ರಾಜ್ಯ

ತಿರುಮಲದಲ್ಲಿ 200 ಕೋಟಿ ರೂ. ವೆಚ್ಚದಲ್ಲಿ ಅತಿಥಿಗೃಹ ನಿರ್ಮಾಣ

Srinivasamurthy VN

ಬೆಂಗಳೂರು: ಕರ್ನಾಟಕ ಸರ್ಕಾರ ತಿರುಮಲದಲ್ಲಿ 200 ಕೋಟಿ ರೂ. ವೆಚ್ಚದಲ್ಲಿ ಅತಿಥಿಗೃಹ ನಿರ್ಮಾಣ ಮಾಡಲು ಮುಂದಾಗಿದೆ.

ಹೌದು.. ಕಳೆದ ಸಚಿವ ಸಂಪುಟದಲ್ಲಿ ಕೈಗೊಂಡ ತೀರ್ಮಾನದಂತೆ ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ತೆರಳುವ ರಾಜ್ಯದ ಭಕ್ತರಿಗೆ ಅನುಕೂಲ ಕಲ್ಪಿಸಲು ರಾಜ್ಯ ಸರ್ಕಾರ 200 ಕೋಟಿ ರೂ. ವೆಚ್ಚದಲ್ಲಿ ಸುಸಜ್ಜಿತ ಅತಿಥಿಗೃಹ ನಿರ್ಮಿಸಲು ಮುಂದಾಗಿದೆ.

ನಾಲ್ಕು ಅಂತಸ್ತಿನ‌ ಕಟ್ಟಡದಲ್ಲಿ ಸುಮಾರು 305 ಕೊಠಡಿಗಳನ್ನು ಒಂದು ಸಾವಿರ ಭಕ್ತರಿಗೆ ತಂಗಲು ಅನುಕೂಲವಾಗುವಂತೆ ನಿರ್ಮಿಸಲು ನಿರ್ಧರಿಸಲಾಗಿದೆ ಎಂದು ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಮಂಜುನಾಥ ಪ್ರಸಾದ್ ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.

ಕರ್ನಾಟಕದ ಛತ್ರಕ್ಕೆ ಸೇರಿರುವ 7.5 ಎಕರೆ ಪ್ರದೇಶದಲ್ಲಿ ಸಮಗ್ರ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ನಿರ್ಧರಿಸಲಾಗಿದ್ದು, ನಾಲ್ಕು ಅಂತಸ್ತಿನ ವಸತಿ ಗೃಹದಲ್ಲಿ 140 ಯಾತ್ರಾರ್ಥಿಗಳ ವಾಸ್ತವ್ಯಕ್ಕಾಗಿ 12 ಡಾರ್ಮೆಂಟ್ರಿಗಳು, 610 ಯಾತ್ರಾರ್ಥಿಗಳ ವಾಸ್ತವ್ಯಕ್ಕೆ 305 ಕೊಠಡಿಗಳು, ಗಣ್ಯರಿಗೆ 24 ಸೂಟ್ ಕೊಠಡಿಗಳು, 4 ಡಬ್ಬಲ್ ಸೂಟ್ ಕೊಠಡಿಗಳು, ಒಂದು ಕಲ್ಯಾಣ ಮಂಟಪ, ಕಾರು, ಬಸ್ಸುಗಳ ಪಾರ್ಕಿಂಗ್ ಗೆ ಹೆಚ್ಚುವರಿ ವ್ಯವಸ್ಥೆ, ಕಲ್ಯಾಣಿ ಪುನರುಜ್ಜೀವನ, ರಸ್ತೆ ಅಭಿವೃದ್ಧಿ, ಉದ್ಯಾನವನ ಹಾಗೂ ಇತರೆ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು.

SCROLL FOR NEXT