ಸಂಗ್ರಹ ಚಿತ್ರ 
ರಾಜ್ಯ

4 ದಿನಗಳಲ್ಲಿ ರಾಜ್ಯದಲ್ಲಿ 11,000 ಮಂದಿಯಲ್ಲಿ ಕೊರೋನಾ ವೈರಸ್ ಪತ್ತೆ!

ರಾಜ್ಯದಲ್ಲಿ ಕೇವಲ 4 ದಿನಗಳಲ್ಲಿ ಅಂದರೆ, ಜುಲೈ.18 ರಿಂದ ಜುಲೈ 21ರವರೆಗೂ ಬರೋಬ್ಬರಿ 11,417 ಮಂದಿಯಲ್ಲಿ ಕೊರೋನಾ ವೈರಸ್ ಪತ್ತೆಯಾಗಿದ್ದು, ಇದರೊಂದಿಗೆ ರಾಜ್ಯದಲ್ಲಿ ಈ ವರೆಗೂ ಸೋಂಕಿತರ ಸಂಖ್ಯೆ 71,000ಕ್ಕೆ ಏರಿಕೆಯಾಗಿದೆ ಎಂದು ವರದಿಗಳಿಂದ ತಿಳಿದುಬಂದಿದೆ. 

ಬೆಂಗಳೂರು: ರಾಜ್ಯದಲ್ಲಿ ಕೇವಲ 4 ದಿನಗಳಲ್ಲಿ ಅಂದರೆ, ಜುಲೈ.18 ರಿಂದ ಜುಲೈ 21ರವರೆಗೂ ಬರೋಬ್ಬರಿ 11,417 ಮಂದಿಯಲ್ಲಿ ಕೊರೋನಾ ವೈರಸ್ ಪತ್ತೆಯಾಗಿದ್ದು, ಇದರೊಂದಿಗೆ ರಾಜ್ಯದಲ್ಲಿ ಈ ವರೆಗೂ ಸೋಂಕಿತರ ಸಂಖ್ಯೆ 71,000ಕ್ಕೆ ಏರಿಕೆಯಾಗಿದೆ ಎಂದು ವರದಿಗಳಿಂದ ತಿಳಿದುಬಂದಿದೆ. 

ನಿನ್ನೆ ಒಂದೇ ದಿನ ಬರೋಬ್ಬರಿ 3,649 ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದು, ಒಟ್ಟಾರೆ ಸೋಂಕಿತರ ಸಂಖ್ಯೆ 71,069ಕ್ಕೆ ಏರಿಕೆಯಾಗಿದೆ. 

ಈ ನಡುವೆ ಸೋಂಕಿನಿಂದ ಗುಣಮುಖರಾಗಿರುವವರ ಸಂಖ್ಯೆ ಕೂಡ 25 ಸಾವಿರ ಗಡಿ ದಾಟಿದ್ದು, ಈ ವರೆಗೂ 25,549 ಮಂದಿ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ. ಇನ್ನು ನಿನ್ನೆ ಒಂದೇ ದಿನ 61 ಮಂದಿ ಬಲಿಯಾಗಿದ್ದು, ಸಾವಿನ ಸಂಖಅಯೆ ಕೂಡ 1,464ಕ್ಕೆ ತಲುಪಿದೆ. 

ಬೆಂಗಳೂರು ನಗರ ಒಂದರಲ್ಲಿಯೇ ನಿನ್ನೆ 1715 ಮಂದಿಯಲ್ಲಿ ಹೊಸ ಪ್ರಕರಣಗಳು ಪತ್ತೆಯಾಗಿದ್ದು, 24 ಜನರು ಸಾವನ್ನಪ್ಪಿದ್ದಾರೆ. ಇನ್ನು ಸೋಂಕಿನಿಂದ ಗುಣಮುಖರಾಗಿ 540 ಮಂದಿ ಆಸ್ಪತ್ರೆಗಳಿಂಗ ಬಿಡುಗಡೆಯಾಗಿದ್ದಾರೆ. 

ಮಂಗಳವಾರ ಒಂದೇ ದಿನ 50,000 ಜನರ ಮಾದರಿಗಳನ್ನು ಸಂಗ್ರಹಿಸಲಾಗಿದ್ದು, ಇದರಲ್ಲಿ 43,094 ಮಂದಿಯ ಮಾದರಿಗಳನ್ನು ಪರೀಕ್ಷೆ ನಡೆಸಲಾಗಿದೆ. ಇದರಲ್ಲಿ 35,780 ಮಂದಿ ಸೋಂಕು ಪತ್ತೆಯಾಗಿಲ್ಲ. ಇನ್ನು ರ್ಯಾಪಿಡ್ ಆ್ಯಂಟಿಜೆನ್ ಟೆಸ್ಟ್ ಗಳ ಸಂಖ್ಯೆ ಕೂಡ 19,328ಕ್ಕೆ ಏರಿಕೆಯಾಗಿದೆ. ಬೆಂಗಳೂರು ಬಳಿಕ ಅತೀ ಹೆಚ್ಚು ಸೋಂಕುಳ್ಳ ಪ್ರದೇಶಗಳಲ್ಲಿ ಬೆಳಗಾವಿ ಎರಡನೇ ಸ್ಥಾನವನ್ನು ಪಡೆದುಕೊಂಡಿದೆ. ಬಳ್ಳಾರಿಯಲ್ಲಿ ನಿನ್ನೆ 193, ದಕ್ಷಿಣ ಕನ್ನಡ 149, ಮೈಸೂರು 135 ಮಂದಿಯಲ್ಲಿ ವೈರಸ್ ಪತ್ತೆಯಾಗಿದೆ. 

