ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಜ್ಯ

ಕೋವಿಡ್ 19: ಇತರ ಆಸ್ಪತ್ರೆಗಳಿಗೆ ವೈದ್ಯರು ಮತ್ತು ದಾದಿಯರ ನೆರವು ಒದಗಿಸಲು ಬಿಎಂ‌ಸಿಆರ್‌ಐ ಕ್ರಮ!

ಬೆಂಗಳೂರಿನಲ್ಲಿ ಕೊರೋನಾ ವೈರಸ್ ಪ್ರಕರಣಗಳು ಹೆಚ್ಚಾಗುತ್ತಿದ್ದಂತೆ, ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ (ಬಿಎಂಸಿಆರ್ಐ) ವೈದ್ಯರು ಮತ್ತು ದಾದಿಯರನ್ನು ಇತರ ಆಸ್ಪತ್ರೆಗಳು ಮತ್ತು ಕೋವಿಡ್ ಆರೈಕೆ ಕೇಂದ್ರಗಳಿಗೆ ನಿಯೋಜಿಸುತ್ತಿದೆ.

ವೈದ್ಯರು
Vishwanath S
Updated On : 29 Jun 2020, 1:51 pm

ಬೆಂಗಳೂರು: ಬೆಂಗಳೂರಿನಲ್ಲಿ ಕೊರೋನಾ ವೈರಸ್ ಪ್ರಕರಣಗಳು ಹೆಚ್ಚಾಗುತ್ತಿದ್ದಂತೆ, ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ (ಬಿಎಂಸಿಆರ್ಐ) ವೈದ್ಯರು ಮತ್ತು ದಾದಿಯರನ್ನು ಇತರ ಆಸ್ಪತ್ರೆಗಳು ಮತ್ತು ಕೋವಿಡ್ ಆರೈಕೆ ಕೇಂದ್ರಗಳಿಗೆ ನಿಯೋಜಿಸುತ್ತಿದೆ.

ಈ ಮೂಲಕ ಅವರಿಗೆ ಕೆಲಸದ ಸಮಯವನ್ನು ಹೆಚ್ಚಿಸಲಾಗಿದೆ. ಸಾಮಾನ್ಯವಾಗಿ ಅವರು ಏಳು ದಿನಗಳವರೆಗೆ ಕೆಲಸ ಮಾಡುತ್ತಾರೆ. ನಂತರ 14 ದಿನ ಕ್ವಾರಂಟೈನ್ ನಲ್ಲಿರಬೇಕಿತ್ತು. ಈಗ ಅದನ್ನು 7 ದಿನಕ್ಕೆ ಇಳಿಸಲಾಗಿದೆ ಎಂದರು. 

ವಿಕ್ಟೋರಿಯಾ ಆಸ್ಪತ್ರೆಯ ಕೋವಿಡ್ -19ರ ಕಾರ್ಯಪಡೆಯ ಮುಖ್ಯಸ್ಥ ಮತ್ತು ನೋಡಲ್ ಅಧಿಕಾರಿ ಡಾ. ಸ್ಮಿತಾ ಸೆಗು ಮಾತನಾಡಿ, “ನಾವು ನಮ್ಮ ಸಿಬ್ಬಂದಿಯನ್ನು ರಾಜೀವ್ ಗಾಂಧಿ ಇನ್ಸ್ಟಿಟ್ಯೂಟ್ ಆಫ್ ಎದೆ ರೋಗಗಳಿಗೆ, ಬೌರಿಂಗ್ ಆಸ್ಪತ್ರೆ, ಹಜ್ ಭವನಕ್ಕೆ ಕಳುಹಿಸುತ್ತಿದ್ದೇವೆ ಎಂದರು. ಇದೇ ವೇಳೆ ನಗರದಲ್ಲಿ ಕಣ್ಗಾವಲು ಮತ್ತು ತಪಾಸಣೆ ಚಟುವಟಿಕೆಗಳಿಗಾಗಿ ತಮ್ಮ ಸಮುದಾಯ ಔಷಧ ವಿಭಾಗದ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಅವರು ಹೇಳಿದ್ದಾರೆ.

Advertisement

Advertisement

ಇತರ ಆಸ್ಪತ್ರೆಗಳಿಗೆ ಸಿಬ್ಬಂದಿಯನ್ನು ಪೂರೈಸುವುದರಿಂದ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಖಾಲಿ ಹುದ್ದೆಗಳು ಸೃಷ್ಟಿಯಾಗುತ್ತದೆಯೇ ಎಂದು ಕೇಳಿದಾಗ, ಡಾ. ಸೆಗು ಅವರು ಇದೀಗ ಸಾಕಷ್ಟು ಸಿಬ್ಬಂದಿಗಳು ಇದ್ದಾರೆ. ಆದರೆ ಭವಿಷ್ಯದಲ್ಲಿ ಹೆಚ್ಚಿನ ರೋಗಿಗು ದಾಖಲಾದರೆ ಅವರಿಗೆ ಸಿಬ್ಬಂದಿ ಕೊರತೆ ಇರುತ್ತದೆ ಎಂದರು. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement