ರಾಜ್ಯ

ಕೊರೋನಾ ಸೋಂಕಿಗೆ ಯಾವುದೇ ಚಿಕಿತ್ಸೆ ನೀಡುವ ಕುರಿತು ಡಾ.ಗಿರಿಧರ್ ಕಜೆ ಹೇಳಿದ್ದೇನು ಗೊತ್ತಾ?

Srinivasamurthy VN

ಬೆಂಗಳೂರು: ಕೊರೋನಾ ಸೋಂಕಿಗೆ ತಾವು ಪ್ರತ್ಯೇಕವಾಗಿ ಯಾವುದೇ ಚಿಕಿತ್ಸೆ ನೀಡುತ್ತಿಲ್ಲ. ಸೋಂಕು ನಿರ್ವಹಣೆಯಲ್ಲಿ ತಾವು ಸೂಚಿಸಿರುವ ಮೂರು ಮುಂಜಾಗ್ರತಾ ಕ್ರಮಗಳನ್ನು ಪಾಲಿಸಿ ಎಂದು ಖ್ಯಾತ ಆಯುರ್ವೇದ ತಜ್ಞ ಡಾ.ಗಿರಿಧರ್ ಕಜೆ ಹೇಳಿದ್ದಾರೆ.

ಕರ್ನಾಟಕದಲ್ಲಿ ಮಾರಕ ಕೊರೋನಾ ವೈರಸ್ ಸೋಂಕಿತರ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿರುವ ಬೆನ್ನಲ್ಲೇ ಕೊರೋನಾ ಸೋಂಕಿಗೆ ಚಿಕಿತ್ಸೆಗಳ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ವಿಧ ವಿಧ ಚಿಕಿತ್ಸಾ ಪರಿಕ್ರಮಗಳು ಹರಿದಾಡುತ್ತಿವೆ. ಪ್ರಮುಖವಾಗಿ ಖ್ಯಾತ ಆಯುರ್ವೇದ ತಜ್ಞ ಡಾ.ಗಿರಿಧರ್ ಕಜೆ ಅವರು ವಿಕ್ಟೋರಿಯಾ ಆಸ್ಪತ್ಪೆಯಲ್ಲಿ ಕೊರೋನಾ ಸೋಂಕಿತರಿಗೆ ನೀಡಿದ್ದ ಆಯುರ್ವೇದ ಚಿಕಿತ್ಸೆ ಕುರಿತ ಸುದ್ದಿಗಳು ವೈರಲ್ ಆದ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ಅವರ ಫೋಟೋ ಮತ್ತು ಅವರ ಮೊಬೈಲ್ ನಂಬರ್ ಗಳನ್ನು ಬಳಕೆ ಮಾಡಿ ಕೊರೋನಾ ವೈರಸ್ ಗೆ ಕಜೆ ಅವರು ಚಿಕಿತ್ಸೆ ನೀಡುತ್ತಿದ್ದಾರೆ. ಇದಕ್ಕಾಗಿ ಕೇವಲ 150 ರೂಗಳನ್ನು ಮಾತ್ರ ಪಡೆಯುತ್ತಿದ್ದಾರೆ ಎಂದು ಪೋಸ್ಟ್ ಗಳನ್ನು ಹರಿಯ ಬಿಡಲಾಗುತ್ತಿದೆ.

ಈ ಪೋಸ್ಟ್ ಗಳು ಇದೀಗ ವ್ಯಾಪಕ ವೈರಲ್ ಆಗುತ್ತಿದ್ದು, ಫೇಸ್ ಬುಕ್, ವಾಟ್ಸಪ್, ಯೂಟ್ಯೂಬ್ ನಲ್ಲಿ ಹರಿದಾಡುತ್ತಿದೆ. ಇದೇ ವಿಚಾರವಾಗಿ ಡಾ.ಗಿರಿಧರ್ ಕಜೆ ಅವರು ಸ್ಪಷ್ಟನೆ ನೀಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಪೋಸ್ಟ್ ಗಳು ಶುದ್ಧ ಸುಳ್ಳು.. ಸುಳ್ಳು ಪೋಸ್ಟ್ ಗಳನ್ನು ನಂಬಬೇಡಿ ಎಂದು ಪೋಸ್ಟ್ ಮಾಡಿದ್ದಾರೆ.

SCROLL FOR NEXT