ರಾಜ್ಯ

ಆರೆಂಜ್, ರೆಡ್ ಝೋನ್ ಗಳಲ್ಲಿ ಚಾಲನಾ ಪರವಾನಗಿ ನೀಡಲು ಆರ್ಟಿಒ ನಿರ್ಧಾರ

Manjula VN

ಬೆಂಗಳೂರು: ಕೊರೋನಾ ವೈರಸ್ ಹಿನ್ನೆಲೆಯಲ್ಲಿ ಚಾಲನಾ ಪರವಾನಗಿ (ಡಿ.ಎಲ್) ಹಾಗೂ ಕಲಿಕಾ ಪರವಾನಗಿ (ಎಲ್.ಎಲ್) ನೀಡುವುದನ್ನು ಸ್ಥಗಿತಗೊಳಿಸಿದ್ದ ಸಾರಿಗೆ ಇಲಾಖೆ ಇದೀಗ ಲಾಕ್'ಡೌನ್ ಸಡಿಲಗೊಂಡಿರುವ ಹಿನ್ನೆಲೆಯಲ್ಲಿ ಮತ್ತೆ ರೆಡ್ ಹಾಗೂ ಆರೆಂಜ್ ಝೋನ್ ಗಳಲ್ಲಿ ಚಾಲನಾ ಪರವಾನಗಿ ನೀಡುವ ಕಾರ್ಯವನ್ನು ಪುನರಾರಂಭಿಸಲು ನಿರ್ಧರಿಸಿದೆ ಎಂದು ತಿಳಿದುಬಂದಿದೆ. 

ಕೇಂದ್ರ ಸರ್ಕಾರದ ಮಾರ್ಗಸೂಚಿಗಳಂತೆ ಜೂನ್.1 ರಿಂದ ರೆಡ್ ಝೋನ್ ಹಾಗೂ ಆರೆಂಜ್ ಝೋನ್ ಗಳಲ್ಲಿ ಚಾಲನಾ ಪರವಾನಗಿ, ಕಲಿಕಾ ಪರವಾನಗಿ ಇಲಾಖೆ ನಿರ್ಧರಿಸಿದೆ. 

ಈಗಾಗಲೇ ಇಲಾಖೆಯು ಗ್ರೀನ್ ಝೋನ್ ನಲ್ಲಿರುವ 16 ಜಿಲ್ಲೆಗಳಿಗೆ ಚಾಲನಾ ಪರವಾನಗಿ ನೀಡುತ್ತಿದ್ದು, ಪರವಾನಗಿ ಪಡೆಯಲು ಈ ಮೊದಲೇ ಅರ್ಜಿ ಸಲ್ಲಿಸಿ ಕಾಯುತ್ತಿರುವವರಿಗೆ ಮೊದಲ ಆದ್ಯತೆಯನ್ನು ನೀಡಲಾಗುತ್ತಿದೆ. ಕಚೇರಿಯು ಶೇ.50ರಷ್ಟು ಸಾಮರ್ಥ್ಯದೊಂದಿಗೆ ನಡೆಯಲಿದೆ. ಸ್ಥಳದಲ್ಲಿ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದು ಸಾರಿಗೆ ಆಯುಕ್ತ ಎನ್.ಶಿವಕುಮಾರ್ ಅವರು ಹೇಳಿದ್ದಾರೆ. 

SCROLL FOR NEXT