ನಾರಾಯಣ ಗೌಡ 
ರಾಜ್ಯ

ರೇಷ್ಮೆ ಗೂಡಿಗೆ ರಕ್ಷಣಾತ್ಮಕ ದರ ನೀಡಲು 10 ಕೋಟಿ ರೂ. ಹಣ ಮಂಜೂರು: ಸಚಿವ ಡಾ. ನಾರಾಯಣಗೌಡ

ಕೋವಿಡ್ -19 ಹಿನ್ನೆಲೆಯಲ್ಲಿ ರೇಷ್ಮೆ ಗೂಡಿನ ದರ ಕುಸಿದಿತ್ತು.ಸಂಕಷ್ಟ ಕ್ಕೆ ಸಿಲುಕಿದ ರೈತರ ರಕ್ಷಣೆಗಾಗಿ ಸರ್ಕಾರ ರೇಷ್ಮೆ ಗೂಡಿಗೆ ರಕ್ಷಣಾತ್ಮಕ ದರ ನೀಡಲು ತೀರ್ಮಾನಿಸಿ 10 ಕೋಟಿ ರೂ. ಹಣವನ್ನೂ ಬಿಡುಗಡೆ ಮಾಡಿದೆ. 

ಬೆಂಗಳೂರು: ಕೋವಿಡ್ -19 ಹಿನ್ನೆಲೆಯಲ್ಲಿ ರೇಷ್ಮೆ ಗೂಡಿನ ದರ ಕುಸಿದಿತ್ತು.ಸಂಕಷ್ಟ ಕ್ಕೆ ಸಿಲುಕಿದ ರೈತರ ರಕ್ಷಣೆಗಾಗಿ ಸರ್ಕಾರ ರೇಷ್ಮೆ ಗೂಡಿಗೆ ರಕ್ಷಣಾತ್ಮಕ ದರ ನೀಡಲು ತೀರ್ಮಾನಿಸಿ 10 ಕೋಟಿ ರೂ. ಹಣವನ್ನೂ ಬಿಡುಗಡೆ ಮಾಡಿದೆ. 

ರೇಷ್ಮೆ ರೀಲರ್ಸ್ ಗಳಿಗೆ ಅಡಮಾನ ಸಾಲದ ಮಿತಿಯನ್ನು 2 ಲಕ್ಷ ರೂ.ಗೆ ಏರಿಸಿದ್ದಲ್ಲದೆ 20 ಕೋಟಿ. ರೂ ಹಣ ವನ್ನೂ ಮಂಜೂರು ಮಾಡಲಾಗಿದೆ.ಕೋವಿಡ್ -19 ಹಿನ್ನೆಲೆಯಲ್ಲಿ ರೇಷ್ಮೆ ಗೂಡಿನ ದರ ಕುಸಿದು ರೈತರು ಸಂಕ ಷ್ಟಕ್ಕೆ ಸಿಲುಕಿದ್ದರು. ಈ ಸಂಬಂಧ ರೇಷ್ಮೆ ಸಚಿವ ನಾರಾಯಣಗೌಡರಿಗೆ ಮನವಿ ಸಲ್ಲಿಸಿದ್ದರು. 

ಈ ಸಂಬಂಧ ತಕ್ಷಣವೇ ಅಧಿಕಾರಿಗಳ ಜೊತೆ ಸಭೆ ನಡೆಸಿ, ರೈತರಿಗೆ ರಕ್ಷಣಾತ್ಮಕ ದರ ನೀಡಲು ಸಚಿವರು ಸೂಚಿಸಿ ತಕ್ಷಣವೇ 10 ಕೋಟಿ ರೂ. ಹಣವನ್ನೂ ಬಿಡುಗಡೆ ಮಾಡುವಂತೆ ಸೂಚನೆ ನೀಡಿದ್ದಾರೆ. ಮಾರುಕಟ್ಟೆಯಲ್ಲಿ ರೇಷ್ಮೆ ಗೂಡಿನ ಗುಣಮಟ್ಟ ಆಧರಿಸಿ ದರ ನಿಗದಿ ಮಾಡಲಾಗುತ್ತೆ. ಗುಣಮಟ್ಟಕ್ಕೆ ನಿಗದಿಪಡಿ ಸಿರುವ ದರ ಸಿಗದೆ ಇದ್ದಲ್ಲಿ, ಸರ್ಕಾರ ರಕ್ಷಣಾತ್ಮಕ ದರ ನೀಡಲಿದೆ.ಪ್ರತಿ ಕೆ.ಜಿ. ರೇಷ್ಮೆ ಗೂಡಿಗೆ 50 ರೂ. ಮೀರ ದಂತೆ ರಕ್ಷಣಾತ್ಮಕ ದರ ನೀಡಲು ಸರ್ಕಾರ ನಿರ್ಧಿರಿಸಿದೆ.

