ರಾಜ್ಯ

ಮನೆಯಲ್ಲಿರಿ, ಇಲ್ಲವೇ ಸಾಂಸ್ಥಿಕ ಕ್ವಾರಂಟೈನ್ ಎದುರಿಸಿ: 60 ವರ್ಷ ಮೇಲ್ಪಟ್ಟವರಿಗೆ ಜಿಲ್ಲಾ ಆಡಳಿತ ಮಂಡಳಿ ಎಚ್ಚರಿಕೆ

Manjula VN

ವಿಜಯಪುರ: ಕೊರೋನಾ ಸೋಂಕು ರಾಜ್ಯದಲ್ಲಿ ವ್ಯಾಪಕವಾಗುತ್ತಿರುವ ಹಿನ್ನೆಲೆಯಲ್ಲಿ ಮನೆಯಲ್ಲಿರುವಂತೆ ಎಷ್ಟೇ ಜಾಗೃತಿ ಮೂಡಿಸುತ್ತಿದ್ದರೂ, ಜನರು ಮಾತ್ರ ಅನಗತ್ಯ ಓಡಾಟಗಳನ್ನು ನಿಲ್ಲಿಸುತ್ತಿಲ್ಲ. ಪ್ರಮುಖವಾಗಿ 60 ವರ್ಷದ ಮೇಲ್ಪಟ್ಟ ಹಿರಿಯರಿಗೆ ಎಷ್ಟೇ ಎಚ್ಚರ ನೀಡಿದರೂ ಕೇಳದ ಹಿನ್ನೆಲೆಯಲ್ಲಿ ಇದೀಗ ಜಿಲ್ಲಾ ಆಡಳಿತ ಮಂಡಳಿ ಕಠಿಣ ನಿರ್ಣಯ ಕೈಗೊಂಡಿದ್ದು, ಮನೆಯಲ್ಲಿ ಇರದೆ ಹೊರ ಬರುವ ಹಿರಿಯರಿಗೆ ದಿನದ ಮಟ್ಟಿದೆ ಸಾಂಸ್ಥಿಕ ಕ್ವಾರಂಟೈನ್ ವಿಧಿಸಲು ಮುಂದಾಗಿದೆ. 

ಕೊರೋನಾ ಸೋಂಕು ಹರಡಲು ಆರಂಭವಾದಾಗಿನಿಂದಲೂ ವಿಜಯಪುರ  ನಿಗಮ ಮಂಡಳಿಯು ತುರ್ತು ವೈದ್ಯಕೀಯ ಚಿಕಿತ್ಸೆ, ಔಷಧಿ ಖರೀದಿ ಹಾಗೂ ಪ್ರಾಮಾಣಿಕ ಕಾರಣಗಳನ್ನು ಬಿಟ್ಟು ಬೇರಾವುದಕ್ಕೂ ಹೊರಗೆ ಬಾರದಂತೆ ಹಿರಿಯ ವಯಸ್ಕರಿಗೆ ಸಾಕಷ್ಟು ಎಚ್ಚರಿಕೆಗಳನ್ನು ನೀಡಿದೆ. ಆದರೂ, ಅಧಿಕಾರಿಗಳ ಮಾತಿಗೆ ಕಿವಿಗೊಡದ ಹಿರಿಯರು ಅನಗತ್ಯವಾಗಿ ಓಡಾಟ ನಡೆಸುತ್ತಿದ್ದಾರೆ. ಹೀಗಾಗಿ ಜಿಲ್ಲಾ ಆಡಳಿತ ಮಂಡಳಿಯು ಈ ಕಠಿಣ ನಿರ್ಧಾರವನ್ನು ಕೈಗೊಂಡಿದೆ ಎಂದು ಹೇಳಾಲಗುತ್ತಿದೆ. 

ಈ ಕುರಿತು ಮಾಹಿತಿ ನೀಡಿರುವ ಜಿಲ್ಲಾ ಆರೋಗ್ಯ ಕಚೇರಿ, ಕಳೆದೆರಡು ವಾರಗಳಿಂದ ಪ್ರತೀನಿತ್ಯ ಜಿಲ್ಲೆಯಲ್ಲಿ 25ಕ್ಕೂ ಹೆಚ್ಚು ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಪ್ರಮುಖವಾಗಿ ನಿಗಮ ಮಂಡಳಿಯ ನಿಯಂತ್ರಣದಲ್ಲಿಯೇ ಹೆಚ್ಚು ಪ್ರಕರಣಗಳು ಪತ್ತೆಯಾಗುತ್ತಿವೆ. ಜಿಲ್ಲೆಯಲ್ಲಿ ಬೆಳಕಿಗೆ ಬಂದಿರುವ ಶೇ.99 ರಷ್ಟು ಪ್ರಕರಣಗಳಲ್ಲಿ 55 ವರ್ಷದ ಮೇಲ್ಪಟ್ಟ ಜನರೇ ಹೆಚ್ಚಾಗಿದ್ದಾರೆ. 

ಸಾರಿ, ಹೃದಯ ಸಂಬಂಧಿ ಸಮಸ್ಯೆ, ರಕ್ತದೊತ್ತಡದಂತಹ ದೀರ್ಘಕಾಲಿಕ ರೋಗಗಿಂದ ಬಳಲುತ್ತಿರುವ ಹಿರಿಯ ವಯಸ್ಕರು ಹೆಚ್ಚು ಸೋಂಕಿಗೊಳಗಾಗುತ್ತಿದ್ದಾರೆ. ಹೀಗಾಗಿ ಪ್ರಾಮಾಣಿಕ ಕಾರಣಗಳಿಲ್ಲದೆ, ಅನಗತ್ಯವಾಗಿ ಓಡಾಡುತ್ತಿರುವ ಹಿರಿಯರನ್ನು ಸಾಂಸ್ಥಿಕ ಕ್ವಾರಂಟೈನ್ ನಲ್ಲಿರಿಸಲು ತೀರ್ಮಾನಿಸಲಾಗಿದೆ ಎಂದು ಹೇಳಿದೆ. 

ಉಪ ಆಯುಕ್ತ ವೈ.ಎಸ್.ಪಾಟೀಲ್ ಅವರು ಮಾತನಾಡಿ, ಶಿಕ್ಷೆ ನೀಡುವುದು ನಮ್ಮ ಉದ್ದೇಶವಲ್ಲ. ಜಾಗೃತಿ ಮೂಡಿಸುವುದು ಪ್ರಮುಖ ಉದ್ದೇಶವಾಗಿದೆ. ನಗರ ನಿಯಂತ್ರಣದಲ್ಲಿ ಈ ನಿಯಮವನ್ನು ಚಾಲ್ತಿಗೆ ತರಲಾಗುತ್ತದೆ. ಮೊದಲ ಬಾರಿಗೆ ನಿಯಮ ಉಲ್ಲಂಘಿಸುವವರಿಗೆ ಎಚ್ಚರಿಕೆ ನೀಡಿ ಕಳುಹಿಸಲಾಗುತ್ತದೆ. ಮತ್ತೊಮ್ಮೆ ನಿಯಮ ಉಲ್ಲಂಘನೆ ಮಾಡಿದವರಿದೆ ಸಾಂಸ್ಥಿಕ ಕ್ವಾರಂಟೈನ್ ವಿಧಿಸಲಾಗುತ್ತದೆ. ಹಿರಿಯರು ಹಾಗೂ ಮಕ್ಕಳ ಸುರಕ್ಷತೆ ನಮ್ಮ ಗುರಿಯಾಗಿದೆ ಎಂದು ತಿಳಿಸಿದ್ದಾರೆ. 

SCROLL FOR NEXT