ಅಮರ್ಥ್ಯ ಮತ್ತು ಐಶ್ವರ್ಯ 
ರಾಜ್ಯ

ಡಿಕೆ ಶಿವಕುಮಾರ್ ಪುತ್ರಿ-ಸಿದ್ದಾರ್ಥ್ ಪುತ್ರನ ವಿವಾಹಕ್ಕೆ ಬೆಸುಗೆ ಹಾಕಿದ್ದು ಇವರೇ!

ಮದುವೆಗಳು ಸ್ವರ್ಗದಲ್ಲಿಯೇ ನಿಶ್ಚರವಾಗಿರುತ್ತವೆ ಎಂಬ ನಾಣ್ಣುಡಿಯಿದೆ. ಆದರೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಪುತ್ರಿ ಐಶ್ವರ್ಯಾ ಮತ್ತು ಕಾಫಿ ಡೇ ಮಾಲೀಕ ಸಿದ್ದಾರ್ಥ್ ಪುತ್ರ ಅಮರ್ಥ್ಯ ಹೆಗ್ಡೆ ಮದುವೆ ಮಾತುಕತೆಗೆ ಅವಧೂತ ವಿನಯ್ ಗುರೂಜಿ ಕಾರಣ ಎಂದು ಹೇಳಲಾಗುತ್ತಿದೆ.

ಚಿಕ್ಕಮಗಳೂರು: ಮದುವೆಗಳು ಸ್ವರ್ಗದಲ್ಲಿಯೇ ನಿಶ್ಚರವಾಗಿರುತ್ತವೆ ಎಂಬ ನಾಣ್ಣುಡಿಯಿದೆ. ಆದರೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಪುತ್ರಿ ಐಶ್ವರ್ಯಾ ಮತ್ತು ಕಾಫಿ ಡೇ ಮಾಲೀಕ ಸಿದ್ದಾರ್ಥ್ ಪುತ್ರ ಅಮರ್ಥ್ಯ ಹೆಗ್ಡೆ ಮದುವೆ ಮಾತುಕತೆಗೆ ಅವಧೂತ ವಿನಯ್ ಗುರೂಜಿ ಕಾರಣ ಎಂದು ಹೇಳಲಾಗುತ್ತಿದೆ.

ಅಮರ್ಥ್ಯ ಹೆಗ್ಡೆ ಮತ್ತು ಅಜ್ಜಿ ವಾಸಂತಿ ಗಂಗಯ್ಯ ಹೆಗ್ಡೆ, 15 ದಿನಗಳ ಹಿಂದೆ ಚಿಕ್ಕಮಗಳೂರಿನಲ್ಲಿರುವ ವಿನಯ್ ಗುರೂಜಿ ಆಶ್ರಮಕ್ಕೆ ಬಂದು ಅವರ ಅಭಿಪ್ರಾಯ ಕೇಳಿ ಹೋಗಿದ್ದರು ಎಂದು ಗುರೂಜಿ ಆಪ್ತರೊಬ್ಬರು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ.

ವಿನಯ್ ಗುರೂಜಿ

ವಾಸಂತಿ ಅವರು ವಿನಯ್ ಗುರೂಜಿ ಅವರ ಭಕ್ತೆಯಾಗಿದ್ದು ಈ ಸಂಬಂಧಕ್ಕೆ ಅನುಮತಿ ನೀಡಿದ್ದಾರೆ. ಇದೇ ವೇಳೆ ಎರಡು ಕುಟುಂಬಗಳ ಮಧ್ಯೆ ಮಾತುಕತೆ ನಡೆದಿದ್ದು ಶೀಘ್ರವೇ ನಿಶ್ಚಿತಾರ್ಥ ನಡೆಯಲಿದೆ ಎಂದು ತಿಳಿದುಬಂದಿದೆ.
 
ಶಿವಕುಮಾರ್ ಮತ್ತು ಸಿದ್ಧಾರ್ಥ್ ವ್ಯವಹಾರಿಕ ಪಾಲುದಾರರಾಗಿದ್ದರು, ಸಿದ್ದಾರ್ಥ್ ಅವರ ಮಾವ ಎಸ್ ಎಂ ಕೃಷ್ಣ, ಶಿವಕುಮಾರ್ ಅವರ ರಾಜಕೀಯ ಗುರು, ಹೀಗಾಗಿ ಮದುವೆ ಮಾತುಕತೆಗಳು ಮುಂದುವರಿದಿವೆ.

ಸಿದ್ದಾರ್ಥ್ ಅವರ ಆಪ್ತ ಸ್ನೇಹಿತ ಶೃಂಗೇರಿ ಶಾಸಕ ಟಿಡಿ ರಾಜೇಗೌಡ ಈ ವಿವಾಹ ನಿಶ್ಚಯದ ಬಗ್ಗೆ ಮಾತನಾಡಿದ್ದು, ಇದು ಅಚ್ಚರಿಯ ವಿಷಯವಲ್ಲ, ಏಕೆಂದರೇ ಎರಡು ಕುಟುಂಬಗಳು ತುಂಬಾ ಆಪ್ತರಾಗಿದ್ದಾರೆ ಎಂದು ಹೇಳಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಗೌರಿಗದ್ದೆ ದತ್ತಾಶ್ರಮದ ಅವಧೂತ ವಿನಯ್ ಗುರೂಜಿಯ ಪರಮಭಕ್ತರಾಗಿದ್ದಾರೆ. ಮಾಜಿ ಪ್ರಧಾನಿ ದೇವೇಗೌಡ, ಮತ್ತು ನರೇಂದ್ರ ಮೋದಿ ಅವರ ವಿಷಯದಲ್ಲಿ ವಿನಯ್ ಗುರೂಜಿ ಹೇಳಿದ್ದ ಭವಿಷ್ಯ ನಿಜವಾಗಿತ್ತು. ಇಲ್ಲಿಗೆ ಮಾಜಿ ಸಿಎಂ ಕುಮಾರಸ್ವಾಮಿ ಮತ್ತು ಸಿಎಂ ಯಡಿಯೂರಪ್ಪ ಆಗಾಗ್ಗೆ ಭೇಟಿ ನೀಡುತ್ತಿರುತ್ತಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸಿಇಸಿ ವಿರುದ್ಧದ ವಿಪಕ್ಷಗಳ ಪ್ರತಿಭಟನೆ: ವಶಕ್ಕೆ ಪಡೆದ ಬೆನ್ನಲ್ಲೇ ರಾಹುಲ್, ಪ್ರಿಯಾಂಕಾ ಗಾಂಧಿ ಬಿಡುಗಡೆ

ಅಧಿಕಾರಿಯಂತೆ ನಟಿಸಿ ಆಪ್ ನಾಯಕನಿಗೆ ಧೋಕಾ; ಮದುವೆಯಾಗಿ ಆಭರಣಗಳೊಂದಿಗೆ ಮಹಿಳೆ ಪರಾರಿ!

ಆಪರೇಷನ್ ಸಿಂಧೂರ್, ರಕ್ಷಕ್‌ನಲ್ಲಿ ಪ್ರಮುಖ ಪಾತ್ರವಹಿಸಿದ್ದ ಅಶುತೋಷ್ ದೀಕ್ಷಿತ್ ವಾಯುಪಡೆಯ ನೂತನ ಮುಖ್ಯಸ್ಥ!

ಮಚ್ಛಾರ್ ಆರೋಗ್ಯಯಲ್ಲಿ 'ಸ್ಥಿರ ಸುಧಾರಣೆ': ಭಾರತೀಯ ರಾಯಭಾರ ಕಚೇರಿ

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!