ಭ್ರಷ್ಟಾಚಾರ ನಿಗ್ರಹ ದಳ 
ರಾಜ್ಯ

ರಾಜ್ಯದ ವಿವಿಧೆಡೆ ಭ್ರಷ್ಟರಿಗೆ ಶಾಕ್! ಬೆಳ್ಳಂಬೆಳಗ್ಗೆ ಎಸಿಬಿ ದಾಳಿ, ಕಡತ ಪರಿಶೀಲನೆ

ಸೂರ್ಯ ನಗರಿ ಕಲಬುರಗಿಯಲ್ಲಿ ಹಾಗೂ ಕುಂದಾನಗರಿ ಬೆಳಗಾವಿಯಲ್ಲಿ ಬೆಳ್ಳಂಬೆಳಿಗ್ಗೆ ಎಸಿಬಿ ದಾಳಿ ಮಾಡಿದೆ.

ಕಲಬುರಗಿ: ಸೂರ್ಯ ನಗರಿ ಕಲಬುರಗಿಯಲ್ಲಿ ಹಾಗೂ ಕುಂದಾನಗರಿ ಬೆಳಗಾವಿಯಲ್ಲಿ ಬೆಳ್ಳಂಬೆಳಿಗ್ಗೆ ಎಸಿಬಿ ದಾಳಿ ಮಾಡಿದೆ.

ಅದಾಯಕ್ಕಿಂತ ಅಧಿಕ ಆಸ್ತಿ ಹೊಂದಿದ ಆರೋಪದಡಿ ದೇವರಾಜ್ ಅರಸು ಅಭಿವೃದ್ಧಿ ನಿಗಮದ ಕಲಬುರಗಿ ಮತ್ತು ಯಾದಗಿರಿ ವ್ಯವಸ್ಥಾಪಕ ಜಗದೇವಪ್ಪ ಮುಗುಟ ಮನೆ ಮೇಲೆ ದಾಳಿ ಎಸಿಬಿ ದಾಳಿ ಮಾಡಿದೆ.

ಜಗದೇವಪ್ಪ ಅವರ ಕಲಬುರಗಿಯ ಮನೆ , ಕಾಂಪ್ಲೆಕ್ಸ್ , ಯಾದಗಿರಿ ಕಚೇರಿ‌ ಸೇರಿ ಬೀದರ್ ಮನೆ ಮೇಲೆ ಏಕಕಾಲದಲ್ಲಿ ಕಲಬುರಗಿ ಮತ್ತು ಯಾದಗಿರಿ ಡಿವೈಎಸ್ಪಿ ಗಳ ನೇತೃತ್ವದ ತಂಡ ದಾಳಿ ಮಾಡಿದೆ.

ಕುಂದಾನಗರಿ ಬೆಳಗಾವಿಯಲ್ಲಿ ಎಸಿಬಿ ದಾಳಿ

ಬೆಳಗಾವಿ: ಕಲಬುರಗಿ ಮಾತ್ರವಲ್ಲದೆ ಬೆಳಗಾವಿಯ ತೂಕ ಮತ್ತು ಮಾಪನ ಇಲಾಖೆಯ ಅಧಿಕಾರಿ ಸುಭಾಷ್​ ಉಪ್ಪಾರ ಅವರ ಮನೆ ಹಾಗೂ ಕಚೇರಿ ಹಾಗೂ ಸಂಬಂಧಿಗಳ ಮೇಲೆ ಸಹ ಎಸಿಬಿ ಅಧಿಕಾರಿಗಳೂ ದಾಳಿ ನಡೆಸಿದ್ದಾರೆ, ನಗರದ ನಾಲ್ಕು ಬೇರೆ ಬೇರೆ ಕಡೆ ದಾಳಿ ನಡೆದಿದೆ. 

ಎಸಿಬಿ ಎಸ್‌ಪಿ ಬಿ.ಎಸ್.ನೇಮಗೌಡರ ನೇತೃತ್ವದ ತಂಡ ಬೆಳಗಾವಿಯ ರುಕ್ಮಿಣಿ ನಗರದ ಮನೆ, ಕಚೇರಿ, ಬಾಡಿಗೆ ಮನೆ ಹಾಗೂ ಬಸವನ ಕುಡಚಿಯಲ್ಲಿರುವ ಅಳಿಯ ಸದಾನಂದ ಮನೆ ಮೇಲೆ ದಾಳಿ ನಡೆಸಿ ದಾಖಲೆಗಳ ಪರಿಶೀಲನೆ ನಡೆಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Geneva ಸಭೆಯಲ್ಲಿ ಭಾರತದ ವಿರುದ್ಧ ಟೀಕೆ; ‘ರಾಜಕೀಯ ಪ್ರೇರಿತ ಹೇಳಿಕೆಗಳ ಒಪ್ಪಲ್ಲ’ ಎಂದ MEA, ವಿಶ್ವಸಂಸ್ಥೆ ಸಮಿತಿ ವಿರುದ್ಧ ಕಿಡಿ..!

'ವಿರೋಧವಿದ್ದರೂ ಮೋಹನ್ ಭಾಗವತ್ ಅಮೆರಿಕಕ್ಕೆ ಯಾಕೆ ಹೋದ್ರು? ಮಹಾರಾಷ್ಟ್ರ ಕಾಂಗ್ರೆಸ್ ಶಾಸಕ ನಾನಾ ಪಟೋಲೆ ಪ್ರಶ್ನೆ!

US ವಲಸೆ ನೀತಿ ಮತ್ತಷ್ಟು ಕಠಿಣ: ಅರ್ಜಿದಾರರಿಗೆ ಟ್ರಂಪ್‌ ಸರ್ಕಾರ ಶಾಕ್‌: ವಿಶ್ವದಾದ್ಯಂತ VISA ಸಂದರ್ಶನಗಳಿಗೆ ಬ್ರೇಕ್‌!

'ಟಾಕ್ಸಿಕ್' ಸಿನಿಮಾ ವಿರುದ್ಧ ಸುಳ್ಳು ಮಾಹಿತಿ ಪ್ರಕಟಿಸದಂತೆ ಕೋರ್ಟ್ ತಡೆಯಾಜ್ಞೆ!

TMCಗೆ ಸೆಡ್ಡು ಹೊಡೆದ ಬಂಡಾಯ ಸಂಸದರಿಗೆ ಶಾಕ್‌: 20 ಮಂದಿಗೆ ಲೋಕಸಭಾ ಸಚಿವಾಲಯ ನೋಟಿಸ್‌, 7 ದಿನಗಳೊಳಗೆ ಉತ್ತರಿಸುವಂತೆ ಸೂಚನೆ..!