ಇದರಿಂದ ರೈತರಿಗೆ ದರ ಕುಸಿತದಿಂದ ಕಂಗಾಲಾಗಿದ್ದ ರೈತರಿಗೆ ಅನುಕೂಲವಾಗಲಿದೆ. ಕೆಲ ತಿಂಗಳ ಹಿಂದಿನಿಂದಲೇ ದರ ಕುಸಿತವಾಗಿರುವ ಕಾರಣ ಹಿಂದೆ ಆಗಿರುವ ನಷ್ವ ನ್ನೂ ರೈತರಿಗೆ ಭರಿಸಲು ತೀರ್ಮಾನಿಸಲಾಗಿದೆ. ರಕ್ಷಣಾತ್ಮಕ ದರವನ್ನು ಎಪ್ರಿಲ್ 1 ರಿಂದಲೇ ಅನ್ವಯ ವಾಗುವಂತೆ ನೀಡಲು ಸೂಚಿಸಲಾಗಿದೆ. ಇದಕ್ಕಾಗಿ 10 ಕೋಟಿ ರೂ.ಹಣ ಬಿಡುಗಡೆ ಮಾಡಲಾಗಿದ್ದು, ಮುಂದೆ ಯೂ ರೇಷ್ಮೆ ಬೆಳೆಗಾರರಿಗೆ ಸಮಸ್ಯೆ ಎದುರಾದಲ್ಲಿ ಅಗತ್ಯ ಕ್ರಮ ವಹಿಸಲು ಸಚಿವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ರಕ್ಷಣಾತ್ಮಕ ದರದ ಹಣವೂ ನೇರವಾಗಿ ರೈತರ ಖಾತೆಗೆ ಜಮಾ ಮಾಡಲು ಕ್ರಮ ವಹಿಸಲಾಗಿದೆ.ಇದರಿಂದ ಸರ್ಕಾರದ ನೆರವು ಮಧ್ಯವರ್ತಿಗಳ ಪಾಲಾಗುವುದು ತಪ್ಪಿದೆ. ಜೊತೆಗೆ  ರೇಷ್ಮೆ ಗೂಡಿನ ಧಾರಣೆ ಸುಧಾರಿಸುವವರೆಗೂ ರಕ್ಷಣಾತ್ಮಕ ದರ ನೀಡಲು ನಿರ್ಧರಿಸಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಪ್ರಧಾನಿ ಮೋದಿ Video ಡಿಲೀಟ್: Facebook ಮೇಲೆ ಗದಾ ಪ್ರಹಾರ, Mark Zuckerberg ಕ್ಷಮೆಯಾಚನೆಗೆ ಸಂಸದೀಯ ಸಮಿತಿ ಪಟ್ಟು! ಹೇಳಿದ್ದೇನು?

Repo Rate ಶೇ. 5.25 ಯಥಾಸ್ಥಿತಿ ಮುಂದುವರಿಕೆ, GDP ಬೆಳವಣಿಗೆ ಶೇ. 6.7: RBI ವಿತ್ತೀಯ ನೀತಿ ಪ್ರಕಟ

ಪ್ರಾಣ ಉಳಿಸಿದ ಹೀರೋಗೆ ಪ್ರವಾಹವೇ ಕಂಟಕ: ತನ್ನ ಲೈಫ್ ಜಾಕೆಟ್ ಕೊಟ್ಟು ಜೀವ ರಕ್ಷಿಸಿದ ತರಬೇತುದಾರನ ದುರಂತ ಸಾವು!

Hormuz ಜಲಸಂಧಿ ಬಿಕ್ಕಟ್ಟು ಶೀಘ್ರದಲ್ಲೇ ಅಂತ್ಯ: ಅಂತಿಮ ಘಟ್ಟದಲ್ಲಿ ಅಮೆರಿಕ–ಇರಾನ್ ಶಾಂತಿ ಒಪ್ಪಂದ, ಇಂದೇ ಅಧಿಕೃತ ಘೋಷಣೆ ಸಾಧ್ಯತೆ..!

'ಸಾವು ಉತ್ತಮ': ಉದಯನಿಧಿ ಸ್ಟಾಲಿನ್ ಬಂಧನ ಬೆನ್ನಲ್ಲೇ ನಟಿ nivetha pethuraj ಪೋಸ್ಟ್ ವೈರಲ್!