ರಾಜ್ಯ

ಆಸ್ತಿಗಳನ್ನು ಕಾನೂನುಬದ್ಧಗೊಳಿಸಲು ಪರ್ಯಾಯ ಮಾರ್ಗದ ಹುಡುಕಾಟದಲ್ಲಿ ಸರ್ಕಾರ

Shilpa D

ಬೆಂಗಳೂರು: ಸರ್ಕಾರದ ಬಹು ನಿರೀಕ್ಷಿತ ಅಕ್ರಮ-ಸಕ್ರಮ ಯೋಜನೆಗೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿದೆ. ಹೀಗಾಗಿ ಆಸ್ತಿಗಳನ್ನು ಕಾನೂನು ಬದ್ದಗೊಳಿಸಲು ಸರ್ಕಾರ ಪರ್ಯಾಯ ಮಾರ್ಗ ಹುಡುಕುತ್ತಿದೆ.

ಅನಧಿಕೃತ ಆಸ್ತಿಗಳನ್ನು ಸಕ್ರಮಗೊಳಿಸಲು ನಗರಾಭಿವೃದ್ಧಿ ಇಲಾಖೆ ಅಧಿಕಾರಿಗಳು ಹಗಲು ರಾತ್ರಿ ಕೆಲಸ ಮಾಡುತ್ತಿದ್ದಾರೆ. ಅಕ್ರಮ-ಸಕ್ರಮ ಯೋಜನೆ ರೀತಿಯಲ್ಲಿ ಮತ್ತೊಂದು ಪ್ಲಾನ್ ಸಿದ್ಧಪಡಿಸುತ್ತಿದ್ದು ಇನ್ನು ಒಂದು ವಾರದಲ್ಲಿ ಹೊಸ ಯೋಜನೆ ಬರಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇಲ್ಲಿ, ನಿಯಮಗಳನ್ನು ಉಲ್ಲಂಘಿಸುವ ಅಥವಾ ಕಟ್ಟಡ ಯೋಜನೆ ಮತ್ತು ವಿನ್ಯಾಸ ಯೋಜನೆಯನ್ನು ಬದಲಾಯಿಸುವ ಕಟ್ಟಡಗಳನ್ನು ನೆಲಸಮ ಮಾಡುವ ಅಗತ್ಯವಿಲ್ಲ ಎಂದು ಮೂಲಗಳು ತಿಳಿಸಿವೆ.

ಅಕ್ರಮವಾಗಿ ನಿರ್ಮಿಸಿರುವ ಕಟ್ಟಡಗಳನ್ನು ಕಾನೂನು ಬದ್ದಗೊಳಿಸಲು ಸಲಹೆ ನೀಡಿದ್ದೇವೆ. ನಗರದ ಪ್ರತಿ ಎರಡರಲ್ಲಿ ಒಂದು ಕಟ್ಟಡ ನಿಯಮ ಉಲ್ಲಂಘಿಸಿ ನಿರ್ಮಾಣವಾಗಿರುತ್ತವೆ. ಕಾನೂನು ಬದ್ದವಾಗಿ ಅಕ್ರಮ ನಿರ್ಮಾಣ ತೆರವುಗೊಳಿಸಬೇಕಾದರೆ, ಸುಮಾರು 90% ಕಟ್ಟಡಗಳನ್ನು ನೆಲಸಮ ಮಾಡಬೇಕಾಗುತ್ತದೆ.

ಹೀಗಾಗಿ ಸಕ್ರಮ ಮಾಡಿಕೊಳ್ಳಲು ಅವಕಾಶ ನೀಡಿ ದಂಡವನ್ನು ಸಂಗ್ರಹಿಸಬೇಕಾಗುತ್ತದೆ, ಏಕೆಂದರೆ ಹೆಚ್ಚಿನ ಪ್ರಮಾಣದಲ್ಲಿ ಅನಧಿಕೃತ ಕಟ್ಟಡಗಳಿವೆ, ಅಕ್ರಮ- ಸಕ್ರಮ ಯೋಜನೆ ಸುಪ್ರೀಂ ಕೋರ್ಟ್ ನಲ್ಲಿರುವ ಕಾರಣ ಸರ್ಕಾರ ಅಸಹಾಯಕ ಸ್ಥಿತಿಯಲ್ಲಿದೆ, ಹೀಗಾಗಿ ಹಣ ಸಂಗ್ರಹಕ್ಕೆ ಹೊಸ ಯೋಜನೆ ಸಿದ್ಧಪಡಿಸಲಾಗುತ್ತಿದೆ, ಇತ್ತೀಚೆಗೆ ಸಂಪುಟ ಅನುಮೋದಿಸಿರುವ ಬಿಡಿಎ ತಿದ್ದುಪಡಿ ಕಾಯಿದೆ ಇದಕ್ಕಿಂತ ವಿಭಿನ್ನವಾಗಿದೆ.

SCROLL FOR NEXT