ಸಂಗ್ರಹ ಚಿತ್ರ 
ರಾಜ್ಯ

ಗಂಗಾವತಿ: ಫೇಸ್‍ಬುಕ್‍ನಲ್ಲಿ ಪ್ರಧಾನಿ ಮೋದಿಗೆ ಸೀರೆಯುಡಿಸಿದ ಯುವಕನ ಬಂಧನ!

ಫೇಸ್‍ಬುಕ್‍ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸೀರೆಯುಡಿಸಿ ಸಂಭ್ರಮಿಸಿ ವಿಕೃತಿ ಮೆರೆದ ಯುವಕನೊಬ್ಬ ಇದೀಗ ಶಹರ ಪೊಲೀಸರ ಕೈಗೆ ಸಿಕ್ಕು ಅಂದರ್ ಆದ ಘಟನೆ ನಡೆದಿದೆ.

ಗಂಗಾವತಿ: ಫೇಸ್‍ಬುಕ್‍ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸೀರೆಯುಡಿಸಿ ಸಂಭ್ರಮಿಸಿ ವಿಕೃತಿ ಮೆರೆದ ಯುವಕನೊಬ್ಬ ಇದೀಗ ಶಹರ ಪೊಲೀಸರ ಕೈಗೆ ಸಿಕ್ಕು ಅಂದರ್ ಆದ ಘಟನೆ ನಡೆದಿದೆ.

ದೇಶದ ಪ್ರಧಾನಿಯಾದ ನರೇಂದ್ರ ಮೋದಿ ಅವರ ವ್ಯಕ್ತಿತ್ವಕ್ಕೆ ಧಕ್ಕೆಯಾಗುವ ರೀತಿಯಲ್ಲಿ ಚಿತ್ರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಪೊಲೀಸರು ಯುವಕನಿಗೆ ಬೆಂಡೆತ್ತುತ್ತಿದ್ದಾರೆ.

ಗಂಗಾವತಿ ನಗರದ ನೈಯಿಮ್ ಆಹ್ಮದ್ ಎಂಬ ಯುವಕ, ಮೋದಿ ಅವರಿಗೆ ಸೀರೆಯುಡಿಸಿ ಅದನ್ನು ಅಕಾಶ್, ಪೃಥ್ವಿ ಎಂಬ ಯುವಕರಿಗೆ ಪೋಸ್ಟ್ ಮಾಡಿದ್ದಾನೆ. 'ನೋಡಿ ನಿಮ್ ಪ್ರೀತಿಯ ಗೆಳತಿ' ಹೇಗಿದ್ದಾರೆ ಎಂದು ಟ್ಯಾಗ್ಲೈನ್ ಬರೆದು ಕಳಿಸಿದ್ದಾನೆ.  

ಫೇಸ್ಬುಕ್ನಲ್ಲಿ ಹರಿದಾಡಿದ ಈ ಸಂದೇಶ ಸಾಕಷ್ಟು ಶೇರ್ ಆಗಿದ್ದು, ಇದನ್ನು ಗಮನಿಸಿದ ನಗರದ ಶಿವಪ್ಪ ಮಾದರ್ ಎಂಬ ಯುವಕ ಇದೀಗ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ದೂರು ಆಧಾರಿಸಿ ಇದೀಗ ಯುವಕನನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸಿದ್ದಾರೆ.

ವರದಿ: ಶ್ರೀನಿವಾಸ .ಎಂ.ಜೆ

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಸಂಘರ್ಷಕ್ಕೆ ಮಾನವೀಯತೆ ಬಲಿಯಾಗಬಾರದು': ಗಾಜಾ ಶಾಂತಿ ಯೋಜನೆಗೆ ಪ್ರಧಾನಿ ಮೋದಿ ಬೆಂಬಲ

AI, ಕೃಷಿ, ಸೈಬರ್ ಭದ್ರತೆ, UPI ಸೇರಿದಂತೆ ಸರಣಿ ಒಪ್ಪಂದಗಳಿಗೆ ಭಾರತ ಮತ್ತು ಇಸ್ರೇಲ್ ಸಹಿ

ಹೆಲಿಪ್ಯಾಡ್, ಸ್ವಿಮ್ಮಿಂಗ್ ಪೂಲ್, ಜಿಮ್: ಅನಿಲ್ ಅಂಬಾನಿಯ 3,716 ಕೋಟಿ ರೂ. ಬೆಲೆಬಾಳುವ 17 ಅಂತಸ್ತಿನ ಕಟ್ಟಡ 'Abode ಇಡಿ ವಶಕ್ಕೆ!

T20 World Cup 2026: ವೆಸ್ಟ್ ಇಂಡೀಸ್ ವಿರುದ್ಧ ದಕ್ಷಿಣ ಆಫ್ರಿಕಾಕ್ಕೆ ಭರ್ಜರಿ ಜಯ; ಈ ಗೆಲುವಿಗಾಗಿ ಪರಿತಪಿಸುತ್ತಿತ್ತು ಭಾರತ!

ಕನ್ನಡ ಸಿನಿಮಾ ನಿರ್ದೇಶಕನ ಅಪಹರಿಸಿ, ಹಲ್ಲೆ: ನಟಿ ಸೇರಿದಂತೆ 11 ಜನರ ಬಂಧನ

SCROLL FOR NEXT