ರಾಜ್ಯ

ಬೆಳಗಾವಿ: ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅನುಯಾಯಿ ಸಿದ್ದವ್ವ ಮೇತ್ರಿ ನಿಧನ

Raghavendra Adiga

ಬೆಳಗಾವಿ:  ಸಂವಿಧಾನ  ಶಿಲ್ಪಿ ದಿವಂಗತ ಬಿ ಆರ್ ಅಂಬೇಡ್ಕರ್ ಅವರ ಅನುಯಾಯಿ ಸಿದ್ದವ್ವ ಮೇತ್ರಿ (95)   ಶುಕ್ರವಾರ ಬೆಳಿಗ್ಗೆ ಇಲ್ಲಿ ನಿಧನರಾದರು. ಅವರು ವಯೋಸಹಜ ಕಾಯಿಲೆಯಿಂದ ಬಳಲುತ್ತುದ್ದರು.

ಮೂಲಗಳ ಪ್ರಕಾರ  1939 ರಲ್ಲಿ ಬೆಳಗಾವಿಗೆ ಭೇಟಿ ನೀಡಿದ್ದ ಅಂಬೇಡ್ಕರ್ ಅವರಿಗೆ ಆಹಾರ ವಸತಿಯನ್ನು ನೀಡಿ ಮೇತ್ರಿ ಆರೈಕೆ ಮಾಡಿದ್ದರು.

ತಮ್ಮನ್ನು ಉಪಚರಿಸಿದ್ದ ಸಿದ್ದವ್ವ ಮೇತ್ರಿಯವರಿಗೆ ತನ್ನ ಕೃತಜ್ಞತೆಯನ್ನು ವ್ಯಕ್ತಪಡಿಸಿದ ಅಂಬೇಡ್ಕರ್ ಮುಖ್ಯವಾಹಿನಿಗೆ ಪ್ರವೇಶಿಸಿಸಮಾಜಕ್ಕೆ ಸೇವೆ ಸಲ್ಲಿಸುವಂತೆ ಸಲಹೆ ನೀಡಿದ್ದರು. ಅವರ ಸಲಹೆಯ ಮೇರೆಗೆ ಮೇತ್ರಿ ತಾವು ಸಾಯುವವರೆಗೂ ಅಂಬೇಡ್ಕರ್ ತತ್ವಾದರ್ಶಗಳನ್ನು ಬೋಧಿಸುತ್ತಿದ್ದರು.

SCROLL FOR NEXT