ಖಾಸಗಿ ಪ್ರಯೋಗಾಲಯಗಳ ಕ್ಷಿಪ್ರ ಆ್ಯಂಟಿಜೆನ್ ಪರೀಕ್ಷೆಗೆ ದರ ನಿಗದಿ ಪಡಿಸಿದ ರಾಜ್ಯ ಸರ್ಕಾರ
ಕೋವಿಡ್ ತ್ವರಿತ ತಪಾಸಣೆಗೆ ಆರಂಭಿಸಿರುವ ಆರ್ಟಿ-ಪಿಸಿಆರ್ ಮತ್ತು ಕ್ಷಿಪ್ರ ಆ್ಯಂಟಿಜೆನ್ ಪರೀಕ್ಷೆಗಳಿಗೆ ಈಗ ಸರ್ಕಾರ ದರ ನಿಗದಿಪಡಿಸಿದೆ.
ಬೆಂಗಳೂರು: ಕೋವಿಡ್ ತ್ವರಿತ ತಪಾಸಣೆಗೆ ಆರಂಭಿಸಿರುವ ಆರ್ಟಿ-ಪಿಸಿಆರ್ ಮತ್ತು ಕ್ಷಿಪ್ರ ಆ್ಯಂಟಿಜೆನ್ ಪರೀಕ್ಷೆಗಳಿಗೆ ಈಗ ಸರ್ಕಾರ ದರ ನಿಗದಿಪಡಿಸಿದೆ.
ಖಾಸಗಿ ಪ್ರಯೋಗಾಲಯಗಳಿಗೆ ಸರ್ಕಾರದಿಂದ ಕಳುಹಿಸುವ ಮಾದರಿಗಳು, ತಪಾಸಣೆ ಮತ್ತು ದೃಢೀಕರಣ ಪರೀಕ್ಷೆಗಳನ್ನು ಒಳಗೊಂಡಂತೆ 2 ಸಾವಿರ ರೂ. ದರ ನಿಗದಿಪಡಿಸಲಾಗಿದೆ. ಇದು ಪಿಪಿಇ ಕಿಟ್ ದರವನ್ನು ಕೂಡ ಒಳಗೊಂಡಿದೆ.
ಖಾಸಗಿ ವ್ಯಕ್ತಿಗಳ ಮಾದರಿ ತಪಾಸಣೆ ಮತ್ತು ದೃಢೀಕರಣ ಪರೀಕ್ಷೆಗೆ 3 ಸಾವಿರ ರೂ. ದರ ನಿದಗಿಯಾಗಿದೆ. ಖಾಸಗಿ ಪ್ರಯೋಗಾಲಯಗಳಲ್ಲಿ ಖಾಸಗಿ ಮಾದರಿಗಳ ಕ್ಷಿಪ್ರ ಆ್ಯಂಟಿಜೆನ್ ಪರೀಕ್ಷೆಗೆ ತಲಾ 700 ರೂ. ನಿಗದಿಪಡಿಸಿ ಸರ್ಕಾರ ಆದೇಶ ಹೊರಡಿಸಿದೆ.