ರಾಜ್ಯ

ಉತ್ತರಾಖಂಡ್ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ರಾಜ್ಯದ ನ್ಯಾ. ರವಿ ಮಳಿಮಠ ನೇಮಕ 

Raghavendra Adiga

ಡೆಹ್ರಾಡೂನ್: ಕರ್ನಾಟಕ ಹೈಕೋರ್ಟ್ ನ ನ್ಯಾಯಮೂರ್ತಿಗಳಾಗಿದ್ದ ನ್ಯಾ. ರವಿ ಮಳಿಮಠ ಅವರನ್ನು ಉತ್ತರಾಖಂಡ್ ಹೈಕೋರ್ಟ್ ನ ಮುಖ್ಯ ನ್ಯಾಯಮೂರ್ತಿಗಳನ್ನಾಗಿ ನೇಮಕ ಮಾಡಲಾಗಿದೆ. 

ಈ ಕುರಿತಂತೆ ಕೇಂದ್ರ ಸರ್ಕಾರ ಆದೇಶ ಹೊರಡಿಸಿದ್ದು  2020 ರ ಜುಲೈ 28 ರಿಂದ ನ್ಯಾ. ರವಿ ಮಳಿಮಠ ಉತ್ತರಾಖಂಡ್ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಾಗಿ ಕಾರ್ಯನಿರ್ವಹಿಸಲಿದ್ದಾರೆ. ಇದೀಗ ಉತ್ತರಾಖಂಡ್ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಾದ ರಮೇಶ್ ರಂಗನಾಥನ್ ಅವರ ನಿವೃತ್ತಿಯ ತರುವಾಯ ಮಳಿಮಠ ಆ ಸ್ಥಾನಕ್ಕೇರಲಿದ್ದಾರೆ.

ಫೆಬ್ರವರಿಯಲ್ಲಿ, ನ್ಯಾಯಮೂರ್ತಿಮಳಿಮಠ ಅವರನ್ನು ಕರ್ನಾಟಕ ಹೈಕೋರ್ಟ್‌ನಿಂದ ಉತ್ತರಾಖಂಡ ಹೈಕೋರ್ಟ್‌ಗೆ ವರ್ಗಾವಣೆ ಮಾಡಲು ಕೇಂದ್ರವು ಅಧಿಸೂಚನೆ ನೀಡಿತ್ತು.ಮಳಿಮಠ ಅವರನ್ನು 2008 ರ ಫೆಬ್ರವರಿಯಲ್ಲಿ ಕರ್ನಾಟಕದ ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಾಧೀಶರನ್ನಾಗಿ ನೇಮಿಸಲಾಯಿತು ಮತ್ತು ಫೆಬ್ರವರಿ 2010 ರಲ್ಲಿ ಅವರನ್ನು ಖಾಯಂ ನ್ಯಾಯಾಧೀಶರನ್ನಾಗಿ ಮಾಡಲಾಯಿತು.ರಾಜ್ಯ ಹೈಕೋರ್ಟ್ ನಿವೃತ್ತ ಮುಖ್ಯ ನ್ಯಾಯಮೂರ್ತಿ ವಿಎಸ್ ಮಳಿಮಠ ಅವರ ಪುತ್ರರಾದ ರವಿ ಮಳಿಮಠ 1987ರಲ್ಲಿ ವಕೀಲರಾಗಿ ವೃತ್ತಿ ಜೀವನ ಪ್ರಾರಂಭಿಸಿದ್ದರು.
 

SCROLL FOR NEXT