ರಾಜ್ಯ

ಕೊರೋನಾ ಕರ್ತವ್ಯದಿಂದ ಬಿಡಿಎ ಅಧಿಕಾರಿಗಳಿಗೆ ವಿನಾಯಿತಿ

Shilpa D

ಬೆಂಗಳೂರು: ಮನವಿಯ ಮೇರೆಗೆ ಕೊರೋನಾ ಕರ್ತವ್ಯದಿಂದ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಅಧಿಕಾರಿಗಳಿಗೆ ವಿನಾಯಿತಿ ನೀಡಲಾಗಿದೆ, ಬಿಡಿಎಯಲ್ಲಿ ಹಲವು ಮಹತ್ತರ ಕೆಲಸ ಇರುವುದೇ ಇದಕ್ಕೆ ಕಾರಣ ಎಂದು ಬಿಡಿಎ ಆಯುಕ್ತ ಎಚ್ ಆರ್ ಮಹಾದೇವ್ ಹೇಳಿದ್ದಾರೆ.

ಬಿಡಿಎಯ ವಿನಾಯಿತಿ ಕ್ರಮವನ್ನು ಪ್ರಶ್ನಿಸಿದವರಿಗೆ ಮಹಾದೇವ್ ಉತ್ತರ ನೀಡಿದ್ದಾರೆ. ಮೂಲೆಯ ಸೈಟ್‌ಗಳನ್ನು ಮಾರಾಟ ಮಾಡುವ ಮತ್ತು ನೋಂದಾಯಿಸುವ ಜವಾಬ್ದಾರಿಯನ್ನು ಬಿಡಿಎ ಅಧಿಕಾರಿಗಳಿಗೆ ನೀಡಲಾಗುತ್ತದೆ, ಆದರೆ ಈ ಕೆಲಸ ತಾನಾಗಿಯೇ ಆಗುವುದಿಲ್ಲ,  ಅರ್ಕಾವತಿ ಲೇಔಟ್ ನ ದೀರ್ಘಕಾಲದಿಂದ ಬಾಕಿ ಇರುವ  ನಿವೇಶನಗಳ ಹಂಚಿಕೆ ಮತ್ತು ರೈತರಿಗೆ ಭೂಮಿ ಹಂಚಿಕೆ ಸಂಬಂಧ ಪ್ರಯತ್ನಿಸುತ್ತಿರುವುದಾಗಿ ಅವರು ತಿಳಿಸಿದ್ದಾರೆ.

ಅನಧಿಕೃತವಾಗಿ ನಿರ್ಮಾಣವಾಗಿರುವ ಕಟ್ಟಟಗಳನ್ನು ನಿಯಮಬದ್ಧಗೊಳಿಸುವುದು ಬಹಳ ದೊಡ್ಡ ಕೆಲಸವಾಗಿದೆ, ಪೆರಿಫೆರಲ್ ರಿಂಗ್ ರಸ್ತೆಗಾಗಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವ ಕೆಲಸವನ್ನು ಬಿಡಿಎ ಪೂರ್ಣಗೊಳಿಸುತ್ತಿದೆ. ಆದ್ಯತೆಯ ಮೇರೆಗೆ ಕೆಲಸವನ್ನು ಪ್ರಾರಂಭಿಸಲು ಸರ್ಕಾರ  ಉತ್ಸುಕವಾಗಿದೆ. ಬಿಡಿಎ ತನ್ನ ಕಾರ್ಯಚಟುವಟಿಕೆಯ ಸಂಪೂರ್ಣ ಗಣಕೀಕರಣಕ್ಕಾಗಿ ಯೋಜನೆಯನ್ನು ಸಿದ್ಧಪಡಿಸುತ್ತಿದೆ ಎಂದು ಹೇಳಿದ್ದಾರೆ.
 

SCROLL FOR NEXT