ರಾಜ್ಯ

ಅಕ್ರಮ ಬಂಧನ, ಹಲ್ಲೆ ಪ್ರಕರಣ: ಐಪಿಎಸ್ ಅಧಿಕಾರಿ ದೇವರಾಜ್ ವಿರುದ್ಧದ ದೂರನ್ನು ರದ್ದುಪಡಿಸಿದ ಸುಪ್ರೀಂ ಕೋರ್ಟ್

Raghavendra Adiga

ನವದೆಹಲಿ: 2013 ರಲ್ಲಿ ಬೆಂಗಳೂರು ಮೆಟ್ರೋಪಾಲಿಟನ್ ಟಾಸ್ಕ್ ಫೋರ್ಸ್ (ಬಿಎಂಟಿಎಫ್) ನ ಎಸ್ಪಿ ಆಗಿ ಕಾರ್ಯನಿರ್ವಹಿಸುತ್ತಿದ್ದಾಗ ಪ್ರಕರಣವೊಂದರ ತನಿಖೆಯ ವೇಳೆ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಕರ್ನಾಟಕ ಐಪಿಎಸ್ ಅಧಿಕಾರಿ ಡಿ ದೇವರಾಜ್ ವಿರುದ್ಧ ದಾಖಲಾಗಿದ್ದ ದೂರನ್ನು ಸುಪ್ರೀಂ ಕೋರ್ಟ್ ರದ್ದುಪಡಿಸಿದೆ.

ಜಸ್ಟೀಸ್ ಆರ್​​.ಭಾನುಮತಿ ಹಾಗೂ ಇಂದಿರಾ ಬ್ಯಾನರ್ಜಿ ಅವರಿದ್ದ ಪೀಠ ವಿಚಾರಣೆ ನಡೆಸಿ ದೂರನ್ನು ರದ್ದು ಮಾಡಿದೆ. 

ಕರ್ತವ್ಯದಲ್ಲಿರುವ ಅಧಿಕಾರಿ ಒಂದೊಮ್ಮೆ ತಮ್ಮ ವ್ಯಾಪ್ತಿ ಮೀರಿ ವರ್ತಿಸಿದ್ದರೂ ಅವರ ವಿಚಾರಣೆ ನಡೆಸಲು ಸರ್ಕಾರದ ಅನುಮತಿ ಕಡ್ಡಾಯವಾಗಿದೆ ಎಂದು ಹೇಳಿರುವ ಕೋರ್ಟ್ ಪ್ರಕರಣವನ್ನು ಇತ್ಯರ್ಥ ಮಾಡಿದೆ.

ಓವೈಸ್ ಶಬ್ಬೀರ್ ಹುಸೇನ್ ಎನ್ನುವಾತ ತಾನು ಎಂದೂ ಮಾಡದ ಕಳ್ಳತನದ ಆರೋಪ ಹೊರಿಸಿ ಕಾನೂನುಬಾಹಿರವಾಗಿ ಬಂಧನ ಮಾಡಲಾಗಿದೆ. ಅಲ್ಲದೆ ಪೋಲೀಸರು ನನಗೆ ಕಿರುಕುಳ ನೀಡಿದ್ದರು. ಪ್ರಕರಣಕ್ಕೆ ಸಂಬಂಧಿಸಿ ಅಧಿಕಾರಿಯು ತನ್ನನ್ನು ಥಳಿಸಿ, ನಿಂದಿಸಿ ಬಂಧಿಸಿದ್ದರೆಂದು ದೂರಿನಲ್ಲಿ ವಿವರಿಸಿದ್ದನು. ಆದರೆ ಪೋಲೀಸ್ ಅಧಿಕಾರಿ ದೇವರಾಜ್ ತಮ್ಮ ವಿರುದ್ಧದ ಪ್ರಕರಣ ರದ್ದತಿ ಕೋರಿ ಹೈಕೋರ್ಟ್ ಮೊರೆ ಹೊಕ್ಕರು. 2018 ಜನವರಿ 31 ರಂದು ಹೈಕೋರ್ಟ್ ಪ್ರಕರಣ ರದ್ದು ಮಾಡಲು ನಿರಾಕರಿಸಿತ್ತು.
 

SCROLL FOR NEXT