ರಾಜ್ಯ

ವಾಣಿಜ್ಯ ತೆರಿಗೆ ಅಧಿಕಾರಿಗಳಿಂದ ತೆರಿಗೆ ವಂಚಿಸಲು ಸಂಗ್ರಹಿಸಿದ್ದ 11 ಕೋಟಿ ರೂ ಮೊತ್ತದ ಅಡಕೆ ವಶ

Srinivas Rao BV

ಬೆಂಗಳೂರು: ರಾಜ್ಯ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ಇತ್ತೀಚೆಗೆ ಶಿವಮೊಗ್ಗ ಮತ್ತು ಸಾಗರದಲ್ಲಿನ ಅಡಕೆ ವ್ಯಾಪಾರಿಗಳ ಗೋದಾಮುಗಳು ಮತ್ತು ಅಂಗಡಿಗಳ ಮೇಲೆ ದಾಳಿ ನಡೆಸಿ ಜಿಎಸ್‌ಟಿಯಡಿ.ತೆರಿಗೆ ಮತ್ತು 1.10 ಕೋಟಿ ರೂ ದಂಡವನ್ನು ವಿಧಿಸಿದ್ದಾರೆ.

ಕೋವಿಡ್ -19 ಲಾಕ್‍ಡೌನ್‍ ಸಮಯದಲ್ಲಿ ಭಾರೀ ಪ್ರಮಾಣದ ಅಡಕೆಯನ್ನು ಕೆಲ ವ್ಯಾಪಾರಿಗಳು ಖರೀದಿಸಿ ಅಗತ್ಯ ದಾಖಲೆಗಳಿಲ್ಲದೆ ಖರೀದಿಸಿ ಸಂಗ್ರಹಿಸುತ್ತಿದ್ದಾರೆ ಎಂಬ ವಿಶ್ವಾಸಾರ್ಹ ಮಾಹಿತಿ ಆಧರಿಸಿ. ಅಧಿಕಾರಿಗಳು ಗೋದಾಮುಗಳು ಮತ್ತು ಸರಕುಗಳ ಚಲನೆಯನ್ನು ಸೂಕ್ಷ್ಮವಾಗಿ ಗಮನಿಸಿದ್ದಾರೆ. ದಕ್ಷಿಣ ವಲಯದ ಹೆಚ್ಚುವರಿ ಆಯುಕ್ತ ನಿತೇಶ್ ಕೆ ಪಾಟೀಲ್ ನೇತೃತ್ವದ ಅಧಿಕಾರಿಗಳ ತಂಡ  ಮಂಗಳವಾರ ಮುಂಜಾನೆ ಶಿವಮೊಗ್ಗದ 9 ಸ್ಥಳಗಳು ಮತ್ತು ಸಾಗರದ 4 ಸ್ಥಳಗಳ ಮೇಲೆ ದಾಳಿ ನಡೆಸಿದೆ. 

ತಪಾಸಣೆ ಸಮಯದಲ್ಲಿ ಅಧಿಕಾರಿಗಳು ಲೆಕ್ಕ ನೀಡದ ಎರಡು ಗೋದಾಮುಗಳನ್ನು ಗಮನಿಸಿ ಅದರಲ್ಲಿ ಸಂಗ್ರಹವಾಗಿರುವ ಸರಕುಗಳಿಗೆ ದಂಡ ವಿಧಿಸಿದ್ದಾರೆ. ಲೆಕ್ಕಪತ್ರ ಪುಸ್ತಕಗಳ ಹೊರಗೆ ವಹಿವಾಟುಗಳು ನಡೆದಿರುವುದನ್ನು ಗಮನಿಸಿದ್ದಾರೆ, ಒಟ್ಟು 11.02 ಕೋಟಿ ರೂ. ವಹಿವಾಟು ನಡೆದಿರುವುದರಿಂದ 1.10 ಕೋಟಿ ರೂ.ದಂಡ ಮತ್ತು ತೆರಿಗೆ ವಿಧಿಸಿದ್ದಾರೆ. 86 ಲಕ್ಷ ರೂ. ಈಗಾಗಲೇ ವಸೂಲಿ ಮಾಡಲಾಗಿದೆ. ಹೆಚ್ಚಿನ ತನಿಖೆ ಪ್ರಗತಿಯಲ್ಲಿದೆ. ವಹಿವಾಟುಗಳು ಲೆಕ್ಕಪತ್ರ ಪುಸ್ತಕಗಳ ಹೊರಗೆ ನಡೆದಿರುವುದರಿಂದ ಸೂಕ್ತ ಕ್ರಮಕ್ಕಾಗಿ ಮಾಹಿತಿಯನ್ನು ಎಪಿಎಂಸಿ ಅಧಿಕಾರಿಗಳೊಂದಿಗೆ ಹಂಚಿಕೊಳ್ಳಲಾಗುವುದು ಎಂದು ಶುಕ್ರವಾರ ಪ್ರಕಟಣೆ ತಿಳಿಸಿದೆ.
 

SCROLL FOR NEXT