ಈ ನಡುವೆ ಹೇಳಿಕೆ ನೀಡಿರುವ ಬಿಬಿಎಂಪಿ ಆಯುಕ್ತ ಎನ್.ಮಂಜುನಾಥ್ ಪ್ರಸಾದ್ ಅವರು, ಬೆಂಗಳೂರಿನಲ್ಲಿ ಕಂಟೈನ್ಮೆಂಟ್ ಝೋನ್ ಗಳ ಸಂಖ್ಯೆ 9,797ಕ್ಕೆ ಏರಿಕೆಯಾಗಿದ್ದು, ಕಳೆದ 509 ಹೊಸ ಪ್ರಕರಣಗಳು ಪತ್ತೆಯಾಗಿವೆ. ವಾರ್ಡ್ ನಂ.32ರಲ್ಲಿಯೇ 35 ಪ್ರಕರಣಗಳು ದಾಖಲಾಗಿವೆ. ಶಾಂತಲ ನಗರದಲ್ಲಿ 64, ಪಟ್ಟಾಭಿರಾಮನಗರ 30, ಕುಮಾರಸ್ವಾಮಿ ಲೇ ಔಟ್ 22, ಜಕ್ಕೂರು 21, ಕೋರಮಂಗಲ 20, ಶಾಂತಿನಗರ, ಚಿಕ್ಕಪೇಟೆ, ಚಾಮರಾಜಪೇಟೆ, ಚಿಕ್ಕಲಸಂದ್ರ, ಮತ್ತು ಕೆಂಪೇಗೌಡ ವಾರ್ಡ್ ಗಳಲ್ಲಿ 14 ಪ್ರಕರಣಗಳು ಪತ್ತೆಯಾಗಿವೆ. ಸತ್ತುಗುಂಟೆಪಾಳ್ಯ, ಹೊಂಬೆಗೌಡ ನಗರ, ಸಂಜಯ್ ನಗರ, ಜೀವನ್ ಭೀಮ ನಗರ ಮತ್ತು ಕಾಡುಗೋಡಿಯಲ್ಲಿ 13 ಪ್ರಕರಣಗಳು ಪತ್ತೆಯಾಗಿವೆ. ಹೊಯ್ಸಳ ನಗರ, ಮಡಿವಾಳ, ಜಯನಗರ ಮತ್ತು ಅತ್ತೂರಿನಲ್ಲಿ ತಲಾ 12 ಪ್ರಕರಣಗಳು ಪತ್ತೆಯಾಗಿದ್ದು, ಹೊಂಗಸಂದ್ರ, ಅಂಜನಾಪುರ, ಮನೋರಾಯನಪಾಳ್ಯ, ಬಾಣಸವಾಡಿ, ಪುಲಕೇಶಿನಗರ, ಬೇಗೂರು, ಬಿಳೇಕಹಳ್ಳಿ ಮತ್ತು ವಿಶ್ವನಾಥನಾಗೇನಹಳ್ಳಿಯಲ್ಲಿ ತಲಾ 11 ಪ್ರಕರಣಗಳು ಪತ್ತೆಯಾಗಿದೆ ಎಂದು ತಿಳಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Delhi CJP Protest: ಅಭಿಜೀತ್ ದೀಪ್ಕೆ, ಸೌರವ್ ದಾಸ್, ಆಶುತೋಷ್ ರಂಕಾ,ಯೂಟ್ಯೂಬರ್ ಧ್ರುವ್ ರಾಠಿ ಸೇರಿ 200ಕ್ಕೂ ಹೆಚ್ಚು ಮಂದಿ ಪೊಲೀಸ್ ವಶಕ್ಕೆ; Video

CEC ಜ್ಞಾನೇಶ್ ಕುಮಾರ್ ವಜಾಕ್ಕೆ ಆಗ್ರಹಿಸಿ CJP ಪ್ರತಿಭಟನೆ: ದೆಹಲಿಯಲ್ಲಿ ಬಂಧನ ಪ್ರಕ್ರಿಯೆ ಆರಂಭ, ತೀವ್ರ ಭದ್ರತೆ; Video

‘ಪ್ರೇಮದ ಊರಲಿ’ ಭರ್ಜರಿ ಕಲೆಕ್ಷನ್: ಬಾಕ್ಸ್ ಆಫೀಸ್‌ನಲ್ಲಿ ಬರೋಬ್ಬರಿ 39 ಕೋಟಿ ರೂ. ಗಳಿಕೆ!

‘ಕಾನೂನು ಸುವ್ಯವಸ್ಥೆಗೆ ಗಂಭೀರ ಅಪಾಯವಿದೆ’: ಸಿಜೆಪಿ ಪ್ರತಿಭಟನೆಗೆ ಕೆಲವೇ ಗಂಟೆ ಮೊದಲು ರಾಜ್ಯಗಳಿಗೆ ಪತ್ರ ಬರೆದು MHA ಹೇಳಿದ್ದೇನು?

ನವೆಂಬರ್‌ನಲ್ಲಿ ಕರ್ನಾಟಕ ಬಿಜೆಪಿಗೆ ಮೇಜರ್ ಸರ್ಜರಿ: ಬಿವೈ ವಿಜಯೇಂದ್ರ, ಆರ್ ಅಶೋಕಗೆ ಗೇಟ್ ಪಾಸ್?; ಹೊಸ ಮುಖಗಳಿಗೆ ಮಣೆ!