ರಾಜ್ಯ

ಇಂದು ಸಿಲಿಕಾನ್ ಸಿಟಿ ಸ್ತಬ್ಧ: ಅಗತ್ಯ ವಸ್ತುಗಳು ಬಿಟ್ಟು ನಾಳೆ ಬೆಳಿಗ್ಗೆ 5 ರವರೆಗೆ ಎಲ್ಲವೂ ಬಂದ್

Manjula VN

ಬೆಂಗಳೂರು: ರಾಜ್ಯದಲ್ಲಿ ನಿಯಂತ್ರಣ ತಪ್ಪುತ್ತಿರುವ ಕೊರೋನಾ ವ್ಯಾಪಕವಾಗಿ ಹರಡುತ್ತಿದ್ದು, ಈ ಹಿನ್ನೆಲೆಯಲ್ಲಿ ಕೊರೋನಾ ಮಟ್ಟಹಾಕಲು ಘೋಷಣೆ ಮಾಡಲಾಗಿರುವ ಸಂಡೇ ಲಾಕ್ಡೌನ್ ಶನಿವಾರ ರಾತ್ರಿ 8 ಗಂಟೆಯಿಂದಲೇ ಜಾರಿಯಾಗಿದ್ದು, ಭಾನುವಾರ ರಾಜ್ಯದಾದ್ಯಂತ ಬಹುತೇಕ ಎಲ್ಲಾ ವಹಿವಾಟುಗಳು ಸಂಪೂರ್ಣ ಸ್ಥಗಿತಗೊಂಡಿವೆ. 

ಸೋಮವಾರ ಬೆಳಿಗ್ಗೆ 5 ಗಂಟೆಗಳ ವರೆಗೆ ಸತತ 33 ಗಂಟಗಳ ಕಾಲ ಈ ಕಠಿಣ ಲಾಕ್'ಡೌನ್ ಜಾರಿಯಲ್ಲಿರಲಿದೆ. ಎರಡನೇ ಹಂತದ ಅನ್'ಲಾಕ್ ಅವಧಿಯಲ್ಲಿನ ಪ್ರತಿ ಭಾನುವಾರ ಲಾಕ್'ಡೌನ್ ಮಾಡುವುದಾಗಿ ಸಿಎಂ ಯಡಿಯೂರಪ್ಪ ಘೋಷಣೆ ಮಾಡಿದ್ದರು.

ಇದರಂತೆ ಇಂದು ಇಡೀ ದಿನ ಕರ್ಫ್ಯೂ ಜಾರಿಯಲ್ಲಿರಲಿದ್ದು, ಕೇವಲ ಅಗತ್ಯ ವಸ್ತುಗಳ ಮಾರಾಟ, ಸಾಗಾಟ, ತುರ್ತು ಸೇವೆ ಹೊರತುಪಡಿಸಿದರೆ ಉಳಿದೆಲ್ಲಾ ವಾಣಿಜ್ಯ ಚಟುವಟಿಕೆಗಳು ಬಂದ್ ಇರಲಿವೆ. 

ಬಿಎಂಟಿಸಿ, ಕೆಎಸ್ಆರ್'ಸಿ ಸೇರಿದಂತೆ ಆಟೋ, ಟ್ಯಾಕ್ಸಿಗಳ ಸಂಚಾರ ಇರುವುದಿಲ್ಲ. ಹೋಟೆಲ್ ಗಳಲ್ಲಿ ಕೇವಲ ಪಾರ್ಸಲ್ ಸೇವೆ ಮತ್ತು ಆ್ಯಪ್ ಆಧಾರಿತ ಆಹಾರ ಪೂರೈಕೆ ಸೇವೆ ಇರಲಿದೆ. 

ಶನಿವಾರ ರಾತ್ರಿ 9 ಗಂಟೆಯಿಂದ ಸೋಮವಾರ ಬೆಳಿಗ್ಗೆ ಐದು ಗಂಟೆಗಳ ವರೆಗೆ ಕರ್ಫ್ಯೂ ಜಾರಿ ಇರುವ ಹಿನ್ನೆಲೆಯಲ್ಲಿ ಜನರು ಶನಿವಾರವೇ ಎರಡು ದಿನಗಳಿಗೆ ಬೇಕಾದ ಅಗತ್ಯ ವಸ್ತುಗಳ ಖರೀದಿಸುತ್ತಿರುವ ದೃಶ್ಯಗಳು ಕಂಡು ಬಂದಿತ್ತು. ಮದ್ಯಮಮಳಿಗಳಳಲ್ಲಿ ಸಹ ಮಾರಾಟ ತುಸು ಜೋರಾಗಿಯೇ ಇತ್ತು. 

ಶನಿವಾರ ಸಂಜೆ 7 ಗಂಟೆಯಿಂದಲೇ ಪೊಲೀಸರು ನಗರಗಳ ಪ್ರಮುಖ ರಸ್ತೆಗಳಲ್ಲಿ ಏಕಮುಖ ಸಂಚಾರ ವ್ಯವಸ್ಥೆ ಇಲ್ಲವೇ ಬಂದ್ ಮಾಡತೊಡಗಿದರು. ಅನಗತ್ಯವಾಗಿ ಜನರು ಒಳದಾರಿಗಳಲ್ಲಿ ಸಂಚರಿಸದಿರಲು ಅನೇತ ಕಡೆ ಬ್ಯಾರಿಕೇಡ್ ಅಳವಡಿಸತೊಡಗಿದರು. ಮೇಲ್ಸೇತುವೆ ಸಂಚಾರ ನಿರ್ಬಂಧಿಸಿದರು. 

SCROLL FOR NEXT