ರಾಜ್ಯ

ಘನತ್ಯಾಜ್ಯ ವಿಲೇವಾರಿಗೆ ಎಲ್ಸಿಟಾ ಮಾದರಿ ಅನುಸರಿಸಲು ಮುಂದಾದ ಬಿಬಿಎಂಪಿ

Shilpa D

ಬೆಂಗಳೂರು: ಘನತ್ಯಾಜ್ಯ ನಿರ್ವಹಣೆಗಾಗಿ ಬೃಹತ್ ಬೆಂಗಳೂರು ಮಹಾ ನಗರ ಪಾಲಿಕೆಯು ಎಲ್ಸಿಟಾ ಮಾದರಿ ಅಳವಡಿಸಿಕೊಳ್ಳಲು ಮುಂದಾಗಿದೆ.

ಬೊಮ್ಮನಹಳ್ಳಿಯಲ್ಲಿ ಘನ ತ್ಯಾಜ್ಯ ವಿಲೇವಾರಿ ಘಟಕದ ಪರಿಶೀಲನೆ ನಂತದ ಮಾತನಾಡಿದ ಬಿಬಿಎಂಪಿ ಮೇಯರ್ ಗೌತಮ್ ಕುಮಾರ್ ಜೈನ್, ಎಲ್ಲಾ ವಾರ್ಡ್ ಗಳಲ್ಲಿ ಎಲ್ ಸಿಟಾ ಮಾದರಿ ಅನುಸರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಇಂತಹ ಘಟಕಗಳನ್ನು ಹೆಚ್ಚಿನ ಪ್ರಮಾಣದಲ್ಲಿ ನಿರ್ಮಿಸಬೇಕು, ಈ ಘನ ತ್ಯಾಜ್ಯ ವಿಲೇವಾರಿ ಘಟಕಗಳಲ್ಲಿ ಕಸವನ್ನು ಕೇವಲ 24 ಗಂಟೆಗಳಲ್ಲಿ ಕಾಂಪೋಸ್ಟ್ ಆಗಿ ಮಾರ್ಪಡಿಸುತ್ತದೆ, ಬೇರೆ ಘಟಕಗಳಲ್ಲಿ 1 ತಿಂಗಳ ಸಮಯ ಬೇಕು ಎಂದು ಹೇಳಿದ್ದಾರೆ, ಘನ ತ್ಯಾಜ್ಯ ನಿರ್ವಹಣೆ, ಬೀದಿ ದೀಪಗಳ ಮೇಲ್ವಿಚಾರಣೆ, ಇ-ಆಡಳಿತ ಮತ್ತು ಸ್ಮಾರ್ಟ್ ಪಾರ್ಕಿಂಗ್ ಕಮಾಂಡ್ ಮತ್ತು ನಿಯಂತ್ರಣ ಕೇಂದ್ರವನ್ನು ಮೇಯರ್ ಪರಿಶೀಲಿಸಿದರು.

SCROLL FOR NEXT