ರಾಜ್ಯ

ಅಧಿಕಾರಿಗಳ ಎಡವಟ್ಟು: ಕ್ವಾರಂಟೈನ್ ಉಲ್ಲಂಘನೆ ಶಂಕೆ; ಮಹಿಳೆಯನ್ನು ರೈಲಿನಿಂದ ಕೆಳಗಿಳಿಸಿ ಅವಾಂತರ!

Nagaraja AB

ಬೆಂಗಳೂರು: ಕ್ವಾರಂಟೈನ್ ನಿಯಮಗಳ ಅರಿವಿನ ಕೊರತೆ ಮತ್ತು ಅನಗತ್ಯ ಭೀತಿಯ ಕಾರಣ ಬೆಂಗಳೂರು-ಬೆಳಗಾವಿ ರೈಲಿನಿಂದ ಮಹಿಳೆಯೊಬ್ಬರನ್ನು ಕೆಳಗಿಳಿಸಿ ಅಧಿಕಾರಿಗಳು ಅವಾಂತರ ಮಾಡಿರುವ ಘಟನೆ ಸೋಮವಾರ ನಡೆದಿದೆ. 

ಇಬ್ಬರು ಮಕ್ಕಳೊಂದಿಗೆ ನಾಗಪುರದಿಂದ ಬೆಂಗಳೂರಿಗೆ ಮರಳಿದ್ದ ಗದಗ್ ನಿವಾಸಿ ಅಲ್ಕಾ ಗಾಂಧಿ, ಬೆಳಗಾವಿ ರೈಲು ಹತ್ತಿದ್ದರು. ಆದರೆ, ಕ್ವಾರಂಟೈನ್ ನಿಯಮ ಉಲ್ಲಂಘನೆ ಶಂಕೆ ಹಿನ್ನೆಲೆಯಲ್ಲಿ ಮತ್ತೆ ಬೆಂಗಳೂರಿಗೆ ಹೋಗುವಂತೆ  ಬಲವಂತದಿಂದ ಆಕೆಯನ್ನು ರೈಲಿನಿಂದ ಕೆಳಗೆ ಇಳಿಸಲಾಯಿತು. ನಂತರ ಮತ್ತೊಂದು ರೈಲಿನಲ್ಲಿ ಆ ಮಹಿಳೆ ಬೆಳಗಾವಿಗೆ ಹೋಗಲು ಅವಕಾಶ ಮಾಡಿಕೊಡಲಾಯಿತು.

ಇದರಿಂದಾಗಿ ಬೆಂಗಳೂರು ನಗರ- ಬೆಳಗಾವಿ ನಡುವಣ ಇತ್ತೀಚಿಗೆ ಸಂಚರಿಸುತ್ತಿದ್ದ ರೈಲಿನ ಡಿ2 ಬೋಗಿಯಲ್ಲಿ ಇತರ ಪ್ರಯಾಣಿಕರಿಂದ  ದೊಡ್ಡ ಹೈಡ್ರಾಮವೇ ನಡೆಯಿತು, ಕೆಲವರು ಅಳುತ್ತಿದ್ದರೆ ಮತ್ತೆ ಕೆಲವರು ನಮಗೆ ಏಲ್ಲಿ ಕೊರೋನಾ ಬರುತ್ತದೆಯೋ ಎಂಬ ಭೀತಿಯಲ್ಲಿ ದೊಡ್ಡ ರಂಪಾಟವೇ ನಡೆಸಿದರು ಎಂಬುದು  ರೈಲ್ವೆ ಮೂಲಗಳಿಂದ ತಿಳಿದುಬಂದಿದೆ.

ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆಗೆ ಮಾತನಾಡಿದ ಅಲ್ಕಾ ಗಾಂಧಿ, ನಾಗಪುರದಿಂದ ಬಂದು ಸೋಮವಾರ ಮುಂಜಾನೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿ ಇಳಿದು, ಗದಗ್ ಕ್ಕೆ ಹೋಗಬೇಕೆಂದು ರೈಲ್ವೆ ಅಧಿಕಾರಿಗಳಿಗೆ ಹೇಳಿದೆ. ಅವರು ಕೈಗಳಿಗೆ ಮುದ್ರೆ ಹಾಕಿ 8 ಗಂಟೆಯ ವಿಶೇಷ ರೈಲಿನಲ್ಲಿ ತೆರಳಲು ಅವಕಾಶ ಮಾಡಿಕೊಟ್ಟರು. ಗದಗ್ ಗೆ ತೆರಳಿದ ನಂತರ ಕ್ವಾರಂಟೈನ್ ಗೆ ಒಳಪಡಬೇಕಾಗುತ್ತದೆ ಎಂದು ಹೇಳಿದರು.ಕ್ವಾರಂಟೈನ್ ನಲ್ಲಿರಲು ಒಪ್ಪಿಕೊಂಡಿರುವುದಾಗಿ ತಿಳಿಸಿದರು. 

ಆಕೆಯ ಕೈ ಮೇಲೆ ಪ್ರಯಾಣಿಸಲು ಅವಕಾಶ ನೀಡುವ ಟ್ರಾನ್ಸಿಟ್ ಪ್ಯಾಸೆಂಜರ್ ಎಂಬ ಮುದ್ರೆ ಹಾಕಲಾಗಿದೆ. ಆದಾಗ್ಯೂ ಬೆಳಗ್ಗೆ 10-30 ಗಂಟೆಗೆ ತುಮಕೂರಿಗೆ ರೈಲಿನಲ್ಲಿ ತೆರಳಿದ ನಂತರ ಸರ್ಕಾರಿ ರೈಲ್ವೆ ಪೊಲೀಸರ ವಶಕ್ಕೆ ನೀಡಲಾಗಿದೆ. ನಂತರ ವರ್ಕ್‌ಮೆನ್ ಸ್ಪೆಷಲ್ ’ರೈಲಿನಲ್ಲಿ ತುಮಕೂರಿನಿಂದ ಯಶವಂತಪುರಕ್ಕೆ ಕರೆತರಲಾಯಿತು ಎಂದು ಅವರು ಹೇಳಿದರು. 

ಮಹಿಳೆಯ ಸಂಬಂಧಿಕರು ಯಶವಂತಪುರ ನಿಲ್ದಾಣಕ್ಕೆ ಆಗಮಿಸಿ, ಅವರು ತಪ್ಪು ಮಾಡಿಲ್ಲ ಎಂಬುದನ್ನು ಮನವರಿಕೆ ಮಾಡಿಕೊಟ್ಟಿದ್ದಾರೆ. ಅಂತಿಮವಾಗಿ ಗದಗ್ ಗೆ ತೆರಳಲು ಅವಕಾಶ ಮಾಡಿಕೊಡಲಾಗಿದೆ. ಇದರ ಬಗ್ಗೆ ನಮಗೆ ಏನೂ ಗೊತ್ತಿಲ್ಲ ಎಂದು ರೈಲ್ವೆಯ ಉನ್ನತ ಅಧಿಕಾರಿಗಳು ನುಣುಚಿಕೊಂಡಿದ್ದಾರೆ. 

SCROLL FOR NEXT