ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಜ್ಯ

ಬೆಂಗಳೂರಿಗೆ ಗಢಗಢ: ಸ್ಲಂಗಳಿಗೂ ಕಾಲಿಟ್ಟ ಕೊರೋನಾ, ರಾಗಿಗುಡ್ಡದಲ್ಲಿ ನಾಲ್ವರಿಗೆ ಸೋಂಕು, ಹೆಚ್ಚಿದ ಆತಂಕ

ಬೆಂಗಳೂರಿನ ಜೆಪಿ ನಗರದ ರಾಗಿಗುಡ್ಡ ಕೊಳೆಗೇರಿಯಲ್ಲಿ ಒಂದು ಕುಟುಂಬದ ನಾಲ್ವರಿಗೆ ಕೊರೋನಾ ಸೋಂಕು ತಗುಲಿದೆ. ತಾಯಿ, ಮಗ, ಮಗಳು ಮತ್ತು ಅವರ ತಮ್ಮನ ಮಗಳಿಗೆ ಸೋಕು ದೃಢಪಟ್ಟಿದೆ.

ಸಂಗ್ರಹ ಚಿತ್ರ
Vishwanath S
Updated On : 4 Jun 2020, 10:10 pm

ಬೆಂಗಳೂರು: ಬೆಂಗಳೂರಿನ ಜೆಪಿ ನಗರದ ರಾಗಿಗುಡ್ಡ ಕೊಳೆಗೇರಿಯಲ್ಲಿ ಒಂದು ಕುಟುಂಬದ ನಾಲ್ವರಿಗೆ ಕೊರೋನಾ ಸೋಂಕು ತಗುಲಿದೆ. ತಾಯಿ, ಮಗ, ಮಗಳು ಮತ್ತು ಅವರ ತಮ್ಮನ ಮಗಳಿಗೆ ಸೋಕು ದೃಢಪಟ್ಟಿದೆ.

ಈ ನಾಲ್ವರು ವಿಶೇಷ ರೈಲಿನ ಮೂಲಕ ದೆಹಲಿಯಿಂದ ಈ ಆಗಮಿಸಿದ್ದ ಈ ನಾಲ್ವರು ಹೆಬ್ಬಾಳದ ವಿದ್ಯಾರ್ಥಿ ನಿಲಯವೊಂದರಲ್ಲಿ ಏಳು ದಿನಗಳ ಕಾಲ ಕ್ವಾರಂಟೈನ್‌ ಆಗಿದ್ದರು. ನಂತರ ಅವರ ಸೋಂಕಿನ ಪರೀಕ್ಷೆ ನಡೆಸಿ, ಮನೆಗೆ ಕಳುಹಿಸಲಾಗಿತ್ತು. ಆದರೆ, ವರದಿ ಬಂದಾಗ ಅವರಲ್ಲಿ ಸೊಂಕು ದೃಢಪಟ್ಟಿರುವುದು ತಿಳಿದುಬಂದಿದೆ. 

ಇದರಿಂದ ಕೊಳಗೇರಿ ನಿವಾಸಿಗಳು ಆತಂಕಕ್ಕೆ ಸಿಲುಕಿದ್ದಾರೆ. ಪರೀಕ್ಷೆಯ ಫಲಿತಾಂಶ ಬರುವ ಮುನ್ನ ಮನೆಗೆ ಕಳುಹಿಸಿರುವ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

Advertisement

Advertisement

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement