕಳಸದ  ಅರಣ್ಯ ಇಲಾಖೆಯ ನರ್ಸರಿ ಪಕ್ಕದಲ್ಲಿ ನಾಲ್ಕು ಅಡಿ ಎತ್ತರದ ಕಣಶಿಲೆಯ ಕಲ್ಲಿನಲ್ಲಿ ವೀರ- ಮಹಾಸತಿ ಶಿಲ್ಪವಿದೆ. ವೀರ ಮಹಾಸತಿಯರ ಕುತ್ತಿಗೆಯವರೆಗೆ ಹುತ್ತವು ಮುಚ್ಚಿಕೊಂಡಿದೆ.

ಈ ಶಿಲಾ ಸ್ಮಾರಕ ಎರಡು ಫಲಕ ಹೊಂದಿದ್ದು, ಕೆಳಗಿನ ಫಲಕದಲ್ಲಿ ವೀರನಶಿಲ್ಪ ಖಡ್ಗಧಾರಿಯಾಗಿದ್ದು ಅವನು ಧರಿಸಿದ ಶಿರೋಭೂಷಣ, ಕಿವಿಯಲ್ಲಿ ಧರಿಸಿದ ಕರ್ಣಕುಂಡಲ ಆಕರ್ಷಕವಾಗಿವೆ. 

ಬಲಭಾಗದ ಆತನ ಪತ್ನಿ ವೀರಮಹಾಸತಿ  ಆಕರ್ಷಕ ಕೇಶಾಲಂಕಾರ, ಕರ್ಣಕುಂಡಲ ಧರಿಸಿದ್ದು ಮೇಲೆತ್ತಿದ ಎರಡೂ ಕೈಗಳಲ್ಲಿ ಕನ್ನಡಿ ಹಾಗೂ ನಿಂಬೆ ಹಣ್ಣು ಹಿಡಿದಂತಿದೆ’ ಎಂದು ಸಂಶೋಧಕ ಎಚ್.ಆರ್.ಪಾಂಡುರಂಗ ಹೇಳಿದ್ದಾರೆ.

ಈ ವೀರ ಮಹಾಸತಿ ಶಿಲ್ಪ 14ನೇ ಶತಮಾನದ ಭೈರವರಸರ ಆಡಳಿತದ ಶಿಲ್ಪವಾಗಿದ್ದು, ವಿಜಯನಗರ ಸಾಮ್ರಾಜ್ಯದ ಆರಂಭ ಕಾಲಕ್ಕೆ ಸೇರಿರಬಹುದು ಎಂದು ಊಹಿಸಬಹುದಾಗಿದೆ’ ಎಂದು ತಿಳಿಸಿದ್ದಾರೆ. 

ಸ್ಮಾರಕದ ಮೇಲಿನ ಫಲಕದಲ್ಲಿ ಎಡಭಾಗದಲ್ಲಿ ಶಿವಲಿಂಗದ ಮುಂದೆ ಮಂಡಿಯೂರಿ ಕುಳಿತ ಶಿವನ ವಾಹನ ಸರ್ವಾಲಂಕೃತ ನಂದಿ, ಶಿವಲಿಂಗ, ಘಂಟಾ ನಾದ ಮಾಡುತ್ತಾ ದೀಪಾರತಿ ಮಾಡುತ್ತಿರುವ ಅರ್ಚಕರು ಹಾಗೂ ಅವರ ಪಕ್ಕದಲ್ಲಿ ದೀಪದ ಕಂಭವಿದ್ದು, ಶಿವಲಿಂಗದ ಮೇಲೆ ಎಡಭಾಗದಲ್ಲಿ ಸೂರ್ಯ, ಬಲಭಾಗದಲ್ಲಿ ಚಂದ್ರನ ಚಿತ್ರಣಗಳಿವೆ.
 
ವೀರ-ಮಹಾಸತಿ ಇಬ್ಬರೂ ಕೈಲಾಸ ವಾಸಿಗಳಾಗಿದ್ದಾರೆ ಎಂದು ಅರ್ಥೈಸಬಹುದು’ ಎಂದು ಹೇಳಿದ್ದಾರೆ. ‘ಈ ಸ್ಮಾರಕದ ವೀರ- ಮಹಾಸತಿಯರ ಶಿರೋಭೂಷಣ- ಕೇಶಾಲಂಕಾರ ಅವರು ನಿಂತ ನಿಲುವು ಗಮನಿಸಿದರೆ ಈ ಶಿಲ್ಪದಲ್ಲಿನ ವೀರ ಕಳಸ ನಾಡಿನ ಸೈನ್ಯಾಧಿಪತಿಯೋ, ರಾಜಕುಟುಂಬದ ಸದಸ್ಯನೋ ಆಗಿದ್ದು ಯಾವುದೋ ಯುದ್ಧದಲ್ಲಿ ವೀರ ಮರಣಹೊಂದಿದ್ದು, ಅವನೊಂದಿಗೆ ಅವನ ಮಡದಿ ಸಹಗಮನ ಮಾಡಿದ್ದು ಅವರ ಸ್ಮರಣಾರ್ಥ ಅವರಿಬ್ಬರ ಸ್ಮಾರಕಶಿಲ್ಪ ಪ್ರತಿಷ್ಠಾಪಿಸಿ ಶಿಲಾಮಂಟಪ ಕಟ್ಟಿಸಿ ನಿತ್ಯ ಪೂಜೆ
ಮಾಡುತ್ತಿದ್ದರು ಎನ್ನಬಹುದಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT