ವೈದ್ಯರು ಭಯಪಡದೇ ಚಿಕಿತ್ಸೆ ನೀಡಿ, ಜನರಲ್ಲಿ ಧೈರ್ಯ ತುಂಬಿ: ಸಚಿವ ವಿ.ಸೋಮಣ್ಣ ಮನವಿ
ಯಾವುದೇ ಕಾರಣಕ್ಕೂ ವೈದ್ಯರು ಭಯ ಪಡದೇ ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡಿ, ಸಾರ್ವಜನಿಕರಲ್ಲಿ ಧೈರ್ಯ ತುಂಬಬೇಕು. ಇದಕ್ಕಾಗಿ, ಪ್ರತಿ ವಾರ್ಡ್‌ಗಳಲ್ಲಿ ಆಸ್ಪತ್ರೆಗಳಿಗೆ ಬೇಕಾಗುವ ವ್ಯಾನ್, ಬೆಡ್ ಹಾಗೂ ಇತರೆ ಮೂಲಭೂತ ಸೌಕರ್ಯಗಳನ್ನು ಸರ್ಕಾರ ನೀಡಲಿದೆ ಎಂದು ಬೆಂಗಳೂರು ಪೂರ್ವ ವಲಯದ ಉಸ್ತುವಾರಿ ಸಚಿವರು ಹಾಗೂ ವಸತಿ ಸಚಿವ ವಿ.ಸೋಮಣ್ಣ ಭರವಸೆ ನೀಡಿದ್ದಾರೆ.
ಬೆಂಗಳೂರು: ಯಾವುದೇ ಕಾರಣಕ್ಕೂ ವೈದ್ಯರು ಭಯ ಪಡದೇ ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡಿ, ಸಾರ್ವಜನಿಕರಲ್ಲಿ ಧೈರ್ಯ ತುಂಬಬೇಕು. ಇದಕ್ಕಾಗಿ, ಪ್ರತಿ ವಾರ್ಡ್‌ಗಳಲ್ಲಿ ಆಸ್ಪತ್ರೆಗಳಿಗೆ ಬೇಕಾಗುವ ವ್ಯಾನ್, ಬೆಡ್ ಹಾಗೂ ಇತರೆ ಮೂಲಭೂತ ಸೌಕರ್ಯಗಳನ್ನು ಸರ್ಕಾರ ನೀಡಲಿದೆ ಎಂದು ಬೆಂಗಳೂರು ಪೂರ್ವ ವಲಯದ ಉಸ್ತುವಾರಿ ಸಚಿವರು ಹಾಗೂ ವಸತಿ ಸಚಿವ ವಿ.ಸೋಮಣ್ಣ ಭರವಸೆ ನೀಡಿದ್ದಾರೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಪೂರ್ವ ವಲಯದ ವ್ಯಾಪ್ತಿಯಲ್ಲಿ ಕೋವಿಡ್ -19 ಸೋಂಕಿತರ ಚಿಕಿತ್ಸೆಗೆ ಸಂಬಂಧಿಸಿದಂತೆ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳುವ ನಿಟ್ಟಿನಲ್ಲಿ ನಗರದ ಹೆಬ್ಬಾಳ ವಿಧಾನ ಸಭಾ ಕ್ಷೇತ್ರದ ಕೋವಿಡ್ ಆಸ್ಪತ್ರೆ, ವಾರ್ ರೂಂ ಹಾಗೂ ಫೀವರ್ ಕ್ಲಿನಿಕ್ ಗಳ ಸ್ಥಳ ಪರಿಶೀಲನೆ ಕೈಗೊಂಡು ಅವರು ಮಾತನಾಡಿದರು.
ಕೋವಿಡ್ ಚಿಕಿತ್ಸೆಯಲ್ಲಿ ಬಡವರಿಗೆ ಆದ್ಯತೆ ಮೇಲೆ ನೆರವು ನೀಡಬೇಕು. ಸಾರ್ವಜನಿಕರಿಗೆ ಕೋವಿಡ್ -19 ಬಗ್ಗೆ ವಾಸ್ತವಾಂಶ ತಿಳಿಸುವುದರೊಂದಿಗೆ, ಯಾವುದೇ ರೀತಿಯ ಭಯ ಹುಟ್ಟಿಸದಂತೆ ಎಚ್ಚರ ವಹಿಸುವಂತೆ ವೈದ್ಯಕೀಯ ಅಧಿಕಾರಿ ಹಾಗೂ ಸಿಬ್ಬಂದಿಗಳನ್ನು ಕೋರಿದ ಸಚಿವರು ಕೋವಿಡ್ ವೈರಸ್ ನ ಸೂಕ್ಷ್ಮತೆ ಅರ್ಥಮಾಡಿಕೊಂಡು ಅದರ ವಿರುದ್ಧ ನಾವೆಲ್ಲ ಒಟ್ಟಾಗಿ ಹೋರಾಡಬೇಕು ಎಂದು ಕರೆ ಕೊಟ್ಟರು.