ರಾಜ್ಯ

ಮಲ್ಪೆ ಕಡಲತೀರದಲ್ಲಿ ತೇಲಿ ಬಂತು ರಾಶಿರಾಶಿ ಕಡಲ ತ್ಯಾಜ್ಯ!

Manjula VN

ಉಡುಪಿ: ಮಲ್ಪೆ ಕಡಲತೀರದ ಉದ್ದಕ್ಕೂ ಅಪಾರ ಪ್ರಮಾಣದ ಕಡಲಮಡಿ (ಕಡಲ ತ್ಯಾಜ್ಯ) ತೇಲಿ ಬಂದಿದ್ದು, ಇದು ಸಮುದ್ರದಲ್ಲಿ ಮತ್ಸ್ಯ ಸಂಪತ್ತು ವೃದ್ಧಿಯ ಲಕ್ಷಣ ಎನ್ನಲಾಗುತ್ತಿದ್ದು, ಮೀನುಗಾರರಲ್ಲಿ ಸಂತಸವನ್ನು ಮೂಡಿಸಿದೆ. ಆದರೆ, ಈ ಜೈವಿಕ ಮೌಲ್ಯದ ಬಗ್ಗೆ ಅರಿವಿಲ್ಲದ ಕೆಲವರು ಸ್ವಚ್ಛಗೊಳಿಸುವಂತೆ ಅಧಿಕಾರಿಗಳ ವಿರುದ್ಧ ಕಿಡಿಕಾರಲು ಆರಂಭಿಸಿದ್ದಾರೆ. 

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಲ್ಪೆ ಅಭಿವೃದ್ಧಿ ಸಮಿತಿಯ ಉಸ್ತುವಾರಿ ಸುದೇಶ್ ಶೆಟ್ಟಿಯವರು, ಮೂರು ವಾರಗಳ ಹಿಂದೆ ಬೀಚ್ ಬಳಿಯಿರುವ ತ್ಯಾಜ್ಯವಸ್ತುಗಳನ್ನು ತೆಗೆದು ಸ್ವಚ್ಛಗೊಳಿಸುವಂತೆ ಸಿಬ್ಬಂದಿಗಳಿಗೆ ಸೂಚನೆ ನೀಡಲಾಗಿತ್ತು. ಬೀಚ್ ಬಳಿಯಿರುವ ಪ್ಲಾಸ್ಟಿಕ್ ವಸ್ತುಗಳನ್ನಷ್ಟೇ ತೆಗೆಯುವಂತೆ ತಿಳಿಸಲಾಗಿತ್ತು. ಆದರೆ, ಕೆಲವರು ಜೈವಿಕ ತ್ಯಾಜ್ಯಗಳನ್ನು ತೆಗೆಯುವಂತೆ ಆಗ್ರಹಿಸುತ್ತಿದ್ದಾರೆ. ಹೀಗಾಗಿ ನಾವು ಜೈವಿಕ ತ್ಯಾಜ್ಯದ ಪ್ರಾಮುಖ್ಯತೆ ಮತ್ತು ಕರಾವಳಿಯ ಸಂಪತ್ತನ್ನು ಹೆಚ್ಚಿಸುವ ಪ್ರಕ್ರಿಯೆಗಳ ಬಗ್ಗೆ ವಿವರಿಸಿದ್ದೇವೆಂದು ಹೇಳಿದ್ದಾರೆ. 

ಜೈವಿಕ ತ್ಯಾಜ್ಯ ದಡದಲ್ಲಿದ್ದರೂ ಅವುಗಳನ್ನು ಬಸವನ ಹುಳು ಹಾಗೂ ಏಡಿಗಳು ಸೇವನೆ ಮಾಡಲು ಬರುತ್ತವೆ. ಹೀಗಾಗಿ ಇಂತಹ ತ್ಯಾಜ್ಯವನ್ನು ನಿರುಪಯುಕ್ತವೆಂದು ಕರೆಯುವುದು ತಪ್ಪು ಎಂದು ತಿಳಿಸಿದ್ದಾರೆ. 

ಪಶ್ಚಿಮದಲ್ಲಿ ಅರೇಬಿಯನ್ ಸಮುದ್ರಕ್ಕೆ ಅನೇಕ ನದಿಗಳು ಸೇರುತ್ತವೆ. ಈ ಕಾರಣದಿಂದಾಗಿ ಪೂರ್ವ ಕರಾವಳಿಗೆ ಹೋಲಿಸಿದರೆ ಸಾವಯವ ತ್ಯಾಜ್ಯಗಳು ಪಶ್ಚಿಮ ಕರಾವಳಿಯಲ್ಲಿಯೇ ಹೆಚ್ಚು ಕಂಡುಬರುತ್ತವೆ. ಈ ಕಾರಣದಿಂದಾಗಿ, ಪಶ್ಚಿಮ ಕರಾವಳಿಯು ಉತ್ಪಾದಕತೆಗಳೂ ಹೆಚ್ಚಾಗಿರುತ್ತವೆ ಎಂದು ಕೇಂದ್ರ ಸಮುದ್ರ ಮೀನುಗಾರಿಕೆ ಸಂಶೋಧನಾ ಸಂಸ್ಥೆ, ಮಂಗಳೂರು ಸಂಶೋಧನಾ ಕೇಂದ್ರದ ಪ್ರಧಾನ ವಿಜ್ಞಾನಿ ಡಾ.ಪ್ರತಿಭಾ ರೋಹಿತ್ ಅವರು ಹೇಳಿದ್ದಾರೆ. 

SCROLL FOR NEXT