ಬೆಂಗಳೂರು: ಬೆಂಗಳೂರು ಮೃಗಾಲಯದಲ್ಲಿ ಹಿಪ್ಪೊಪೊಟಮಸ್ಒಂದು ಮರಿಗೆ ಜನ್ಮನೀಡಿದ್ದು ಮೃಗಾಲಯದ ಅಧಿಕಾರಿಗಳು, ಸಿಬ್ಬಂದಿಗಳಿಗೆ ಸಂತಸದ ವಿಚಾರವಾಗಿದೆ, ಕೊರೋನಾ ಬಿಕ್ಕಟ್ಟಿನ ನಡುವೆ ಪ್ರಾಣಿಗಳನ್ನು ನೋಡಿಕೊಳ್ಳುತ್ತಿರುವ ಇಲ್ಲಿನ ಸಿಬ್ಬಂದಿ ಈ ಮರಿಯು ಮುಂದೆ ಮಕ್ಕಳು ಮತ್ತು ವಯಸ್ಕರಲ್ಲಿ ದೊಡ್ಡ ಆಕರ್ಷಣೆಯಾಗಲಿದೆ ಎಂದಿದ್ದಾರೆ.
11 ವರ್ಷದ ಹೆಣ್ಣು ಹಿಪ್ಪೊಪೊಟಮಸ್ ಮರಿಗೆ ಗೆ ಜನ್ಮ ನೀಡಿದ್ದು, ಮೃಗಾಲಯದಲ್ಲಿನ ಹಿಪ್ಪೊಸಂಖ್ಯೆಯನ್ನು ಎಂಟಕ್ಕೆ ಏರಿಸಿದೆ ಎಂದು ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ.
"ಬೆಂಗಳೂರು ಬನ್ನೇರುಘಟ್ಟ ಜೈವಿಕ ಉದ್ಯಾನ (ಬಿಬಿಬಿಪಿ) ಬನ್ನೇರುಘಟ್ಟ (ಬೆಂಗಳೂರು) ಮೃಗಾಲಯದಲ್ಲಿ ಹಿಪ್ಪೊ ಮರಿಯ ಜನನವನ್ನು ಘೋಷಿಸಲು ಸಂತೋಷವಾಗಿದೆ" ಎಂದು ಬಿಬಿಬಿಪಿ ಕಾರ್ಯನಿರ್ವಾಹಕ ನಿರ್ದೇಶಕ ವನಶ್ರೀ ವಿಪಿನ್ ಸಿಂಗ್ ಹೇಳಿದ್ದಾರೆ. ಮರಿಯು ದಶ್ಯ ಎಂಬ ಹೆಸರಿನ ಹೆಣ್ಣು ಹೊಪೋಗೆ ಜನಿಸಿದೆ. ತಾಯಿ ಮತ್ತು ಚಿಕ್ಕ ಮರಿ ಎರಡೂ ಆರೋಗ್ಯವಾಗಿದೆ, ದಶ್ಯ 2018 ರ ಜನವರಿ 31 ರಂದು ತನ್ನ ಮೊದಲ ಮರಿಗೆ ಜನ್ಮನೀಡಿತ್ತು.
"ಈಗ ಹಿಪ್ಪೊಗಳ ಸಂಖ್ಯೆ ಹೆಚ್ಚಳವು ನಾವು ಇತರ ಪ್ರಾಣಿಸಂಗ್ರಹಾಲಯಗಳೊಂದಿಗೆ ಪ್ರಾಣಿ ವಿನಿಮಯ ಕಾರ್ಯಕ್ರಮಕ್ಕೆಮುಂದಾಗಲು ಅವಕಾಶ ಕಲ್ಪಿಸಿದೆ,"
ಜೈವಿಕ ಉದ್ಯಾನವನವು ನಾಲ್ಕು ಘಟಕಗಳನ್ನು ಹೊಂದಿದೆ - ಮೃಗಾಲಯ, ಸಫಾರಿ, ಚಿಟ್ಟೆ ಉದ್ಯಾನ ಮತ್ತು ರಿಸ್ಕ್ ಸೆಂಟರ್ 732 ಹೆಕ್ಟೇರ್ ಪ್ರದೇಶದಲ್ಲಿ ವ್ಯಾಪಿಸಿರುವ ಈ ಉದ್ಯಾನವನವು 2,279 ಪ್ರಾಣಿಗಳ ಆವಾಸವಾಗಿದೆ. ಮೃಗಾಲಯವು ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದೊಳಗಿನ ಚಂಪಕಧಾಮ ಬೆಟ್ಟಗಳ ಸಾಲಿನಲ್ಲಿದೆ,
ಏತನ್ಮಧ್ಯೆ, ಆರೋಗ್ಯ ನಿರ್ಬಂಧಗಳನ್ನು ಸಡಿಲಿಸಿದ ನಂತರ ಚಾಮರಾಜನಗರ ಜಿಲ್ಲೆಯ ಬಂಡೀಪುರ ಟೈಗರ್ ರಿಸರ್ವ್ (ಬಿಟಿಆರ್) 20 ದಿನಗಳ ನಂತರ ಪ್ರವಾಸಿಗರಿಗೆ ಮತ್ತೆ ತೆರೆದಿದೆ, "ನಾವು ಸುಮಾರು 20 ದಿನಗಳ ನಂತರ ಮತ್ತೆ ಪ್ರವಾಸಿಗರನ್ನು ಸ್ವಾಗತಿಸಲು ಸಿದ್ದವಾಗಿದ್ದೇವೆ" ಎಂದು ಬಿಟಿಆರ್ ನಿರ್ದೇಶಕ ಟಿ. ಬಾಲಚಂದ್ರ ಐಎಎನ್‌ಎಸ್‌ಗೆ ತಿಳಿಸಿದರು.