ರಾಜ್ಯ

ಖಾಸಗಿ ಕೋವಿಡ್ ಕೇರ್ ಸೆಂಟರ್ ನಡೆಸಲು ಬಿಬಿಎಂಪಿ, ಹೋಟೆಲ್ ಮಾಲೀಕರ ಒಪ್ಪಂದ

Nagaraja AB

ಬೆಂಗಳೂರು: ಸಹಭಾಗಿತ್ವದಲ್ಲಿ ಖಾಸಗಿ ಕೋವಿಡ್ ಕೇರ್ ಸೆಂಟರ್ ನಡೆಸಲು ಬಿಬಿಎಂಪಿ ಆರೋಗ್ಯಾಧಿಕಾರಿಗಳು ಮತ್ತು ನೋಡಲ್ ಅಫೀಸರ್, ಬೆಂಗಳೂರು ಹೋಟೆಲ್ ಮಾಲೀಕರ ಸಂಘ ಹಾಗೂ ಬೆಂಗಳೂರು ಖಾಸಗಿ ಆಸ್ಪತ್ರೆಗಳು ಮತ್ತು ನರ್ಸಿಂಗ್ ಹೋಮ್ ಅಸೋಸಿಯೇಷನ್ ನೊಂದಿಗೆ ಸಭೆ ನಡೆಸಿದರು.

ಖಾಸಗಿ ಕೋವಿಡ್ ಕೇರ್ ಸೆಂಟರ್ ಗಳಿಗೆ ತುಂಬಾ ಬೇಡಿಕೆ ಇದೆ. ಶುಲ್ಕ ಪಾವತಿಸಿ ಖಾಸಗಿ ಕೇರ್ ಸೆಂಟರ್ ಗಳಿಗೆ ಹೋಗಲು ಹಲವು ಮಂದಿ ರೋಗಿಗಳು ಒಲವು ವ್ಯಕ್ತಪಡಿಸಿದ್ದಾರೆ. ಸರ್ಕಾರ ಕೂಡಾ ಖಾಸಗಿ ಕೇಂದ್ರಗಳನ್ನು ನಡೆಸುವ ಸಂಬಂಧ ಮಾರ್ಗಸೂಚಿಗಳನ್ನು ರಚಿಸಿದೆ ಎಂದು ಸಭೆಯಲ್ಲಿ ಪಾಲ್ಗೊಂಡಿದ್ದ ಅಧಿಕಾರಿಗಳು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದರು.

ಇತರ ನಿಯಮಾವಳಿಗಳ ಬಗ್ಗೆ ನಿರ್ಧರಿಸಲು ಎರಡು ದಿನಗಳ ಸಮಯಾವಕಾಶವನ್ನು ಸಭೆಯಲ್ಲಿ ಪಾಲ್ಗೊಂಡಿದ್ದವರು ಕೇಳಿದ್ದಾರೆ.
ಅಲ್ಲದೇ, ನಗರದಲ್ಲಿನ ವಿವಿಧ ಕೋವಿಡ್ ಕೇರ್ ಸೆಂಟರ್ ಗಳಿಗೆ ಸರ್ಕಾರದ ಬೆಂಬಲವನ್ನು ಕೋರಿದ್ದಾರೆ.

ಇದನ್ನು ಹೋಟೆಲ್ ಮಾಲೀಕರು ಸ್ವಾಗತಿಸಿದ್ದು, ಇನ್ನಷ್ಟು ಆಸ್ಪತ್ರೆಗಳು ಹಾಗೂ ಹೋಟೆಲ್ ಗಳು ಕೋವಿಡ್-ಕೇರ್ ಸೆಂಟರ್ 
ಸ್ಥಾಪಿಸುವ ನಿರೀಕ್ಷೆಯಿದೆ.

ಪ್ರಸ್ತುತ ವಿವಿಧ ಹೋಟೆಲ್ ಗಳಲ್ಲಿ ಸುಮಾರು 500 ಹಾಸಿಗೆಗಳ ವ್ಯವಸ್ಥೆ ಮಾಡಲಾಗಿದ್ದು, ಕೋವಿಡ್- ಕೇರ್- ಸೆಂಟರ್ ಗಳಾಗಿ ಕಾರ್ಯನಿರ್ವಹಿಸುತ್ತಿವೆ.ಪ್ರಕರಣಗಳು ಹೆಚ್ಚಾಗುತ್ತಿರುವುದನ್ನು ಗಮನದಲ್ಲಿಟ್ಟುಕೊಂಡು, ಸೋಂಕು ಲಕ್ಷಣ ಇಲ್ಲದ ರೋಗಿಗಳಿಗೂ ಐಸೋಲೇಷನ್ ಸೌಕರ್ಯದ ಅಗತ್ಯವಿದೆ.ಆದ್ದರಿಂದ ಜನರು ಮನೆಯಿಂದ ದೂರ ಇದ್ದು, ಕೋವಿಡ್- ಕೇರ್ - ಸೆಂಟರ್ ಗಳಲ್ಲಿ ಉಳಿಯಲು ಬಯಸುತ್ತಾರೆ ಎಂದು ಅಧಿಕಾರಿಗಳು ತಿಳಿಸಿದರು.

SCROLL FOR NEXT