ರಾಜ್ಯ

ಲಾಕ್'ಡೌನ್ ಸಂಕಷ್ಟ: 27,000 ಕ್ಯಾಬ್ ಚಾಲಕರಿಗೆ ಪರಿಹಾರ ನೀಡಿದ ಸರ್ಕಾರ

Manjula VN

ಬೆಂಗಳೂರು: ಲಾಕ್'ಡೌನ್ ನಿಂದ ದುಡಿಮೆ ಇಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದ ಆಟೋ ಹಾಗೂ ಕ್ಯಾಬ್ ಚಾಲಕರಿಗೆ ಸರ್ಕಾರ ಘೋಷಣೆ ಮಾಡಿದ್ದ ರೂ.5 ಸಾವಿರ ಪರಿಹಾರದ ಮೊತ್ತ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ಜಮೆ ಆರಂಭವಾಗಿದೆ. 

ಈ ಮೂಲಕ ಕಷ್ಟದಲ್ಲಿ ಸಿಲುಕಿದ್ದವರ ನೆರವಿದೆ ಸರ್ಕಾರ ಧಾವಿಸಿದೆ. ಈ ವರೆಗೂ ಸುಮಾರು 27,000 ಆಟೋ ಹಾಗೂ ಕ್ಯಾಬ್ ಚಾಲಕರಿಗೆ ಸರ್ಕಾರ ಪರಿಹಾರ ಹಣವನ್ನು ವಿತರಿಸಿದೆ. 

ಆದರ್ಶ್ ಆಟೋ ಯೂನಿಯನ್ ಪ್ರಧಾನ ಕಾರ್ಯದರ್ಶಿ ಸಿ. ಸಂಪತ್ ಎಂಬುವವರು ಮಾತನಾಡಿ, ಸರ್ಕಾರ ಪರಿಹಾರ ವಿತರಿಸಿದ ಬಳಿ ನಿರಾಳವಾಗಿದೆ. ಆದರೆ, ರಾಜ್ಯದಲ್ಲಿ ಬಹುತೇಕ ಮಂದಿ ಬ್ಯಾಡ್ಜ್ ಗಳನ್ನು ಹೊಂದಿಲ್ಲ. ಅಂತಹವರೂ ಕೂಡ ಸಂಕಷ್ಟದಲ್ಲಿದ್ದಾರೆ. ಅವರಿಗೂ ಪರಿಹಾರ ನೀಡುವಂತೆ ಮುಖ್ಯಮಂತ್ರಿಗಳ ಮನವಿ ಮಾಡಿಕೊಳ್ಳುತ್ತೇವೆಂದು ಹೇಳಿದ್ದಾರೆ. 

ರಾಜ್ಯದಲ್ಲಿ ಬ್ಯಾಡ್ಜ್ ಹೊಂದಿರದ 3 ಲಕ್ಷ ಚಾಲಕರಿದ್ದಾರೆ. ಅವರಿಗೂ ಸಹಾಯ ಮಾಡುವಂತೆ ಸರ್ಕಾರದ ಬಳಿ ಮನವಿ ಮಾಡಿಕೊಳ್ಳುತ್ತೇವೆ. ಶುಕ್ರವಾರ ಈ ಕುರಿತು ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸುತ್ತೇವೆಂದು ತಿಳಿಸಿದ್ದಾರೆ. 

ಲಾಕ್'ಡೌನ್ ಹಿನ್ನೆಲೆಯಲ್ಲಿ ಸಂಕಷ್ಟಕ್ಕೊಳಗಾದ ಆಟೋ ಹಾಗೂ ಟ್ಯಾಕ್ಸಿ ವಾಹನ ಚಾಲಕರಿಗೆ ಘೋಷಿಸಲಾಗಿರುವ ತಲಾ ರೂ.5 ಸಾವಿರ ಪರಿಹಾರ ಧನ ವಿತರಣೆ ವಳಂಬವಾಗಬಾರದು ಎಂದು ಮುಖ್ಯಮಂತ್ರಿಗಳು ಸಾರಿಗೆ ಇಲಾಖೆಯ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. 

SCROLL FOR NEXT