ರಾಜ್ಯ

ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ: ಸಿಎಂ ಯಡಿಯೂರಪ್ಪಗೆ ಗೋಕಾಕ್ ನ್ಯಾಯಾಲಯ ಸಮನ್ಸ್ ಜಾರಿ

Manjula VN

ಬೆಳಗಾವಿ: ಕಳೆದ ವರ್ಷ ನವೆಂಬರ್ ತಿಂಗಳಿನಲ್ಲಿ ನಡೆದ ಉಪಚುನಾವಣೆಯಲ್ಲಿ ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ದಾರೆಂಬ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಗೋಕಾಕ್'ನ ಜೆಎಂಎಫ್'ಸಿ ನ್ಯಾಯಾಲಯ ಶುಕ್ರವಾರ ಸಮನ್ಸ್ ಜಾರಿ ಮಾಡಿದೆ. 

ನವೆಂಬರ್ 23 ರಂದು ವಾಲ್ಮೀಕಿ ಸ್ಟೇಡಿಯಂ ನಲ್ಲಿ ನಡೆದ ರ್ಯಾಲಿ ಮಾತನಾಡಿದ್ದ ಯಡಿಯೂರಪ್ಪ ಅವರು, ವೀರಶೈವ-ಲಿಂಗಾಯತ ಸಮುದಾಯದ ಮತದಾರರಿಗೆ ತಮ್ಮ ಮತಗಳು ವಿಭಜನೆಯಾಗದಂತೆ ನೋಡಿಕೊಳ್ಳಬೇಕೆಂದು ಹೇಳಿದ್ದರು. ಗೋಕಾಕ್‌ನಲ್ಲಿ ಲಿಂಗಾಯತ-ವೀರಶೈವ ಪ್ರಬಲ ಸಮುದಾಯಗಳಾಗಿದ್ದು, ವೀರಶೈವ ಮತದಾರರನ್ನು ಬಲಪಡಿಸುವ ಯತ್ನ ನಡೆಸಿದ್ದರು ಎಂಬ ಆರೋಪಗಳು ಕೇಳಿ ಬಂದಿದ್ದವು. 

ಪ್ರಕರಣದ ತನಿಖಾ ಅಧಿಕಾರಿಗಳು ಗೋಕಾಕ್ ಟೌನ್ ಪೊಲೀಸ್ ಠಾಣೆಯಿಂದ ಪ್ರಕರಣವನ್ನು ವಜಾಗೊಳಿಸಲು ನ್ಯಾಯಾಲಯದಲ್ಲಿ ಬಿ-ವರದಿ ಸಲ್ಲಿಸಿದ್ದರು. ಆದರೆ, ಇದನ್ನು ನ್ಯಾಯಾಲಯ ತಿರಸ್ಕರಿಸಿದ್ದು, ಮುಖ್ಯಮಂತ್ರಿಗಳಿಗ ಸಮನ್ಸ್ ಜಾರಿ ಮಾಡಿದೆ ಎಂದು ತಿಳಿದುಬಂದಿದೆ. 

SCROLL FOR NEXT